ಸ್ಯಾಂಡಲ್ವುಡ್ ರಿಯಲ್ ಸ್ಟಾರ್ ಉಪೇಂದ್ರ ಅವರ 50ನೇ ಚಿತ್ರವನ್ನು ಮಾಸ್ಟರ್ ಪೀಸ್ ಖ್ಯಾತಿಯ ಮಂಜು ಮಾಂಡವ್ಯ ನಿರ್ದೇಶಿಸುತ್ತಿದ್ದಾರೆ.
ನಯ ಯಶ್ ಜತೆ ಮಾಸ್ಟರ್ ಪೀಸ್ ಚಿತ್ರ ಮಾಡಿ ಗೆದ್ದಿದ್ದ ಮಂಜು ಮಾಂಡವ್ಯ ಉಪ್ಪಿಯ ಅವರ 50ನೇ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಇನ್ನು ಈ ಚಿತ್ರವೂ ಕೂಡ ಉಪೇಂದ್ರ ಅವರ ಹೊಸ ಸ್ಟೈಲ್ ನಲ್ಲಿ ಅಲೆ ಎಬ್ಬಿಸಲಿದೆಯಂತೆ.
ಮಾಸ್ಟರ್ ಪೀಸ್ ಬಳಿಕ ಒಂದಿಷ್ಟು ದಿನ ಸುದ್ದಿಯಲ್ಲಿ ಇಲ್ಲದೇ ಉಪೇಂದ್ರ ಅವರಿಗಾಗಿ ಅಂತ ಸ್ಕ್ರಿಪ್ಟ್ ತಯಾರಿ ಮಾಡೋದರಲ್ಲಿ ಬಿಜಿಯಾಗಿದ್ದರು. ಇದೀಗ ಉಪ್ಪಿಗೆ ನಿರ್ದೇಶನ ಮಾಡೋದು ಪಕ್ಕಾ ಆಗಿದ್ದು ಫುಲ್ ಖುಷಿಯಲ್ಲಿದ್ದಾರಂತೆ ಮಂಜು ಮಾಂಡವ್ಯ. ಚಿತ್ರ ಡಿಸೆಂಬರ್ ತಿಂಗಳಲ್ಲಿ ಶೂಟಿಂಗ್ ಪ್ರಾರಂಭಿಸಲಿದೆಯಂತೆ.