ಮುಂಗಾರು ಮಳೆ 2 ಸಿನೆಮಾದ ಸ್ಟಿಲ್ 
ಸಿನಿಮಾ ಸುದ್ದಿ

'ಮುಂಗಾರು ಮಳೆ 2' ಹಾಡುಗಳು ಅಂತರ್ಜಾಲದಲ್ಲಿ ಸಂಚಲನ; ನೂರಕ್ಕೂ ಹೆಚ್ಚು ಮರು ಆವೃತ್ತಿಗಳು

ಶಶಾಂಕ್ ನಿರ್ದೇಶನದ 'ಮುಂಗಾರು ಮಳೆ 2' ಮೂರನೇ ವಾರಕ್ಕೆ ಕಾಲಿಡುತ್ತಿರುವ ಸಮಯದಲ್ಲಿ ಈ ಸಿನೆಮಾದ ಹಾಡುಗಳು 'ಸರಿಯಾಗಿ ನೆನಪಿದೆ', 'ಗಮನಿಸು' ಮತ್ತು 'ಕನಸಲೂ' ಅಂತರ್ಜಾಲದಲ್ಲಿ

ಬೆಂಗಳೂರು: ಶಶಾಂಕ್ ನಿರ್ದೇಶನದ 'ಮುಂಗಾರು ಮಳೆ 2' ಮೂರನೇ ವಾರಕ್ಕೆ ಕಾಲಿಡುತ್ತಿರುವ ಸಮಯದಲ್ಲಿ ಈ ಸಿನೆಮಾದ ಹಾಡುಗಳು 'ಸರಿಯಾಗಿ ನೆನಪಿದೆ', 'ಗಮನಿಸು' ಮತ್ತು 'ಕನಸಲೂ' ಅಂತರ್ಜಾಲದಲ್ಲಿ ಜನಪ್ರಿಯವಾಗಿದ್ದು ಭಾರಿ ಸಂಚಲನ ಮೂಡಿಸಿವೆ. 
ಜನ ಈ ಹಾಡುಗಳನ್ನು ಎಷ್ಟು ಮೆಚ್ಚಿದ್ದಾರೆ ಎಂದರೆ, ಈ ಹಾಡುಗಳನ್ನು ಮತ್ತೆ ರೆಕಾರ್ಡ್ ಮಾಡಿ ಮರು ಆವೃತ್ತಿಗಳನ್ನು ಯೂಟ್ಯೂಬ್ ನಲ್ಲಿ ಹಾಕುತ್ತಿದ್ದಾರೆ. ಈ ಪ್ರತಿಕ್ರಿಯೆಯಿಂದ ಸಂತಸಗೊಂಡಿರುವ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ "ದಿನಾಲು ಸರಾಸರಿಯಾಗಿ ಎರಡು ಮರು ಆವೃತ್ತಿ ಹಾಡುಗಳು ಬರುತ್ತಿವೆ" ಎನ್ನುತ್ತಾರೆ. 
"ಕೆಲವು ಬಾರಿ ಹಾಡುಗಳನ್ನು ಮತ್ತೆ ಅರೇಂಜ್ ಮಾಡಿ ಹಾಡಿದ್ದರೆ, ಇನ್ನು ಕೆಲವೊಮ್ಮೆ ವಿಭಿನ್ನ ವಾದ್ಯಗಳೊಂದಿಗೆ, ರ್ಯಾಪ್ ಸಂಗೀತದೊಂದಿಗೆ ಹಾಡಿರುವ ಆವೃತ್ತಿಗಳು ಬಿಡುಗಡೆಯಾಗಿವೆ. ಒಂದು ಆವೃತ್ತಿಯಲ್ಲಿ ಯುವತಿಯೊಬ್ಬಳು, ಹಿನ್ನಲೆಯಲ್ಲಿ ಸಂಗೀತವೇ ಇಲ್ಲದೆ ಹಾಡಿದ್ದಾರೆ. ಬಹುತೇಕ ಈ ಎಲ್ಲ ಮರು ಆವೃತ್ತಿಗಳು ವೈರಲ್ ಆಗಿದ್ದು 50 ಸಾವಿರಕ್ಕೂ ಹೆಚ್ಚು ಬಾರಿ ವೀಕ್ಷಣೆಯಾಗಿವೆ" ಎನ್ನುತ್ತಾರೆ ಸಂಗೀತ ನಿರ್ದೇಶಕ. 
ಈ ಟ್ರೆಂಡ್ ಭಾರತವನ್ನು ಮೀರಿ ಬೆಳೆದಿದೆ ಎನ್ನುವ ಅರ್ಜುನ್ "ದುಬೈ, ಲಂಡನ್, ಕತಾರ್, ಬೆಂಗಳೂರು, ಮುಂಬೈ ಎಲ್ಲ ಭಾಗಗಳಿಂದಲೂ ರೆಕಾರ್ಡಿಂಗ್ ಗಳು ಬರುತ್ತಿವೆ. ಅವುಗಳೆಲ್ಲವನ್ನೂ ಸಾಮಾಜಿಕ ಜಾಲತಾಣಗಳಲ್ಲಿ ಹಾಕಿದ್ದೇವೆ" ಎನ್ನುತ್ತಾರೆ ಅರ್ಜುನ್. 
ಇವುಗಳಲ್ಲಿ ಅತ್ಯುತ್ತಮ ಪ್ರತಿಭೆಗಳನ್ನು ಹೆಕ್ಕಿ ಮುನ್ನೆಲೆಗೆ ತರುವ ಇರಾದೆ ಹೊಂದಿರುವ ಸಂಗೀತ ನಿರ್ದೇಶಕ "ಸದ್ಯಕ್ಕೆ ಅಲ್ಲದಿದ್ದರೂ, ಅವುಗಳಲ್ಲಿ ಕೆಲವನ್ನು ಆಯ್ಕೆ ಮಾಡಿ ಮುನ್ನೆಲೆಗೆ ತರುವ ಇಚ್ಛೆ ಇದೆ" ಎಂದು ವಿವರಿಸುತ್ತಾರೆ. 
ಗಣೇಶ್, ನೇಹಾ ಶೆಟ್ಟಿ ಮತ್ತು ರವಿಚಂದ್ರನ್ ನಟಿಸಿರುವ ಈ ಸಿನೆಮಾ ಮಿಶ್ರ ಪ್ರತಿಕ್ರಿಯೆ ಪಡೆದಿತ್ತು. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಹೊಸದಾಗಿ ನೇಮಕಗೊಂಡಿದ್ದ Hamas ಮಿಲಿಟರಿ ನಾಯಕನನ್ನೂ ಹೊಡೆದುರುಳಿಸಿದ Israel!

