ಸೋಹಾ ಅಲಿ ಖಾನ್ 
ಸಿನಿಮಾ ಸುದ್ದಿ

ದೇವಾಲಯಗಳಿಗೆಹೋಗುವುದರಿಂದ ನಾನು ಮುಸ್ಲಿಮೇತರಳಾಗುವುದಿಲ್ಲ: ನಟಿ ಸೋಹಾ ಅಲಿ ಖಾನ್

ಅಮೃತ್ ಸರದ ಗೋಲ್ಡನ್ ಟೆಂಪಲ್ ಹಾಗೂ ಗಣಪತಿ ಪೆಂಡಾಲ್ ಗೆ ಭೇಟಿ ನೀಡಿದ್ದಕ್ಕೆ ವ್ಯಕ್ತವಾದ ಟೀಕೆಗಳಿಗೆ ಪ್ರತಿಕ್ರಿಯೆ ನೀಡಿರುವ ನಟಿ ಸೋಹಾ ಅಲಿ ಖಾನ್, ದೇವಾಲಯಗಳಿಗೆ ಭೇಟಿ ನೀಡುವುದರಿಂದ...

ಮುಂಬೈ: ಅಮೃತ್ ಸರದ ಗೋಲ್ಡನ್ ಟೆಂಪಲ್ ಹಾಗೂ ಗಣಪತಿ ಪೆಂಡಾಲ್ ಗೆ ಭೇಟಿ ನೀಡಿದ್ದಕ್ಕೆ ವ್ಯಕ್ತವಾದ ಟೀಕೆಗಳಿಗೆ ಪ್ರತಿಕ್ರಿಯೆ ನೀಡಿರುವ ನಟಿ ಸೋಹಾ ಅಲಿ ಖಾನ್, ದೇವಾಲಯಗಳಿಗೆ ಭೇಟಿ ನೀಡುವುದರಿಂದ ನಾನು ಮುಸ್ಲಿಮೇತರಳಾಗುವುದಿಲ್ಲ ಎಂದು ಹೇಳಿದ್ದಾರೆ.

31st ಅಕ್ಟೊಬರ್ ಸಿನಿಮಾ ಬಿಡುಗಡೆಯಾಗಲಿರುವ ಹಿನ್ನೆಲೆಯಲ್ಲಿ ನಟಿ ಸೋಹಾ ಅಲಿ ಖಾನ್, ಸಿಖ್ಖರ ಶ್ರದ್ಧಾ ಕೇಂದ್ರವಾಗಿರುವ ಅಮೃತ್ ಸರದ ಗೋಲ್ಡನ್ ಟೆಂಪಲ್ ಹಾಗೂ ಗಣಪತಿ ಪೆಂಡಾಲ್ ಗೆ ಭೇಟಿ ನೀಡಿದ್ದರು. ಈ ಬೆಳವಣಿಗೆ ಬಗ್ಗೆ ಟ್ವಿಟರ್ ನಲ್ಲಿ ಪ್ರತಿಕ್ರಿಯೆ ನೀಡಿದ್ದ ಹಲವರು ಸೋಹಾ ಅಲಿ ಖಾನ್ ಅವರ ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಸೋಹಾ ಅಲಿ ಖಾನ್, ಭಾರತ ಜಾತ್ಯಾತೀತ ದೇಶವಾಗಿದೆ. ಇಲ್ಲಿ ದೇವಸ್ಥಾನಗಳಿಗೆ ಭೇಟಿ ನೀಡುವುದರಿಂದ ನಾನು ಮುಸ್ಲಿಮೇತರಳಾಗುವುದಿಲ್ಲ ಎಂದು ಹೇಳಿದ್ದಾರೆ.

ನಾನು ದೇವಸ್ಥಾನಕ್ಕೆ ಹೋಗುವುದು, ನಮಾಜ್ ಮಾಡುವುದು, ಚರ್ಚ್ ನಲ್ಲಿ ಪ್ರಾರ್ಥನೆ ಸಲ್ಲಿಸುವುದು ಸ್ವಮತ್ತೊಬ್ಬರ ಮೇಲೆ ಏನು ಪರಿಣಾಮ ಬೀರುತ್ತದೆ ಎಂದು ಸೋಹಾ ಪ್ರಶ್ನಿಸಿದ್ದಾರೆ. ನನ್ನ ಮೇಲೆ ಯಾರೂ ಒಡೆತನ ಹೊಂದಿಲ್ಲ,  ಭಾರತ ಜಾತ್ಯಾತೀತ ರಾಷ್ಟ್ರವಾಗಿದ್ದು ಎಲ್ಲಾ ಧರ್ಮಗಳನ್ನೂ, ಮತ್ತೊಬ್ಬರ ಆಯ್ಕೆಗಳನ್ನು ಗೌರವಿಸಬೇಕು ಎಂದು ಸೋಹಾ ಅಭಿಪ್ರಾಯಪಟ್ಟಿದ್ದಾರೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಬೆಂಜಮಿನ್ ನೆತನ್ಯಾಹು ಮಾಡಿದ ಫೋನ್ ಕರೆಯೇ ಅಮೆರಿಕ-ಇರಾನ್ ಶಾಂತಿ ಮಾತುಕತೆ ಹಳಿತಪ್ಪುವಂತೆ ಮಾಡಿತು'

ಕ್ಷೇತ್ರಗಳ ಮರುವಿಂಗಡಣೆ ಪ್ರಸ್ತಾಪ ಅತ್ಯಂತ ಅಪಾಯಕಾರಿ ಹಾಗೂ ಸಂವಿಧಾನದ ಮೇಲಿನ ದಾಳಿ: ಸೋನಿಯಾ ಗಾಂಧಿ

ರಾಜ್ಯದಲ್ಲಿ ರಣ ಬಿಸಿಲು: 35 ಡಿಗ್ರಿ ತಲುಪಿದ ತಾಪಮಾನ, ಮಳೆ ಮುನ್ಸೂಚನೆ ಇಲ್ಲ ಎಂದ IMD

ಆಗ VOLVO, ಈಗ BMW; ಹಾರುಬೂದಿ ಸಾಗಿಸುತ್ತಿದ್ದ ಲಾರಿ ಉರುಳಿ ಐಶಾರಾಮಿ ಕಾರು ಅಪ್ಪಚ್ಚಿ, Video

ಅಮೆರಿಕಾ–ಇರಾನ್ ಶಾಂತಿ ಮಾತುಕತೆ ವಿಫಲ: ಷೇರು ಮಾರುಕಟ್ಟೆ ಮೇಲೆ ಪರಿಣಾಮ; ಸೆನ್ಸೆಕ್ಸ್ 1600 ಅಂಕ ಕುಸಿತ, ತೈಲ ಬೆಲೆ ಏರಿಕೆ..!

SCROLL FOR NEXT