ದರ್ಶನ್ 
ಸಿನಿಮಾ ಸುದ್ದಿ

ಚಕ್ರವರ್ತಿ ಬಿಡುಗಡೆ ದಿನಾಂಕದ ಬಗ್ಗೆ ಮುಸುಕಿನ ಛಾಯೆ

ದರ್ಶನ್ ನಟನೆಯ 'ಚಕ್ರವರ್ತಿ' ಚಿತ್ರೀಕರಣ ಕೊನೆಯ ಹಂತಕ್ಕೆ ತಲುಪಿದ್ದು, ಇನ್ನು ಹದಿನೈದು ದಿನಗಳಲ್ಲಿ ಸಂಪೂರ್ಣಗೊಳ್ಳಲಿದೆ.

ಬೆಂಗಳೂರು: ದರ್ಶನ್ ನಟನೆಯ 'ಚಕ್ರವರ್ತಿ' ಚಿತ್ರೀಕರಣ ಕೊನೆಯ ಹಂತಕ್ಕೆ ತಲುಪಿದ್ದು, ಇನ್ನು ಹದಿನೈದು ದಿನಗಳಲ್ಲಿ ಸಂಪೂರ್ಣಗೊಳ್ಳಲಿದೆ. 
ನಟ ದರ್ಶನ್ ಪಾತ್ರದ ಪರಿಚಯಾತ್ಮಕ ಹಾಡಿನ ಚಿತ್ರೀಕರಣಕ್ಕೆ ತೆರಳಿದ್ದ ನಿರ್ದೇಶಕ ಚಿಂತನ್ ಮತ್ತು ತಂಡ ಬ್ಯಾಂಗ್ಕಾಕ್ ನಿಂದ ಹಿಂದಿರುಗಿದ್ದು, ಡಬ್ಬಿಂಗ್ ಕೆಲಸಗಳಿಗೆ ಅಣಿಯಾಗುತ್ತಿದೆ. ದರ್ಶನ್ ಕೊನೆಯ ಹಂತದ ಚಿತ್ರೀಕರಣದಲ್ಲಿ ಭಾಗಿಯಾಗುತ್ತಿದ್ದಂತೆಯೇ, ಚಿತ್ರೀಕರಣದ ನಂತರದ ಕೆಲಸಗಳು ಕೂಡ ಸಮಾನಾಂತರವಾಗಿ ನಡೆಯಲಿವೆ. 
"ಎಲ್ಲವು ಯೋಜನೆಯಂತೆ ನಡೆಯುತ್ತಿದೆ. ಈ ಸಿನೆಮಾದಲ್ಲಿ ಅತಿ ದೊಡ್ಡ ತಾರಾಗಣವಿದೆ ಮತ್ತು ಡಬ್ಬಿಂಗ್ ಕೆಲಸ ಹೆಚ್ಚಿರುತ್ತದೆ" ಎನ್ನುವ ಚಿಂತನ್ ಸಿನೆಮಾ ಸಂಪೂರ್ಣಗೊಳ್ಳುವವರೆಗೆ ಬಿಡುಗಡೆ ದಿನಾಂಕ ಘೋಷಿಸುವುದಕ್ಕೆ ಹಿಂಜರಿಯುತ್ತಾರೆ. 
"ನಾವು ಗುರಿಯೊಂದನ್ನು ಇಟ್ಟುಕೊಂಡು ಅದರತ್ತ ಮುನ್ನುಗ್ಗಿದ್ದೇವೆ. ಆದರೆ ಬಿಡುಗಡೆ ದಿನಾಂಕದ ಮಾತನಾಡಲು ಈಗ ಕಷ್ಟ. ನನ್ನ ಮುಂದಿನ ಯೋಜನೆ ಆಡಿಯೋ ಬಿಡುಗಡೆ. ಸಿನೆಮಾ ಸಿದ್ಧವಾದ ಮೇಲೆ ಬಿಡುಗಡೆ ದಿನಾಂಕ ಘೋಷಿಸಲಿದ್ದೇವೆ" ಎನ್ನುತ್ತಾರೆ.
ದೀಪಾ ಸನ್ನಿಧಿ ನಾಯಕನಟಿಯಾಗಿ ಕಾಣಿಸಿಕೊಂಡಿದ್ದು, ದರ್ಶನ ಸಹೋದರ ದಿನಕರ್ ತೂಗುದೀಪ್ ಖಳನಾಯಕನ ಪಾತ್ರದಲ್ಲಿ ಕಾಣಿಸಿಕೊಳಲಿದ್ದಾರೆ. ಈ ಸಿನೆಮಾ ಇದೆ ವರ್ಷ ಬಿಡುಗಡೆಯಾದರೆ, ಇದೆ ವರ್ಷ ಬಿಡುಗಡೆಯಾದ ದರ್ಶನ ಅವರ ನಾಲ್ಕನೇ ಸಿನೆಮಾ ಇದಾಗಲಿದೆ. 
ಸೃಜನ್ ಲೋಕೇಶ್, ಆದಿತ್ಯ, ಕುಮಾರ್ ಬಂಗಾರಪ್ಪ, ಮುಂತಾದವರು ತಾರಾಗಣದ ಭಾಗವಾಗಿದ್ದು, ಅರ್ಜುನ್ ಜನ್ಯ ಅವರ ಸಂಗೀತ ಚಿತ್ರಕ್ಕಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Operation Sindoor; Kirana Hills ಪರಮಾಣು ನೆಲೆಗೆ ಅಪ್ಪಳಿಸಿದ ಭಾರತದ ಡ್ರೋನ್? ಬೆಚ್ಚಿಬಿದ್ದ ಪಾಕಿಸ್ತಾನ..! Indian Army ಹೇಳಿದ್ದೇನು?

ನಿರ್ಬಂಧದ ಹೊರತಾಗಿಯೂ ರಷ್ಯಾದಲ್ಲಿ ಇಳಿದ ಅಮೆರಿಕದ C-17 ಮಿಲಿಟರಿ ವಿಮಾನ: ಮಿಷನ್ ಮಾತ್ರ ನಿಗೂಢ!

ನೀಟ್ ಪ್ರತಿಭಟನಾಕಾರರ ಮೇಲೆ ಪೊಲೀಸ್ ದೌರ್ಜನ್ಯ ಆರೋಪ: ಚರ್ಚೆಗೆ ವಿಪಕ್ಷಗಳ ಪಟ್ಟು, ಸಂಸದೀಯ ಸಮಿತಿ ಸಭೆಯಲ್ಲಿ ತೀವ್ರ ವಾಗ್ವಾದ!

2nd Test: ‘ಶ್ರೀಲಂಕಾ ಆಟಗಾರರ ವರ್ತನೆ ವೃತ್ತಿಪರವಾಗಿರಲಿಲ್ಲ’: ಬ್ಯಾಡ್ ಲೈಟ್ ವಿವಾದಕ್ಕೆ Sanjay Manjrekar ಕಿಡಿ

‘ಪ್ರಸಿದ್ಧ್ ಕೃಷ್ಣ ವಿಶ್ವದರ್ಜೆಯ ಬೌಲರ್ ಆಗಿ ಮಾರ್ಪಟ್ಟಿದ್ದಾರೆ’: ಕನ್ನಡಿಗನ ಶ್ಲಾಘಿಸಿದ ದಕ್ಷಿಣ ಆಫ್ರಿಕಾ ಮಾಜಿ ವೇಗಿ Morne Morkel