ನೇಹಾ ಶೆಟ್ಟಿ 
ಸಿನಿಮಾ ಸುದ್ದಿ

ನಾನು ಗಣೇಶ್ ಎದುರು ಗಳ ಗಳ ಅತ್ತುಬಿಟ್ಟೆ: 'ಮುಂಗಾರು ಮಳೆ' ಹುಡುಗಿ ನೇಹಾ ಶೆಟ್ಟಿ

ಮಾಡೆಲ್, 2014 ರ ಮಿಸ್ ಮಂಗಳೂರು ಅವರಿಗೆ ಒಲಿದು ಬಂದದ್ದು ಸಾಮಾನ್ಯ ಸಿನೆಮಾ ಅಲ್ಲ. ಬಹಳ ನಿರೀಕ್ಷೆ ಮೂಡಿಸಿರುವ ಮುಂಗಾರು ಮಳೆ-2 ರಲ್ಲಿ ಕಾಣಿಸಿಕೊಂಡಿರುವ ನೇಹಾ ಶೆಟ್ಟಿ

ಬೆಂಗಳೂರು: ಮಾಡೆಲ್, 2014 ರ ಮಿಸ್ ಮಂಗಳೂರು ಅವರಿಗೆ ಒಲಿದು ಬಂದದ್ದು ಸಾಮಾನ್ಯ ಸಿನೆಮಾ ಅಲ್ಲ. ಬಹಳ ನಿರೀಕ್ಷೆ ಮೂಡಿಸಿರುವ ಮುಂಗಾರು ಮಳೆ-2 ರಲ್ಲಿ ಕಾಣಿಸಿಕೊಂಡಿರುವ ನೇಹಾ ಶೆಟ್ಟಿ ಅವರಿಗೆ ಇದು ಹಲವು ರೀತಿಯಲ್ಲಿ ವಿಶೇಷ ಸಿನೆಮಾ ಆಗಲಿದೆ. 
2006 ರಲ್ಲಿ ಪೂಜಾ ಗಾಂಧಿ ಮಳೆ ಹುಡುಗಿಯಾಗಿ ಕಾಣಿಸಿಕೊಂಡಿದ್ದ 'ಮುಂಗಾರು ಮಳೆ' 865 ದಿನಗಳ ಕಾಲ ಪ್ರದರ್ಶನ ಕಂಡು ದಾಖಲೆ ಮಾಡಿತ್ತು. ಈಗ ಎರಡನೇ ಭಾಗದಲ್ಲಿ ಮಳೆ ಹುಡುಗಿ ಪಾತ್ರವನ್ನು ನೇಹಾ ನಿಭಾಯಿಸಿದ್ದಾರೆ. 
ಗುರಿ ಮತ್ತು ಅದೃಷ್ಟ ಎರಡೂ ಹೊಂದಾಣಿಕೆಯಾಗುವುದು ಸುಲಭವಲ್ಲ ಆದರೆ ನೇಹಾ ವೃತ್ತಿಜೀವನದಲ್ಲಿ ಅದು ಒಲಿದಿದೆ. ಅಪಾರ ನಿರೀಕ್ಷೆಯ ಭಾರ ಇರುವುದನ್ನು ಗ್ರಹಿಸಿರುವ ನಟಿ "'ಮಳೆ ಹುಡುಗಿ' ಬಿರುದು ಹೊಂದುವುವದು ಯಾವುದೇ ನಾಯಕನಾಟಿಗೆ ಸಾಮನ್ಯವಲ್ಲ" ಎನ್ನುವ ಅವರು "ನಿರೀಕ್ಷೆಗಳಿಗೆ ತಕ್ಕಂತೆ ನಟಿಸುವುದು ಸವಾಲಾಗಿತ್ತು" ಎನ್ನುತ್ತಾರೆ. "'ಮುಂಗಾರು ಮಳೆ' ಮೂಲಕ ಪೂಜಾ ಗಾಂಧಿ ಚಿತ್ರರಂಗದಲ್ಲಿ ದೊಡ್ಡ ಛಾಪು ಮೂಡಿಸಿ ಅದನ್ನು ಮುಂದಕ್ಕೆ ಕೊಂಡೊಯ್ದರು. ಈಗ ಆ ಜವಾಬ್ದಾರಿಯನ್ನು ನನಗೆ ವಹಿಸಿದ್ದಾರೆ. ಆದರೆ ಪ್ರತಿ ಕ್ಷಣವನ್ನು ನಾನು ಖುಷಿಯಿಂದ ಕಳೆದಿದ್ದೇನೆ" ಎನ್ನುತ್ತಾರೆ. 
