ಜಾಗ್ವಾರ್ ಸಿನೆಮಾದಲ್ಲಿ ನಿಖಿಲ್ ಕುಮಾರ್ ಮತ್ತು ದೀಪ್ತಿ ಸಾಥಿ
ಬೆಂಗಳೂರು: ಹೊಸ ಹೀರೊ ಪ್ರವೇಶಕ್ಕೆ ಎಲ್ಲರ ಕಣ್ಣುಗಳು 'ಜಾಗ್ವಾರ್'ನತ್ತ ನೆಟ್ಟಿವೆ. ರಾಜಕಾರಣಿ, ನಿರ್ಮಾಪಕ ಮತ್ತು ವಿತರಕ ಎಚ್ ಡಿ ಕುಮಾರ ಸ್ವಾಮಿ ಅವರ ಪುತ್ರ ನಿಖಿಲ್ ಕುಮಾರ್ ಈ ಸಿನೆಮಾದ ಮೂಲಕ ನಾಯಕ ನಟನಾಗಿ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದು ಗಾಂಧಿನಗರದಲ್ಲಿ ಇದು ಬಹುಚರ್ಚಿತ ಸಿನೆಮಾವಾಗಿದೆ.
ಗುರುವಾರ ಸಿನೆಮಾದ ಬಿಡುಗಡೆಗೆ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದ್ದು, ಶ್ರಮದ ಕೆಲಸ ಮತ್ತು ಪ್ಯಾಷನ್ ನಿಂದ ಈ ಸಿನೆಮಾ ಸಾಧ್ಯವಾಗಿದೆ ಎನ್ನುತಾತರೆ ನಿಖಿಲ್ "ನಾನು ಮತ್ತು ಚಿತ್ರತಂಡ ಅತ್ಯುತ್ತಮವಾದದ್ದನ್ನು ನೀಡಿದ್ದೇವೆ. ಇದು ಕನ್ನಡ ಸಿನೆಮಾವನ್ನು ಮತ್ತೊಂದು ಸ್ಥರಕ್ಕೆ ತೆಗೆದೊಯ್ಯಲಿದೆ" ಎನ್ನುತ್ತಾರೆ.
"ಇವೊತ್ತು ನಾನು ಸಿನೆಮಾ ಬಗ್ಗೆ ಮಾತನಾಡಬಹುದು ಏಕೆಂದರೆ ಅದರ ಬಗ್ಗೆ ಒಂದಷ್ಟು ತಿಳಿದುಕೊಂಡಿದ್ದೇನೆ. ಇದು ನಿಲ್ಲದ ಕಲಿಕೆಯ ಪ್ರಕ್ರಿಯೆ. ನಾನು ಕಲಿತಿರುವುದರಿಂದ ಸ್ಕ್ರಿಪ್ಟ್ ನ ತಾಂತ್ರಿಕತೆ, ಸ್ಕ್ರೀನ್ ಪ್ಲೆ ಮತ್ತು ಅದು ಬದಲಾಗುವ ರೀತಿಯನ್ನು ಅರಿತಿದ್ದೇನೆ. ಈ ಪೀಳಿಗೆಯಲ್ಲಿ ಬಹಳ ಬುದ್ಧಿವಂತಿಕೆಯಿಂದ ಯೋಚಿಸಬೇಕು. ಜನರಿಗೆ ಇಷ್ಟವಾಗುವ ಸಿನೆಮಾ ಮಾಡುವುದು ಸುಲಭವಲ್ಲ. ನನ್ನ ವೈಯಕ್ತಿಕ ಅಭಿಪ್ರಾಯವೆಂದರೆ ನಮ್ಮ ಚಿತ್ರರಂಗ 4-5 ವರ್ಷ ಹಿಂದುಳಿದಿದೆ. ನಾವು ಆರೋಗ್ಯಕರ ಸ್ಪರ್ಧೆಯಿಂದ ಮುಂದುವರೆಯಬೇಕಿದೆ" ಎನ್ನುತ್ತಾರೆ ನಿಖಿಲ್.
"ನನ್ನ ತಂದೆ ನಿರ್ಮಾಪಕರಾಗಿದ್ದರು, ನನ್ನ ಕುಟುಂಬದಲ್ಲಿ ಬೇರೆ ಯಾರು ನಟರಿಲ್ಲ. ಆದುದರಿಂದ ನಟನೆ ಸವಾಲಾಗಿತ್ತು. 'ಜಾಗ್ವಾರ್'ಗೋಸ್ಕರ ಒಂದೂವರೆ ವರ್ಷ ಶ್ರಮವಹಿಸಿದ್ದೇನೆ" ಎನ್ನುತ್ತಾರೆ ನಟ.