ಹೈದರಾಬಾದ್: ತೆಲುಗಿನ ಬಾಹುಬಲಿ ಚಿತ್ರದ ಮನೋಹರಿ ಹಾಡಿಗೆ ಸ್ಟೆಪ್ ಹಾಕಿದ್ದ ಮಧು ಸ್ನೇಹ ಮತ್ತೆ ಟಾಲಿವುಡ್ ಗೆ ವಾಪಸಾಗಿದ್ದಾರೆ.
ಎರಡು ವರ್ಷದ ನಂತರ ನಟ ವರುಣ್ ತೇಜಾ ಅಭಿನಯದ ಮಿಸ್ಟರ್ ಸಿನಿಮಾದಲ್ಲಿ ಮಧು ಸ್ನೇಹಾ ಹೆಜ್ಜೆ ಹಾಕಲಿದ್ದಾರೆ,
ಬಾಹುಬಲಿ ಸಿನಿಮಾದಲ್ಲಿ ಪ್ರಭಾಸ್ ಜೊತೆಗೆ ನೃತ್ಯ ಮಾಡಿದ ನಂತರ ಎಲ್ಲರೂ ನನ್ನನ್ನು ಮನೋಹರಿ ಗರ್ಲ್ ಎಂದೇ ಕರೆಯುತ್ತಾರೆ, ಅದಾದಾ ನಂತರ ಕೆಲ ಪ್ರಾಜೆಕ್ಟ್ ಗಳಿಗೆ ಅಫರ್ ಬಂದಿದ್ದವು, ಆದರೆ ಆ ಸಿನಿಮಾಗಳ ಸ್ಥಿತಿ ಏನಾಯಿತೊ ತಿಳಿಯಲಿಲ್ಲ ಎಂದು ಮಧು ಸ್ನೇಹ ಹೇಳಿದ್ದಾರೆ.
ಶ್ರೀನು ವೈಟ್ಲಾ ಅವರ ಮಿಸ್ಟರ್ ಸಿನಿಮಾದ ಹಾಡಿಗೆ ಆಫರ್ ಬಂದಾಗ ನಾನು ಒಪ್ಪಿಕೊಂಡೇ, ಅವರ ಅನಕೇ ಸಿನಿಮಾಗಳನ್ನು ನೋಡಿದ್ದೇನೆ ಅವರೊಬ್ಬ ದೊಡ್ಡ ನಿರ್ದೇಶಕ ಎಂದು ಹೇಳಿದ್ದಾರೆ.
ಮಿಸ್ಚರ್ ಸಿನಿಮಾದ ಹಾಡು ಕೇಳಿ ನಾನು ತುಂಬಾ ಆಶ್ಚರ್ಯ ವಾಯಿತು, ವರುಣ್ ತೇಜಾ ನನ್ನನ್ನು ಹೊಗಳಿದರು, ಅವರು ತುಂಬಾ ಉತ್ತಮ ಸ್ನೇಹಿತ. ಇದೇ ಅನುಭವ ನನಗೆ ಬಾಹುಬಲಿ ಸಿನಿಮಾ ಶೂಟಿಂಗ್ ವೇಳೆ ಆಗಿತ್ತು, ಬಹುತೇಕ ತೆಲುಗಿನ ಎಲ್ಲಾ ನಟರು ಹ್ಯಾಂಡ್ ಸಮ್ ಗಳಾಗಿದ್ದಾರೆ. ಹೀಗಾಗಿ ನನಗೆ ಹೈದರಾಬಾದ್ ಜೊತೆಗಿನ ಸಂಪರ್ಕ ಮುಂದುವರಿದೆ. ನನಗೆ ಇದು ನನ್ನ ಮನೆ ಎನಿಸುತ್ತಿದೆ, ಇಲ್ಲಿನ ಎಲ್ಲರೂ ವೃತ್ತಿಪರರಾಗಿದ್ದಾರೆ ಎಂದು ಹೇಳಿದ್ದಾರೆ.