ತ್ರಿಸ್ಸೂರ್: ಸಿನಿಮಾ ಮತ್ತು ಟಿವಿ ಧಾರಾವಾಹಿ ನಟಿ ರೇಖಾ ಮೋಹನ್ ಶವ ಶೋಭಾ ನಗರದ ತಮ್ಮ ಅಪಾರ್ಟ್ ಮೆಂಟ್ ನಲ್ಲಿ ಪತ್ತೆಯಾಗಿದೆ.
ಶೋಭಾ ಅವರ ಕಾರು ಚಾಲಕ ಪೊಲೀಸರಿಗೆ ವಿಷಯ ಮುಟ್ಟಿಸಿದ ನಂತರ ಪ್ರಕರಣ ಬೆಳಕಿಗೆ ಬಂದಿದೆ, ಫ್ಲ್ಯಾಟ್ ನಲ್ಲಿ ಶೋಭಾ ಮೋಹನ್ ಒಬ್ಬರೇ ವಾಸಿಸುತ್ತಿದ್ದರು. ಶನಿವಾರ ಸುಮಾರು 2 ಗಂಟೆ ವೇಳೆಗೆ ಶವ ಪತ್ತೆಯಾಗಿದೆ.
ಮರಣೋತ್ತರ ಪರೀಕ್ಷೆಗಾಗಿ ಶವವನ್ನು ಪೊಲೀಸರು ತ್ರಿಶೂರ್ ಮೆಡಿಕಲ್ ಕಾಲೇಜಿಗೆ ರವಾನಿಸಿದ್ದಾರೆ. ರೇಖಾ ಮೂಲತಃ ಕೂಡಗರಾದವರು, ಉದ್ಯಾನ್ ಪಲಕಾನ್, ನೀ ವರುವೋಲಮ್ ಮುಂತಾದ ಸಿನಿಮಾ ಸೇರಿದಂತೆ ಹಲವು ಧಾರಾವಾಹಿಗಳಲ್ಲಿ ಅಭಿನಯಿಸಿದ್ದಾರೆ. ರೇಖಾ ಪತಿ ಮೋಹನ್ ಕೃಷ್ಣ ಮಲೇಶಿಯಾ ಮೂಲದ ಉದ್ಯಮಿಯಾಗಿದ್ದಾರೆ.