'ಜಾನ್ ಜಾನಿ ಜನಾರ್ಧನ್' ಸಿನೆಮಾದ ಸ್ಟಿಲ್
ಬೆಂಗಳೂರು: ಟ್ರೇಲರ್ ಮೂಲಕ ಗಮನ ಸೆಳೆದಿರುವ 'ಜಾನ್ ಜಾನಿ ಜನಾರ್ಧನ್' ಸಿನೆಮಾ ನವೆಂಬರ್ 11 ಕ್ಕೆ ಬಿಡುಗಡೆಗೆ ಸಜ್ಜಾಗಿದೆ. ಈ ಸಿನೆಮಾದ ಥೀಮ್ ಮನಸ್ಸಿನಲ್ಲಿಟ್ಟುಕೊಂಡು ಉತ್ತರ ಕರ್ನಾಟಕದಾದ್ಯಂತ ವಿಶಿಷ್ಟ ಪ್ರಚಾರಕ್ಕೆ ಚಿತ್ರತಂಡ ಸಜ್ಜಾಗಿದೆ.
"ಇದು ಮೂವರು ಒಳ್ಳೆಯ ಗೆಳೆಯರ ನಡುವಿನ ಕಥೆಯಾಗಿದ್ದು ಮತ್ತು ಸಾರ್ವತ್ರಿಕ ವಿಷಯವಾಗಿದ್ದು, ಕಾಲೇಜು ವಿದ್ಯಾರ್ಥಿಗಳ ನಡುವೆ ಬಜ್ ಸೃಷ್ಟಿಸಲು ಪ್ರಯತ್ನಿಸಲಿದ್ದೇವೆ" ಎನ್ನುತ್ತಾರೆ ಸಿನೆಮಾದ ನಿರ್ಮಾಪಕರಲ್ಲಿ ಒಬ್ಬರಾದ ಎಲ್ ಪದ್ಮನಾಭನ್. ಕೆ ಗಿರೀಶ್ ಮತ್ತು ಸಿ ಎನ್ ಶಶಿಕಿರಣ್ ಸಿನೆಮಾದ ಮತ್ತಿಬ್ಬರು ಸಹ ನಿರ್ಮಾಪಕರು.
ಆಸಕ್ತಿದಾಯಕ ಎಂದರೆ 'ಜಾನ್ ಜಾನಿ ಜನಾರ್ಧನ್'ನಲ್ಲಿ 30 ಹಿರಿಯ ನಟರು ಒಟ್ಟಿಗೆ ಸೇರಲಿದ್ದಾರಂತೆ ಮತ್ತು ಇದು ಸಿನೆಮಾದ ಮುಖ್ಯಅಂಶಗಳಲ್ಲಿ ಒಂದು ಎನ್ನುತ್ತಾರೆ ಪದ್ಮನಾಭ್.
"ಕಾಶಿ ಜೊತೆಗೆ ಕೆಲಸ ಮಾಡುವ ಅದೃಷ್ಟ ನಮ್ಮದಾಗಿತ್ತು. ಇದು ಅವರ ಕೊನೆಯ ಚಿತ್ರ. ಶ್ರೀನಿವಾಸ ಮೂರ್ತಿ, ಗಿರಿಜಾ ಲೋಕೇಶ್, ಲಕ್ಷ್ಮಿದೇವಮ್ಮ, ಬ್ಯಾಂಕ್ ಜನಾರ್ಧನ್ ಮುಂತಾದವರು ಈ ಸಿನೆಮಾದಲ್ಲಿದ್ದಾರೆ. ಸಿನಿಮಾರಂಗ ಉಪೇಕ್ಷಿಸಿದ್ದಾರೆ ಎನ್ನಿಸಿದ ಈ ಹಿರಿಯ ನಟರನ್ನು ನಾವು ಆಯ್ಕೆ ಮಾಡಿಕೊಂಡೆವು. ಹೊಸ ನಟರು ಕನ್ನಡ ಚಿತ್ರರಂಗಕ್ಕೆ ಯಥೇಚ್ಛವಾಗಿ ಬರುತ್ತಿದ್ದರು, ಈ ಹಿರಿಯ ನಟರಲ್ಲಿ ಕಲೆ ಬಹಳಷ್ಟು ಉಳಿದಿದೆ ಮತ್ತು ಅವರನ್ನೆಲ್ಲಾ ಒಂದೇ ಫ್ರೇಮ್ ನಲ್ಲಿ ತೋರಿಸಲಿದ್ದೇವೆ" ಎನ್ನುತ್ತಾರೆ ನಿರ್ಮಾಪಕ.
ಎಂ ಆರ್ ಪಿಕ್ಚರ್ಸ್ (ಮುತ್ತಪ್ಪ ರೈ) ಬ್ಯಾನರ್ ಅಡಿ ನಿರ್ಮಾಣವಾಗುತ್ತಿರುವ ಈ ಸಿನೆಮಾದಲ್ಲಿ ಅಜಯ್ ರಾವ್, ಯೋಗೇಶ್ ಮತ್ತು ಕೃಷ್ಣ ಮುಖ್ಯಭೂಮಿಕೆಯಲ್ಲಿದ್ದಾರೆ.
ಗುರು ದೇಶಪಾಂಡೆ ನಿರ್ದೇಶಿಸುತ್ತಿರುವ ಈ ಸಿನೆಮಾಗೆ ಅರ್ಜುನ್ ಜನ್ಯ ಸಂಗೀತ ನೀಡಿದ್ದರೆ ಸಂತೋಷ್ ರೈ ಪಾತಾಜೆ ಕ್ಯಾಮರಾಮ್ಯಾನ್. ರವಿ ವರ್ಮಾ ಸಾಹಸ ನಿರ್ದೇಶಕ ಮತ್ತು ಮುರಳಿ ಮಾಸ್ಟರ್ ನೃತ್ಯವನ್ನು ನಿರ್ದೇಶಿಸಿದ್ದಾರೆ.