ಬೆಂಗಳೂರು: ಶಿವರಾಜ್ ಕುಮಾರ್ ಅಭಿನಯದ 'ಬಂಗಾರ s/೦ ಬಂಗಾರದ ಮನುಷ್ಯ' ಸಿನೆಮಾದ ಚಿತ್ರತಂಡ ಕಳೆದ ವಾರ ಎರಡು ಡ್ಯುಯೆಟ್ ಹಾಡುಗಳಿಗೆ ಚಿತ್ರೀಕರಣ ನಡೆಸಿ ಸದ್ಯಕ್ಕೆ ಮಂಡ್ಯದಲ್ಲಿ ನೆಲೆಯೂರಿದೆ. ಈಗ ರೈತರ ಉದ್ದೇಶಿಸಿ ಸಂಭ್ರಮದಲ್ಲಿ ಮುಂದಿನ ಹಾಡಿನ ಚಿತ್ರೀಕರಣದಲ್ಲಿ ನಿರತವಾಗಿದೆ.
ಶಿವರಾಜ್ ಕುಮಾರ್, ವಿದ್ಯಾ ಪ್ರದೀಪ್, ವಿಶಾಲ್ ಹೆಗಡೆ, ಸಾಧು ಕೋಕಿಲ, ಚಿಕ್ಕಣ್ಣ ಮತ್ತು ಇಡೀ ಚಿತ್ರತಂಡ ಹಸಿರುವ ಪ್ರದೇಶದಲ್ಲಿ ಈ ಹಾಡಿನ ಚಿತ್ರೀಕರಣದಲ್ಲಿ ಭಾಗಿಯಾಗಿರುವುದಕ್ಕೆ ನಿರ್ದೇಶಕ ಯೋಗಿ ಜಿ ರಾಜ್ ಉತ್ಸಾಹದಿಂದಿದ್ದಾರೆ. ಈ ಹಂತದ ಚಿತ್ರೀಕರಣದ ಬಗ್ಗೆ ಮಾತನಾಡುವ ನಿರ್ದೇಶಕ "ರಾಜಕುಮಾರ್ ನಟನೆಯ 'ಬಂಗಾರದ ಮನುಷ್ಯ' ಸಿನೆಮಾಗೂ ಈ ಸಿನೆಮಾದ ಕಥೆಗೂ ಯಾವುದೇ ಸಂಬಂಧವಿಲ್ಲ. ನಾನು ನನ್ನ ಸಿನೆಮಾವನ್ನು ದೇಶದ ರೈತರಿಗೆ ಅರ್ಪಿಸುತ್ತಿದ್ದೇನೆ. ನಾಗೇಂದ್ರ ಪ್ರಸಾದ್ ಗೀತ ರಚನೆ ಮಾಡಿರುವ "ತೆನೆಗೆ ತೆನೆ ಸಿಹಿ ಮುತ್ತು, ಹೊಸ ಗಾಳಿ ಬೀಸುವಾಗ... ಬೆವರ ಹನಿ ನಮಗ್ಗೊತ್ತು.. ರೈತ ನಮ್ಮ ತಾಯಿಯಂತೆ.. ಅವನ ಆಸ್ತಿ ನೇಗಿಲು' ಹಾಡು ರೈತರ ಗೌರವಸೂಚಕವಾಗಿ ಬರೆದಿರುವುದು" ಎಂದು ಹೇಳಿದ್ದಾರೆ.
ತಾವು ಹಳ್ಳಿಗಳಲ್ಲಿ ತಮ್ಮ ಬಾಲ್ಯ ಕಳೆದಿದ್ದನ್ನು ನೆನಪಿಸಿಕೊಳ್ಳುವ ನಿರ್ದೇಶಕ "ನಾನು ನಗರದಲ್ಲಿ ಜನಿಸಿದರು, ನನ್ನ ಬಾಲ್ಯದ ಹೆಚ್ಚಿನ ದಿನಗಳನ್ನು ತನ್ನ ತಾತ-ಅಜ್ಜಿ ಜೊತೆಗೆ ಹಳ್ಳಿಗಳಲ್ಲೇ ಕಳೆದಿದ್ದು. ನಾನು ರೈತರನ್ನು ನೋಡುತ್ತಾ ಬೆಳೆದೆ, ಆದುದರಿಂದ ಅವರನ್ನು ಚೆನ್ನಾಗಿ ಅರ್ಥ ಮಾಡಿಕೊಡಬಲ್ಲೆ" ಎನ್ನುತ್ತಾರೆ.
ಡಾ. ರಾಜಕುಮಾರ್ ಜೊತೆಗೆ ನಟಿಸಿರುವ ಹಲವು ಹಿರಿಯ ನಟರು ಈ ಸಿನೆಮಾದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಎನ್ನುವ ನಿರ್ದೇಶಕ "ಶ್ರೀನಾಥ್, ಶ್ರೀನಿವಾಸ ಮೂರ್ತಿ, ಶಿವರಾಂ ಅಣ್ಣ, ಹೊನ್ನವಳ್ಳಿ ಕೃಷ್ಣ, ಬ್ರಹಮ್ಮ ಮತ್ತು ಕುಳ್ಳಿ ಜಯಕ್ಕ ಈ ಸಿನೆಮಾದಲ್ಲಿ ನಟಿಸಲಿದ್ದಾರೆ ಎನ್ನುತ್ತಾರೆ.
ವಿ ಹರಿಕೃಷ್ಣ ಸಂಗೀತ ನೀಡಿದ್ದು, ಜೈ ಆನಂದ್ ಅವರ ಸಿನೆಮ್ಯಾಟೋಗ್ರಫಿ ಚಿತ್ರಕ್ಕಿದೆ.