ಮೆಗಾಸ್ಟಾರ್ ಅಮಿತಾಬ್ ಬಚ್ಚನ್ 
ಸಿನಿಮಾ ಸುದ್ದಿ

ನ್ಯಾಯಮೂರ್ತಿ ಕಾಟ್ಜು ಹೇಳಿದ್ದು ಸರಿ, ನನ್ನ ತಲೆ ಖಾಲಿ: ಬಿಗ್ ಬಿ

ಹಲವಾರು ನನಪಿನಲ್ಲುಳಿಯುವ ಹಾಸ್ಯ ಪಾತ್ರಗಳನ್ನು ಮಾಡಿ, ಹಾಸ್ಯ ಸಂಭಾಷಣೆಯನ್ನು ಹರಿಸಿರುವ ಮೆಗಾಸ್ಟಾರ್ ಅಮಿತಾಬ್ ಬಚ್ಚನ್, ಮಾಜಿ ನ್ಯಾಯಮೂರ್ತಿ ಮಾರ್ಕಂಡೇಯ ಕಾಟ್ಜು ಅವರ...

ಮುಂಬೈ: ಹಲವಾರು ನನಪಿನಲ್ಲುಳಿಯುವ ಹಾಸ್ಯ ಪಾತ್ರಗಳನ್ನು ಮಾಡಿ, ಹಾಸ್ಯ ಸಂಭಾಷಣೆಯನ್ನು ಹರಿಸಿರುವ ಮೆಗಾಸ್ಟಾರ್ ಅಮಿತಾಬ್ ಬಚ್ಚನ್, ಮಾಜಿ ನ್ಯಾಯಮೂರ್ತಿ ಮಾರ್ಕಂಡೇಯ ಕಾಟ್ಜು ಅವರ ಹೇಳಿಕೆಯನ್ನು ಸಂಯಮದಿಂದ ಸ್ವೀಕರಿಸಿದ್ದಾರೆ. 'ನಟನ ತಲೆಯಲ್ಲಿ ಏನು ಇಲ್ಲ' ಎಂದು ಕಾಟ್ಜು ಹೇಳಿದ್ದರು. 
"ಅವರು (ಕಾಟ್ಜು ) ಸರಿ, ನನ್ನ ತಲೆಯಲ್ಲಿ ಏನು ಇಲ್ಲ. ಅವರು ಸರಿ... ನನ್ನ ತಲೆ ಖಲಾಸ್ (ಮುಗಿದಿದೆ)" ಎಂದು ತೀವ್ರ ಹೇಳಿಕೆಗಳಿಗೆ ಜನಪ್ರಿಯರಾದ ಮಾಜಿ ಸುಪ್ರೀಂ ಕೋರ್ಟ್ ನ್ಯಾಯಾಧೀಶ ಕಾಟ್ಜು ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ್ದಾರೆ. 
'ಪಿಂಕ್' ಸಿನೆಮಾದ ಪ್ರದರ್ಶನಕ್ಕಾಗಿ ಜನರ-ವಿಮರ್ಶಕರ ಮೆಚ್ಚುಗೆ ಪಡೆಯುತ್ತಿದ್ದ ಸಮಯದಲ್ಲಿ ಬಿಗ್ ಬಿ ಅವರ ಪ್ರತಿಭೆಯ ಬಗ್ಗೆ ಕಾಟ್ಜು ಅವರು ವಿಭಿನ್ನ ನಿಲುವು ತಳೆದಿದ್ದರು. 
ಸೆಪ್ಟೆಂಬರ್ 17 ರಂದು ಸಾಮಾಜಿಕ ಮಾಧ್ಯಮದಲ್ಲಿ ಬರೆದಿದ್ದ ಮಾಜಿ ನ್ಯಾಯಾಧೀಶ "ತಲೆಯಲ್ಲಿ ಏನೂ ಇರದ ವ್ಯಕ್ತಿ ಅಮಿತಾಬ್ ಬಚ್ಚನ್ ಮತ್ತು ಬಹುತೇಕ ಎಲ್ಲ ಮಾಧ್ಯಮ ವ್ಯಕ್ತಿಗಳು ಅವರನ್ನು ಹೊಗಳುವುದರಿಂದ ಅವರ ತಲೆಯಲ್ಲಿಯೂ ಏನು ಇಲ್ಲ" ಎಂದಿದ್ದರು. 
"ನಾವು ಒಂದೇ ಶಾಲೆಯಲ್ಲಿ ಓದಿದವರು. ಅವರು ನನಗೆ ಹಿರಿಯ ವಿದ್ಯಾರ್ಥಿ. ಯಾವುದೇ ದ್ವೇಷವಿಲ್ಲ" ಎಂದು ಪತ್ರಿಕಾ ಗೋಷ್ಠಿಯಲ್ಲಿ 73 ವರ್ಷದ ನಟ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಮತಗಳ್ಳತನ' ನಡೆದಿರುವುದನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ನಿರಾಕರಿಸಲಿಲ್ಲ, ನನಗೆ ಆಶ್ಚರ್ಯವಾಯಿತು: ರಾಹುಲ್ ಗಾಂಧಿ

ಬೆಂಗಳೂರು: ನಮ್ಮ ಮೆಟ್ರೋದಲ್ಲಿ Alt News ಸಹ ಸ್ಥಾಪಕ ಮೊಹಮ್ಮದ್ ಜುಬೈರ್ ಗೆ ಹಿಗ್ಗಾಮುಗ್ಗ ಥಳಿತ?, Video Viral

19ನೇ ಓವರ್‌ನಲ್ಲೇ 250 ರನ್ ಚೇಸ್: ಟಿ20 ಕ್ರಿಕೆಟ್‌ನಲ್ಲಿ ಭಾರತವನ್ನು ಸೋಲಿಸಿ ದಾಖಲೆ ಬರೆದ ವಿಂಡೀಸ್

CJP Protest: ಭಾರತದ ಯುವಕರು ದೆಹಲಿಗೆ ತಲುಪುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ: ಚಿರಾಗ್ ಪಾಸ್ವಾನ್

24 ಗಂಟೆ ಇಂಟರ್ನೆಟ್ ಕಟ್, 57 ಮೆಟ್ರೋ ನಿಲ್ದಾಣ ಬಂದ್: ಸಿಜೆಪಿ ಪ್ರತಿಭಟನೆಗೂ ಮುನ್ನ ದೆಹಲಿ ಹೈ ಅಲರ್ಟ್