ಮಳೆ ಹಲವು ರೀತಿಯ ಭಾವನೆಗಳನ್ನು ಕೆರಳಿಸುತ್ತದೆ ಎನ್ನುವ ನೇಹಾ 'ಮುಂಗಾರು ಮಳೆ-2' ಅದನ್ನೆಲ್ಲಾ ಮೀರಿಸುತ್ತದೆ ಎನ್ನುತ್ತಾರೆ "ಈ ಹಿಂದೆ ನಿಭಾಯಿಸದ ಭಾವನೆಗಳನ್ನು ಕೂಡ 'ಮುಂಗಾರು ಮಳೆ-2' ಸೆರೆಹಿಡಿಯುತ್ತದೆ" ಎನ್ನುತ್ತಾರೆ. 
ತಮ್ಮ ವಿದಾರ್ಥಿ ಜೀವನದಲ್ಲಿ ಗಣೇಶ್ ಅವರನ್ನು ನೋಡಿ ಬೆಳೆದು ಈಗ ಮೊದಲ ಬಾರಿಗೆ ಅವರ ಎದುರೇ ನಟಿಸುವ ಅವಕಾಶ ಬಂದಾಗ ಭಯ ಸಾಮನ್ಯವಾಗಿ ಇದ್ದೇ ಇತ್ತು ಎನ್ನುವ ನೇಹಾ "ಬೇರೆ ಪಾದಾರ್ಪಣೆಯಾಗಿದ್ದರೆ ಬಹುಷಃ ಪರಿಸ್ಥಿತಿ ವಿಭಿನ್ನವಾಗಿರುತ್ತಿತ್ತು. ಈಗ ಶಶಾಂಕ್ ಅಂತಹ ನಿರ್ದೇಶಕ ಮತ್ತು ಗಣೇಶ್ ಅಂತಹ ನಟನ ಜೊತೆಗೆ ಕೆಲಸ ಮಾಡಿರುವುದು, ಪ್ರತಿ ಕ್ಷಣವೂ ದೊಡ್ಡ ಸವಾಲಿನಂತೆ ಕಾಣುತ್ತದೆ" ಎನ್ನುವ ಅವರು ಚಿತ್ರತಂಡದಿಂದ ಅಪಾರ ಬೆಂಬಲ ದೊರಕಿತು ಎನ್ನುತ್ತಾರೆ. 
"ನಾನು 'ಮುಂಗಾರು ಮಳೆ' ಸಿನೆಮಾವನ್ನು ಎಷ್ಟು ಇಷ್ಟ ಪಟ್ಟಿದ್ದೆ ಎಂಬುದು ಈಗಲೂ ನೆನಪಿದೆ. ಗಣೇಶ್ ಅವರ ಹೃದಯ ಚೂರಾದಾಗ ನಾನು ಅತ್ತಿದ್ದೆ. 10 ವರ್ಷಗಳ ನಂತರ ಆ ಸಿನೆಮಾ ನನ್ನ ತಲೆಯಲ್ಲಿ ಅಚ್ಚಳಿಯದೆ ನಿಂತಿದೆ. ಗಣೇಶ್ ಈಗಲೂ ಶಕ್ತಿಯುತ ನಟ. 'ಮುಂಗಾರು ಮಳೆ-2'ರ ಭಾವನಾತ್ಮಕ ದೃಶ್ಯವೊಂದರಲ್ಲಿ ಅವರ ಮುಂದೆ ಗಳ ಗಳ ಅತ್ತಿದ್ದೆ" ಎಂದು ನೇಹಾ ನೆನಪಿಸಿಕೊಳ್ಳುತ್ತಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT