ರಾಜವರ್ಧನ್ 
ಸಿನಿಮಾ ಸುದ್ದಿ

'ನಟನ ಮಗನೆಂಬ ಕಾರಣಕ್ಕೆ ನನಗೇನು ಕೆಂಪು ಹಾಸಿನ ಸ್ವಾಗತ ಸಿಗುವುದಿಲ್ಲ': ರಾಜವರ್ಧನ್

ಕನ್ನಡದ ಖ್ಯಾತ ಹಾಸ್ಯ ನಟ ಡಿಂಗ್ರಿ ನಾಗರಾಜ್ ಅವರ ಪುತ್ರ ರಾಜವರ್ಧನ್ 'ಫ್ಲೈ' ಸಿನೆಮಾದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಬೇಕಿತ್ತು. ಆದರೆ ಕಾರಣಾಂತರಗಳಿಂದ ಆ ಸಿನೆಮಾದ...

ಬೆಂಗಳೂರು: ಕನ್ನಡದ ಖ್ಯಾತ ಹಾಸ್ಯ ನಟ ಡಿಂಗ್ರಿ ನಾಗರಾಜ್ ಅವರ ಪುತ್ರ ರಾಜವರ್ಧನ್ 'ಫ್ಲೈ' ಸಿನೆಮಾದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಬೇಕಿತ್ತು. ಆದರೆ ಕಾರಣಾಂತರಗಳಿಂದ ಆ ಸಿನೆಮಾದ ಚಿತ್ರೀಕರಣ ಸ್ಥಗಿತಗೊಂಡಿದೆ "ನಿರ್ಮಾಣದ ತೊಂದರೆಗಳಿಂದ 'ಫ್ಲೈ' ಸಿನೆಮಾದ ಚಿತ್ರೀಕರಣದಲ್ಲಿ ಅಡಚಣೆ ಉಂಟಾಗಿದೆ" ಎನ್ನುತ್ತಾರೆ ರಾಜವರ್ಧನ್. 
ಈಗ ಮತ್ತೊಂದು ಬಹುನಟರ ಚಿತ್ರವೊಂದರಲ್ಲಿ ನಟಿಸಲು ಅವಕಾಶ ಸಿಕ್ಕಿದ್ದು, ರಾಜವರ್ಧನ್ ಖುಷಿಯಿಂದಿದ್ದಾರೆ. 'ನೂರೊಂದು ನೆನಪು' ಸಿನೆಮಾದಾ ಚಿತ್ರೀಕರಣವನ್ನು ರಾಜವರ್ಧನ್ ಮುಗಿಸಿದ್ದಾರೆ. 
ಕುಮಾರೇಶ್ ನಿರ್ದೇಶಿಸಿರುವ ಈ ಚಿತ್ರದಲ್ಲಿ ಚೇತನ್ ಮತ್ತು ಮೇಘನಾ ರಾಜ್ ಜೊತೆಗೆ ರಾಜವರ್ಧನ್ ನಟಿಸಿದ್ದಾರೆ. "ನಾನು 'ಫ್ಲೈ' ಸಿನೆಮಾದಲ್ಲಿ ನೂರಕ್ಕೆ ನೂರು ಪ್ರತಿಶತ ತೊಡಗಿಸಿಕೊಂಡಿದ್ದರು, ನೂರೊಂದು ನೆನಪು ಸಿನೆಮಾದಲ್ಲಿ ಮತ್ತೆ ಮೊದಲಿನಿಂದ ಪ್ರಾರಂಭಿಸಬೇಕಾಯಿತು" ಎನ್ನುತ್ತಾರೆ. 
ಈಗ ನಟ 'ಇರಾ' ಎಂಬ ಹೊಸ ನಿನೆಮಾದಲ್ಲಿ ಕೂಡ ನಟಿಸಲಿದ್ದಾರೆ. "ಪವನ್ ಒಡೆಯರ್ ಅವರ ಬ್ಯಾನರ್ ಇಂದ ಈ ಸಿನೆಮಾ ನಿರ್ಮಾಣ ಆಗುತ್ತಿರುವುದರಿಂದ ಇದನ್ನು ಆಯ್ಕೆ ಮಾಡಿಕೊಂಡೆ" ಎನ್ನುತ್ತಾರೆ ನಟ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಎಲ್ಲವನ್ನೂ ತಡೆಯಲು ಸಾಧ್ಯವಿಲ್ಲ': CJP ದೆಹಲಿ ಪ್ರತಿಭಟನೆಗೆ ನಿರ್ಬಂಧ ಕುರಿತು ಕೇಂದ್ರಕ್ಕೆ ಸುಪ್ರೀಂ ಕೋರ್ಟ್ ಚಾಟಿ

ಮತಗಳ್ಳತನವೇ ಆಗಿದ್ದರೆ ಕೇರಳ Congress CM, ತಮಿಳುನಾಡು CM ಕೂಡ ಮತಗಳ್ಳರೇ: ಚೇತನ್ ಅಹಿಂಸಾ

'ಆಶ್ರಮಕ್ಕೆ ಬರಲು ಹಣ ಪಡೆದ ಕೊಹ್ಲಿ' ಆರೋಪ: ಉಲ್ಟಾ ಹೊಡೆದ Falahari Maharaj, ಕ್ಷಮೆಯಾಚನೆ! video

26 ಸೆಕೆಂಡ್ ನಲ್ಲೇ ಗ್ರೇಟ್ ಎಸ್ಕೇಪ್; ಮೃಗಾಲಯ ವೀಕ್ಷಣೆಗೆ ಬಂದ ಜೋಡಿ, ಗಂಡ ಬೈಕ್ ಪಾರ್ಕ್ ಮಾಡೋ ಗ್ಯಾಪಲ್ಲಿ 'ಲವರ್ ಜೊತೆ ಪತ್ನಿ ಪರಾರಿ'! Video ವೈರಲ್!

ಅ.10ರಂದು CJP ಪ್ರತಿಭಟನೆ ಹಿನ್ನೆಲೆ ದೆಹಲಿಗೆ ತೆರಳುವ ಹಲವು ರೈಲುಗಳು ರದ್ದು, ಪ್ರಯಾಣಿಕರಿಗೆ ಸಂಕಷ್ಟ!