ಮನೋರಂಜನ್ 
ಸಿನಿಮಾ ಸುದ್ದಿ

ತಂದೆಯ ಹಾಡಿಗೆ ಹೆಜ್ಜೆ ಹಾಕಿ ಮತ್ತೆ ಇತಿಹಾಸ ಬರೆಯಲು ಮುಂದಾದ ಮನೋರಂಜನ್

ಭರತ್ ನಿರ್ದೇಶನದಲ್ಲಿ ಮನೋರಂಜನ್ ನಟಿಸುತ್ತಿರುವ 'ಸಾಹೇಬ' ಸಿನೆಮಾ ರವಿಚಂದ್ರನ್ ಅಭಿಮಾನಿಗಳನ್ನು ಕೂಡ ಸೆಳೆಯುವ ನಿಟ್ಟಿನಲ್ಲಿದೆ. ಕ್ರೇಜಿ ಸ್ಟಾರ್ ಅವರ ಪ್ರಖ್ಯಾತ ಹಾಡೊಂದನ್ನು ಪುತ್ರನ

ಬೆಂಗಳೂರು: ಭರತ್ ನಿರ್ದೇಶನದಲ್ಲಿ ಮನೋರಂಜನ್ ನಟಿಸುತ್ತಿರುವ 'ಸಾಹೇಬ' ಸಿನೆಮಾ ರವಿಚಂದ್ರನ್ ಅಭಿಮಾನಿಗಳನ್ನು ಕೂಡ ಸೆಳೆಯುವ ನಿಟ್ಟಿನಲ್ಲಿದೆ. ಕ್ರೇಜಿ ಸ್ಟಾರ್ ಅವರ ಪ್ರಖ್ಯಾತ ಹಾಡೊಂದನ್ನು ಪುತ್ರನ ಸಿನೆಮಾದಲ್ಲಿ ಬಳಸಲು ನಿರ್ದೇಶಕ ಮುಂದಾಗಿದ್ದಾರೆ. 'ಯಾರೆ ನೀನು ರೋಜಾ ಹೂವೆ' ಚಿತ್ರಕ್ಕೆ ಮನೋರಂಜನ್ ಹೆಜ್ಜೆ ಹಾಕಲಿದ್ದಾರೆ. ಇದು 1985 ರಲ್ಲಿ ರಾಜೇಂದ್ರ ಬಾಬು ನಿರ್ದೇಶಿಸಿದ್ದ 'ನಾನು ನನ್ನ ಹೆಂಡ್ತಿ' ಸಿನೆಮಾದ ಹಾಡು. 
"ರವಿಚಂದ್ರನ್ ತಮ್ಮ ವೃತ್ತಿಜೀವನದಲ್ಲಿ ಹಲವಾರು ಬ್ಲಾಕ್ ಬಸ್ಟರ್ ಹಾಡುಗಳನ್ನು ನೀಡಿದ್ದಾರೆ. ಈ ಹಾಡು ಕಥೆಗೆ ಹೊಂದಿಕೊಳ್ಳುವುದರಿಂದ ನಿರ್ದೇಶಕ ಇದನ್ನು ಆಯ್ಕೆ ಮಾಡಿಕೊಂಡರು" ಎನ್ನುವ ಮೂಲಗಳು ಸ್ಕ್ರಿಪ್ಟ್ ನಲ್ಲಿ ಅವಕಾಶ ಇಲ್ಲದೆ ಹೋದದ್ದಕ್ಕೆ ಈ ಸಿನೆಮಾದಲ್ಲಿ ರವಿಚಂದ್ರನ್ ಅವರನ್ನು ಕರೆತರಲು ಸಾಧ್ಯವಾಗಲಿಲ್ಲ ಎನ್ನುತ್ತಾರೆ. 
ಈ ಹಾಡನ್ನು ಮರುಸೃಷ್ಟಿಸುವುದಕ್ಕೆ ಎಷ್ಟು ಉತ್ಸಾಹ ಇದೆಯೋ ಅಷ್ಟೇ ಭಯ ಕೂಡ ಇದೆ ಮತ್ತು ಇದಕ್ಕೆ ಮುರಳಿ ಮಾಸ್ಟರ್ ನೃತ್ಯ ನಿರ್ದೇಶನ ಮಾಡಿದ್ದಾರೆ ಎನ್ನುವ ಮನೋರಂಜನ್ "80 ರಿಂದ ಈ ಹಾಡನ್ನು ಎಲ್ಲ ಬಲ್ಲರು. ಇದು ಇಂದಿಗೂ ಜನಪ್ರಿಯ. ಮೂಲ ಎಂದಿಗೂ ಅತ್ಯುತ್ತಮ ಮತ್ತು ಈಗ ನಮ್ಮಲ್ಲಿ ಎರಡು ಮರುಆವೃತ್ತಿಗಳಿವೆ. ಈ ಹಾಡಿಗೆ ಹೆಜ್ಜೆ ಹಾಕಿರುವುದಕ್ಕೆ ನಾನು ಅದೃಷ್ಟವಂತ ಆದರೆ ಜನ ನನ್ನ ತಂದೆಯವರೊಂದಿಗೆ ಹೋಲಿಕೆ ಮಾಡಲು ಪ್ರಾರಂಭಿಸುತ್ತಾರೆ. ಹಳೆಯ ಆವೃತ್ತಿಗಿಂತಲೂ ಚೆನ್ನಾಗಿ ಮಾಡಲು ಪ್ರಯತ್ನಿಸುತ್ತಿದ್ದೇವೆ" ಎನ್ನುತ್ತಾರೆ. 
ಜಯಣ್ಣ-ಭೋಗೇಂದ್ರ ನಿರ್ಮಿಸುತ್ತಿರುವ ಈ ಸಿನೆಮಾದಲ್ಲಿ ಶಾನ್ವಿ ಶ್ರೀವಾಸ್ತವ ನಾಯಕ ನಟಿ. ಹಿರಿಯ ನಟಿ ಲಕ್ಷ್ಮಿ ಕೂಡ ತಾರಾಗಣದ ಭಾಗವಾಗಿದ್ದು, ವಿ ಹರಿಕೃಷ್ಣ ಸಂಗೀತ ನೀಡಿದ್ದಾರೆ. ರವಿಚಂದ್ರನ್ ಅವರ ಬಹುತೇಕ ಸಿನೆಮಾಗಳ ಛಾಯಾಗ್ರಾಹಕ ಜಿ ಎಸ್ ವಿ ಸೀತಾರಾಮ್ ಅವರ ಸಿನೆಮ್ಯಾಟೋಗ್ರಫಿ ಇದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಅವಧಿಗೂ ಮುನ್ನವೇ ಕೇಂದ್ರ ಸಚಿವ ಮತ್ತು ರಾಜ್ಯಸಭಾ ಸದಸ್ಯ ಸ್ಥಾನಕ್ಕೆ BJP ನಾಯಕ ಮುರುಗನ್ ರಾಜಿನಾಮೆ: PM ಮೋದಿಗೆ 5 ಪುಟಗಳ ಪತ್ರ!

