ರಜನಿಕಾಂತ್ 
ಸಿನಿಮಾ ಸುದ್ದಿ

ಚಿತ್ರ ವಿಮರ್ಶೆಯಲ್ಲಿ ನೋವುಂಟಾಗುವಂತಹ ಅಭಿಪ್ರಾಯ ಹೇಳಬೇಡಿ: ರಜನಿ ಕಾಂತ್

ಯಾರಿಗೂ ನೋವಾಗದಂತೆ ಸಿನಿಮಾ ವಿಮರ್ಶೆ ಮಾಡಿ ಎಂದು ಸೂಪರ್ ಸ್ಟಾರ್ ರಜನಿ ಕಾಂತ್ ಮನವಿ ಮಾಡಿದ್ದಾರೆ...

ಚೆನ್ನೈ: ಯಾರಿಗೂ ನೋವಾಗದಂತೆ ಸಿನಿಮಾ ವಿಮರ್ಶೆ ಮಾಡಿ ಎಂದು ಸೂಪರ್ ಸ್ಟಾರ್ ರಜನೀಕಾಂತ್ ಮನವಿ ಮಾಡಿದ್ದಾರೆ.
ಶಿವಾಜಿ ಗಣೇಶನ್ ಅವರ ನಿವಾಸದಲ್ಲಿ ನೆರುಪ್ಪು ಡಾ ಸಿನಿಮಾ ಆಡಿಯೋ ಬಿಡುಗಡೆ ವೇಳೆ ಮಾತನಾಡಿದ ರಜನಿಕಾಂತ್, ಸಿನಿಮಾ ಮಾಡುವುದು ನಮ್ಮ ಜವಾಬ್ದಾರಿ, ವಿಮರ್ಶೆ ಮಾಡುವುದು ನಿಮ್ಮ ಕರ್ತವ್ಯ. ಆದರೆ ನೀವು ಸಿನಿಮಾ ವಿಮರ್ಶೆ ಮಾಡುವಾಗ ಹೇಗೆ ಸಂಹವನ ಮಾಡುತ್ತೀರಾ ಎಂಬುದು ಮುಖ್ಯವಾಗಿದೆ. ಯಾರಿಗೂ ನೋವಾಗುವಂತ ಅಭಿಪ್ರಾಯಗಳನ್ನು ನೀಡಬೇಡಿ. ಸಿನಿಮಾ ಬಗ್ಗೆ ನಿಮ್ಮ ಯೋಚನೆಗಳನ್ನು ಸರಿಯಾದ ಪದಗಳಿಂದ ವಿಮರ್ಶಿಸಿ ಎಂದು ಮನವಿ ಮಾಡುತ್ತೇನೆ ಎಂದು ಹೇಳಿದ್ದಾರೆ.
ಇದೇ ವೇಳೆ ಮಾತನಾಡಿದ ನಟ ವಿಶಾಲ್ ವಿಮರ್ಶೆ ಮಾಡುವುದು ನಿಮ್ಮ ಅಭಿವ್ಯಕ್ತಿ ಸ್ವಾತಂತ್ರ್ಯ ಎಂಬುದು ನಮಗೆ ತಿಳಿದಿದೆ, ಪ್ರತಿಯೊಬ್ಬರಿಗೂ ಅವರ ಅಭಿಪ್ರಾಯ ಹೇಳಲು ಅವಕಾಶವಿದೆ, ಆದರೆ ಸಿನಿಮಾಗಳಿಗೆ ಉಸಿರಾಡಲು ಅವಕಾಶ ನೀಡಿ, ಸಿನಿಮಾ ಬಿಡುಗಡೆಯಾದ 4 ನೇ ದಿನ ಚಿತ್ರ ವಿಮರ್ಶೆ ಮಾಡಿ ಎಂದು ವಿಶಾಲ್ ತಿಳಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

24 ಗಂಟೆ ಇಂಟರ್ನೆಟ್ ಕಟ್, 57 ಮೆಟ್ರೋ ನಿಲ್ದಾಣ ಬಂದ್: ಸಿಜೆಪಿ ಪ್ರತಿಭಟನೆಗೂ ಮುನ್ನ ದೆಹಲಿ ಹೈ ಅಲರ್ಟ್

ನಂದಿಗ್ರಾಮದಲ್ಲಿ 1.22 ಲಕ್ಷ ಮತ, ಅಸ್ಸಾಂನಲ್ಲಿ BJPಗೆ ಗೆಲುವು; 2 ಕ್ಷೇತ್ರ ಗೆದ್ದ TVK: ಕಾಂಗ್ರೆಸ್, ದೀದಿಗೆ ಮುಖಭಂಗ!

ಉಪಚುನಾವಣೆಯಲ್ಲಿ ಗೆಲುವು, ಜನರೊಂದಿಗೆ NDA ಆಳವಾದ ನಂಟಿನ ಪ್ರತೀಕ: ಪ್ರಧಾನಿ ಮೋದಿ

ಮತಗಳ್ಳತನವೇ ಆಗಿದ್ದರೆ ಕೇರಳ Congress CM, ತಮಿಳುನಾಡು CM ಕೂಡ ಮತಗಳ್ಳರೇ: ಚೇತನ್ ಅಹಿಂಸಾ

'ಅಸಹ್ಯ, ಅತಿರೇಕ.. ನಿಮ್ಮನ್ನು ಈ ರೀತಿ ನೋಡಲು ಇಚ್ಛಿಸುವುದಿಲ್ಲ, BiggBoss ಶೋ ಬಿಟ್ಟು ಹೊರಬನ್ನಿ': Kichcha Sudeepಗೆ ಪತ್ರ