ನಟ ಉಪೇಂದ್ರ 
ಸಿನಿಮಾ ಸುದ್ದಿ

ಉಪೇಂದ್ರ 50 ನೇ ಚಿತ್ರ ನಿರ್ದೇಶಿಸಲಿದ್ದಾರೆ ಅಭಿಮಾನಿ!

ಅವರು ಯುವಕರಾಗಿದ್ದಾಗ ಮಂಜು ಮಾಂಡವ್ಯ, ಥಿಯೇಟರ್ ನಲ್ಲಿ ತಮ್ಮ ನೆಚ್ಚಿನ ಹೀರೋಗಳು ತೆರೆಯ ಮೇಲೆ ಮೂಡಿದಾಗ ಶಿಳ್ಳೆ ಹೊಡೆದು ಕುಣಿದು ಕುಪ್ಪಳಿಸುತ್ತಿದ್ದರಂತೆ.

ಬೆಂಗಳೂರು: ಅವರು ಯುವಕರಾಗಿದ್ದಾಗ ಮಂಜು ಮಾಂಡವ್ಯ, ಥಿಯೇಟರ್ ನಲ್ಲಿ ತಮ್ಮ ನೆಚ್ಚಿನ ಹೀರೋಗಳು ತೆರೆಯ ಮೇಲೆ ಮೂಡಿದಾಗ ಶಿಳ್ಳೆ ಹೊಡೆದು ಕುಣಿದು ಕುಪ್ಪಳಿಸುತ್ತಿದ್ದರಂತೆ. ಕಾಲೇಜು ದಿನಗಳಲ್ಲಿ ತಮ್ಮ ನೆಚ್ಚಿನ ಹೀರೋಗಳನ್ನು ಅನುಕರಿಸಿ ವೇದಿಕೆ ಮೇಲೆ ಅಭಿನಯಿಸುತ್ತಿದ್ದರು ಕೂಡ. ನಂತರ ಹಲವು ವರ್ಷಗಳ ಪರಿಶ್ರಮದ ನಂತರ, ಸಂಭಾಷಣಕಾರರಾಗಿ ಕೊನೆಗೆ ಯಶ್ ನಟನೆಯ 'ಮಾಸ್ಟರ್ ಪೀಸ್' ಕೂಡ ನಿರ್ದೇಶಿಸಿದ ಹೆಗ್ಗಳಿಕೆ. ಈಗ ಮಂಜು ಮಾಂಡವ್ಯ ತಮ್ಮ ನೆಚ್ಚಿನ ಆರಾಧ್ಯ ನಟ ಉಪೇಂದ್ರ ಅವರನ್ನು ನಿರ್ದೇಶಿಸಲಿದ್ದಾರೆ. 
ವಿಶೇಷವೆಂದರೆ ಇದು ಉಪೇಂದ್ರ ಅವರ 50 ನೆಯ ಚಿತ್ರ! "ಅಭಿಮಾನಿಯೇ ಕನಸು ನನಸಾಗಿದೆ" ಎನ್ನುತ್ತಾರೆ ಮಂಜು. 
ತಮ್ಮ ಕಾಲೇಜು ದಿನಗಳನ್ನು ಮೆಲುಕು ಹಾಕುವ ಮಂಜು, ವೇದಿಕೆ ಮೇಲೆ ಉಪ್ಪಿ ಅವರ ಸಿನೆಮಾಗಳ ಸಂಭಾಷಣೆಯನ್ನು ಉದುರಿಸುತ್ತಿದ್ದನ್ನು ನೆನಪಿಸಿಕೊಳ್ಳುತ್ತಾರೆ. "ನಾನು ಅವರ ನಿರ್ದೇಶನದ ಅತಿ ದೊಡ್ಡ ಅಭಿಮಾನಿ. ಅವರ ಸಂಭಾಷಣೆ, ನಿರೂಪಣೆಯ ಶೈಲಿ ಮತ್ತು ನಿರ್ದೇಶನವನ್ನು ಸಂಪೂರ್ಣ ಸವಿಯುತ್ತಿದ್ದೆ. ನನಗೆ ಸಿನೆಮಾ ರಂಗಕ್ಕೆ ಬರಲು ಅವರೇ ದೊಡ್ಡ ಸ್ಫೂರ್ತಿ. ಅವರ ಎಲ್ಲ ಸಿನೆಮಾಗಳನ್ನು ನೋಡಿದ್ದೇನೆ ಮತ್ತು ಅವರು ನನ್ನ ಮಾರ್ಗದರ್ಶಕ ಇದ್ದಂತೆ" ಎನ್ನುತ್ತಾರೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Karnataka CM News LIVE Updates | ಸಿದ್ದರಾಮಯ್ಯ ಬ್ರೇಕ್ ಫಾಸ್ಟ್ ಮೀಟಿಂಗ್; ಸಿಎಂ ಸ್ಥಾನಕ್ಕೆ ರಾಜೀನಾಮೆ?, ದಿಢೀರ್ ಮುಂಬೈಗೆ ತೆರಳಿದ ರಾಜ್ಯಪಾಲ ಗೆಹ್ಲೋಟ್..!

ಮಧ್ಯಪ್ರಾಚ್ಯದಲ್ಲಿ ಮತ್ತೆ ಯುದ್ಧದ ಕಾರ್ಮೋಡ: 4 ಇರಾನ್ ಡ್ರೋನ್‌ಗಳನ್ನು ಹೊಡೆದುರುಳಿಸಿದ ಅಮೆರಿಕಾ, ಹೋರ್ಮುಜ್‌ನಲ್ಲಿ ಉದ್ವಿಗ್ನತೆ ತೀವ್ರ..!

ಹೊಸದಾಗಿ ನೇಮಕಗೊಂಡಿದ್ದ Hamas ಮಿಲಿಟರಿ ನಾಯಕನನ್ನೂ ಹೊಡೆದುರುಳಿಸಿದ Israel!

ಸಿದ್ದರಾಮಯ್ಯ 2 ಬಾರಿ ಸಿಎಂ ಆಗಿದ್ದಾರೆ; ಡಿಕೆಶಿ ಹಲವು ಮುಖ್ಯಮಂತ್ರಿಗಳ ಜತೆ ಸಚಿವರಾಗಿ ಕೆಲಸ ಮಾಡಿದ್ದಾರೆ: ಸುರ್ಜೇವಾಲ ಮಾತಿನ ಅರ್ಥವೇನು?

ಇಲ್ಲಿಂದ ತೊಲಗಿ; ಭಾರತೀಯ ದಂಪತಿಗೆ ಅಮೆರಿಕಾದಲ್ಲಿ ಜನಾಂಗೀಯ ನಿಂದನೆ

SCROLL FOR NEXT