ನಟ ಪ್ರೇಮ್ ಮತ್ತು ಪುತ್ರ ಏಕಾಂತ್ 
ಸಿನಿಮಾ ಸುದ್ದಿ

ಮೂರನೇ ಸಿನೆಮಾಗೆ ಸಹಿ ಹಾಕಿದ ನಟ ಪ್ರೇಮ್ ಪುತ್ರ ಏಕಾಂತ್

ಗೆಳೆಯರ ಮತ್ತು ಚಿತ್ರರಂಗದ ನಡುವೆ 'ಟೈಗರ್' ಎಂದೇ ಪ್ರಖ್ಯಾತನಾದ ಏಕಾಂತ್ ಕನ್ನಡ ಚಿತ್ರರಂಗದಲ್ಲಿ ಮಿಂಚುತ್ತಿರುವ ಬಾಲ ನಟ. ತಮ್ಮ ತಂದೆ ನಟ ಪ್ರೇಮ್ ಅವರ ಹಾದಿಯಲ್ಲೇ

ಬೆಂಗಳೂರು: ಗೆಳೆಯರ ಮತ್ತು ಚಿತ್ರರಂಗದ ನಡುವೆ 'ಟೈಗರ್' ಎಂದೇ ಪ್ರಖ್ಯಾತನಾದ ಏಕಾಂತ್ ಕನ್ನಡ ಚಿತ್ರರಂಗದಲ್ಲಿ ಮಿಂಚುತ್ತಿರುವ ಬಾಲ ನಟ. ತಮ್ಮ ತಂದೆ ನಟ ಪ್ರೇಮ್ ಅವರ ಹಾದಿಯಲ್ಲೇ ಹೆಜ್ಜೆ ಇರಿಸುತ್ತಿರುವ ಏಕಾಂತ್ 'ಮಾಮು ಟೀ ಅಂಗಡಿ' ಸಿನೆಮಾದ ಮೂಲಕ ಪಾದಾರ್ಪಣೆ ಮಾಡಿದ್ದರು. ನಟನೆಯನ್ನು ಗಂಭೀರವಾಗಿ ತೆಗೆದುಕೊಂಡಿರುವ ಏಕಾಂತ್, ಸದ್ದಿಲ್ಲದೇ 'ಸಾಹೇಬ' ಚಿತ್ರೀಕರಣ ಮುಗಿಸಿದ್ದು, ಇತ್ತೀಚೆಗಷ್ಟೇ ತಮ್ಮ ಮೂರನೇ ಸಿನೆಮಾ 'ರಾಮರಾಜ್ಯ'ಕ್ಕೆ ಸಹಿ ಮಾಡಿದ್ದಾರೆ. 
ತಮ್ಮ ಪುತ್ರನ ಪ್ರಗತಿಯ ಬಗ್ಗೆ ಸಂತಸದಿಂದಿರುವ ಅಪ್ಪ ಪ್ರೇಮ್ "ಅವನು ನಟನಾಗಬೇಕೆಂದು ನಾನೆಂದು ಅವನನ್ನು ನೂಕಲಿಲ್ಲ. ಅದು ಸಂಪೂರ್ಣ ಅವನೇ ಕಂಡುಕೊಂಡಿದ್ದು ಮತ್ತು ಅಷ್ಟೇ  ಶ್ರಮವಹಿಸುತ್ತಿದ್ದಾನೆ. ಇನ್ನು ಅಚ್ಚರಿಯ ವಿಷಯವೆಂದರೆ ಇದಕ್ಕೆ ಅವನು ನನ್ನ ಸಹಾಯವನ್ನು ಪಡೆಯುತ್ತಿಲ್ಲ. ಅವನು ಈಗ ಆರನೇ ತರಗತಿಯಲ್ಲಿದ್ದು, ಓದಿಗೂ ಮತ್ತು ನಟನೆಗೂ ಸಮನಾದ ಸಮಯ ನೀಡುತ್ತಾನೆ. ಅವನ ಆಸೆ ಪೂರೈಸಲು ಅವರ ತಾಯೂ ಕೂಡ ಜೊತೆಯಾಗಿದ್ದಾರೆ" ಎನ್ನುತ್ತಾರೆ. 
ಏಕನಾಥ್ ಉತ್ಸಾಹ, ತಂದೆ ಕೂಡ ಅವನ ಜೊತೆಗೆ ನಟಿಸುವಂತೆ ಮಾಡಿದೆ. "ನಮ್ಮಿಬ್ಬರನ್ನು ಒಟ್ಟಿಗೆ ತರಬಲ್ಲ ಸ್ಕ್ರಿಪ್ಟ್ ಗಾಗಿ ಎದುರುನೋಡುತ್ತಿದ್ದೇನೆ. ಆದರೆ ಇದಕ್ಕೆ ಸಮಯ ಹಿಡಿಯುತ್ತದೆ" ಎನ್ನುತ್ತಾರೆ ಪ್ರೇಮ್. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಅಮೆರಿಕಾ–ಇರಾನ್ ಶಾಂತಿ ಮಾತುಕತೆ ವಿಫಲ: ಷೇರು ಮಾರುಕಟ್ಟೆ ಮೇಲೆ ಪರಿಣಾಮ; ಸೆನ್ಸೆಕ್ಸ್ 1600 ಅಂಕ ಕುಸಿತ, ತೈಲ ಬೆಲೆ ಏರಿಕೆ..!

West-Asia war: ಅಮೆರಿಕಾ-ಇರಾನ್ ಸಂಘರ್ಷ ಮತ್ತಷ್ಟು ತೀವ್ರ; ಹಾರ್ಮುಜ್ ಜಲಸಂಧಿ ಮೇಲೆ ನೌಕಾ ದಿಗ್ಬಂಧನ, ಜಾಗತಿಕ ಮಾರುಕಟ್ಟೆಗಳಲ್ಲಿ ಹೆಚ್ಚಿದ ಆತಂಕ

ಕಾಂಗ್ರೆಸ್‌ನಲ್ಲಿ ಕುರ್ಚಿ ಕಸರತ್ತು: ದೆಹಲಿಗೆ 'ಕೈ' ಶಾಸಕರ ಪ್ರಯಾಣ, ಸಚಿವ ಸ್ಥಾನಕ್ಕಾಗಿ ಲಾಬಿ..!

'ಕೆಲವು ಸಚಿವರು ಕೈಗೂ ಸಿಗಲ್ಲ, ಫೋನಿಗೂ ಸಿಗಲ್ಲ: ದೇವಲೋಕದಿಂದ ಬಂದಂತೆ ಆಡ್ತಾರೆ; ಅಂತವರನ್ನು ಬದಲಾಯಿಸಿ ಹೊಸಬರಿಗೆ ಅವಕಾಶ ನೀಡಿ'

'ಅಲ್ಪಸಂಖ್ಯಾತರ ಚಾಂಪಿಯನ್‌ ಎನಿಸಿಕೊಂಡವರ ಡಬಲ್‌ ಗೇಮ್‌: ದಾವಣಗೆರೆಯಲ್ಲಿ ನಮ್ಮ ಅಭ್ಯರ್ಥಿಯನ್ನೇ ಸೋಲಿಸಲು ಯತ್ನ'

SCROLL FOR NEXT