'ಇಂಡಿಯಾ' ಮೈತ್ರಿಕೂಟದ ಒಗ್ಗಟ್ಟು ಮುರಿಯುತ್ತಿದೆಯೇ? ಜ್ಞಾನೇಶ್ ಕುಮಾರ್ ವಿರುದ್ಧ ಸುಪ್ರೀಂಗೆ ಅರ್ಜಿ, 4 ಪ್ರಮುಖ ಪಕ್ಷಗಳು "ದೂರ ದೂರ"

'ನೀನು ಭಯೋತ್ಪಾದಕ ಇಲ್ಲಿಂದ ಹೋಗು': ಅಮೆರಿಕದಲ್ಲಿ Nobel ಯೂನಸ್ ವಿರುದ್ಧ ಬಾಂಗ್ಲಾ ವಲಸಿಗರಿಂದ ಘೋಷಣೆ, Video

ಮುಖ್ಯ ಚುನಾವಣಾ ಆಯುಕ್ತರಿಗೆ ಪದ್ಮ ಪ್ರಶಸ್ತಿಗಳೇ ಲಂಚ: ಕೇಂದ್ರ ಸಚಿವ ಪಿಯೂಷ್ ಗೋಯಲ್ ಸ್ಫೋಟಕ ಹೇಳಿಕೆ

ಎಲ್ಲಾ ಪ್ರತಿಭಟನೆಗಳೂ ಒಂದೇ: 'ಚಾಯ್ ಪೆ ಚರ್ಚೆ' ಗೂ ಮುನ್ನ ರಾಹುಲ್ ಹೇಳಿಕೆ!