ಸಿದ್ದರಾಮಯ್ಯ 2 ಬಾರಿ ಸಿಎಂ ಆಗಿದ್ದಾರೆ; ಡಿಕೆಶಿ ಹಲವು ಮುಖ್ಯಮಂತ್ರಿಗಳ ಜತೆ ಸಚಿವರಾಗಿ ಕೆಲಸ ಮಾಡಿದ್ದಾರೆ: ಸುರ್ಜೇವಾಲ ಮಾತಿನ ಅರ್ಥವೇನು?

ಇಲ್ಲಿಂದ ತೊಲಗಿ; ಭಾರತೀಯ ದಂಪತಿಗೆ ಅಮೆರಿಕಾದಲ್ಲಿ ಜನಾಂಗೀಯ ನಿಂದನೆ

IPL 2026: SRH ವಿರುದ್ಧ RR ಗೆ 47 ರನ್ ಗಳ ಭರ್ಜರಿ ಗೆಲುವು

IPL 2026 Eliminator: ವೈಭವ್ ಸೂರ್ಯವಂಶಿ ಸ್ಫೋಟಕ ಬ್ಯಾಟಿಂಗ್, SRHಗೆ 244 ರನ್ ಬೃಹತ್ ಗುರಿ ನೀಡಿದ RR

SCROLL FOR NEXT