ಸತೀಶ್ ನೀನಾಸಂ 
ಸಿನಿಮಾ ಸುದ್ದಿ

'ಗಣೇಶ್ ಮೆಡಿಕಲ್ಸ್' ಕಡೆಗೆ ಹೊರಟ ಸತೀಶ್

'ನೀರ್ ದೋಸೆ' ಯಶಸ್ಸಿನ ನಂತರ ನಿರ್ದೇಶಕ ವಿಜಯ್ ಪ್ರಸಾದ್ ಈಗ ನಿರ್ಮಾಪಕ ಪ್ರಸನ್ನ ಅವರೊಂದಿಗೆ ಸಿನೆಮಾವೊಂದಕ್ಕೆ ಕೈಜೋಡಿಸಿದ್ದಾರೆ. 'ಗಣೇಶ್ ಮೆಡಿಕಲ್ಸ್' ಎಂಬ ಶೀರ್ಷಿಕೆ ಹೊತ್ತ ಈ ಸಿನೆಮಾದಲ್ಲಿ

ಬೆಂಗಳೂರು: 'ನೀರ್ ದೋಸೆ' ಯಶಸ್ಸಿನ ನಂತರ ನಿರ್ದೇಶಕ ವಿಜಯ್ ಪ್ರಸಾದ್ ಈಗ ನಿರ್ಮಾಪಕ ಪ್ರಸನ್ನ ಅವರೊಂದಿಗೆ ಸಿನೆಮಾವೊಂದಕ್ಕೆ ಕೈಜೋಡಿಸಿದ್ದಾರೆ. 'ಗಣೇಶ್ ಮೆಡಿಕಲ್ಸ್' ಎಂಬ ಶೀರ್ಷಿಕೆ ಹೊತ್ತ ಈ ಸಿನೆಮಾದಲ್ಲಿ ಸತೀಶ್ ನೀನಾಸಂ ನಾಯಕನ ಪಾತ್ರದಲ್ಲಿ ನಟಿಸುತ್ತಿರುವುದು ವಿಶೇಷ. 
ವಿಜಯ್ ಪ್ರಸಾದ್ 'ಲೇಡಿಸ್ ಟೈಲರ್' ಸಿನೆಮಾ ಚಿತ್ರೀಕರಣ ಸಂಪೂರ್ಣಗೊಳಿಸಿದ ನಂತರ ಸೆಪ್ಟೆಂಬರ್ ನಲ್ಲಿ ಈ ಹೊಸ ಚಿತ್ರದ ಚಿತ್ರೀಕರಣ ಪ್ರಾರಂಭಿಸಲಿದ್ದಾರೆ. ಆ ಹೊತ್ತಿಗೆ ಸತೀಶ್ ಕೂಡ ತಮ್ಮ ಪೂರ್ವಭಾವಿ ಕೆಲಸಗಳನ್ನು ಮುಗಿಸಿರುವ ಸಾಧ್ಯತೆ ಇದೆ. ಈ ವಿಷಯವನ್ನು ಧೃಢೀಕರಿಸುವ ಸತೀಶ್ "ಈ ಸಿನೆಮಾದಲ್ಲಿ ವಿಜಯ್ ಪ್ರಸಾದ್ ಅವರೊಂದಿಗೆ ಕೆಲಸ ಮಾಡುತ್ತಿರುವ ಸಂಗತಿಯೇ ಸಂತಸ ತಂದಿದೆ. ನಿರ್ದೇಶಕರು ಈಗ ಕಥೆ ಹೇಳಿದ ಮೇಲೆ ಚಿತ್ರೀಕರಣ ಪ್ರಾರಂಭವಾಗುವುದಕ್ಕೆ ಹವಣಿಸುತ್ತಿದ್ದೇನೆ. ಈ ಕಥೆ ನನಗಾಗಿಯೇ ಹೆಣೆದಿದ್ದಾರೆ ಎಂದೆನಿಸಿದೆ" ಎನ್ನುತ್ತಾರೆ. 
ಈ ಹಿಂದೆ 'ಪೆಟ್ರೋಮ್ಯಾಕ್ಸ್' ಸಿನೆಮಾಗೆ ನಟ-ನಿರ್ದೇಶಕ ಜೋಡಿ ಒಟ್ಟಾಗಬೇಕಿತ್ತು. ಆದರೆ ವಿವಿಧ ಕಾರಣಗಳಿಗೆ ಈ ಯೋಜನೆ ಪ್ರಾರಂಭವಾಗಲೇ ಇಲ್ಲ. "ವಿಜಯ್ ಪ್ರಸಾದ್ ಕಥಾವಸ್ತುವಿಗೆ ನೀಡುವ ಒತ್ತು ಮತ್ತು ಅವರ ನಿಖರ ಸಂಭಾಷಣೆ ನನ್ನ ನಟನೆಗೆ ಸಹಕರಿಸುತ್ತದೆ. ಅವರಿಗೆ ಏನು ಬೇಕು ಎಂಬುದರ ಬಗ್ಗೆ ಸ್ಪಷ್ಟವಾಗಿದ್ದಾರೆ ಮತ್ತು ಅದಕ್ಕಾಗಿ ಶ್ರಮವಹಿಸುತ್ತಾರೆ. ನೀರ್ ದೋಸೆ ಅದಕ್ಕೆ ಉದಾಹರಣೆ" ಎನ್ನುತ್ತಾರೆ ಸತೀಶ್. 
ಈಗ 'ಬ್ಯುಟಿಫುಲ್ ಮನಸ್ಸುಗಳು' ಯಶಸ್ಸಿನ ನಂತರ ನಿರ್ಮಾಪಕ ಪ್ರಸನ್ನ ಅವರೊಂದಿಗೆ ಕೆಲಸ ಮಾಡುತ್ತಿರುವುದಕ್ಕೆ ಖುಷಿ ತಂದಿದೆ ಎನ್ನುವ ಸತೀಶ್ "ಅವರಿಗೆ ಸಿನೆಮಾ ನಿರ್ಮಾಣದ ಮೇಲೆ ಪ್ಯಾಷನ್ ಇದೆ. 'ಗಣೇಶ್ ಮೆಡಿಕಲ್ಸ್' ತಂಡಕ್ಕೆ ನನ್ನನ್ನು ಕರೆತಂದವರು ಅವರೇ" ಎನ್ನುತ್ತಾರೆ. 
'ಟೈಗರ್ ಗಲ್ಲಿ', 'ಚಂಬಲ್' ಸಿನೆಮಾಗಳಲ್ಲಿ ಸದ್ಯಕ್ಕೆ ಸತೀಶ್ ಕಾರ್ಯನಿರತರಾಗಿದ್ದಾರೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ನಾವು ದಾಳಿ ಮಾಡದೇ ಹೋಗಿದ್ದರೆ ಇಷ್ಟು ಹೊತ್ತಿಗೆ Iran ಅಣ್ವಸ್ತ್ರ ರಾಷ್ಟ್ರವಾಗಿರುತ್ತಿತ್ತು': ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು

IPL 2026: ತವರಿನಲ್ಲಿ ಮುಂಬೈ ಗೆ ಮುಖಭಂಗ; RCB ಗೆ 18 ರನ್ ಭರ್ಜರಿ ಗೆಲುವು!

7 ತಿಂಗಳ ಮಗುವಿಗಾಗಿ ಕೆಲಸದ ಸಮಯದ ಹೊಂದಾಣಿಕೆ ಕೋರಿದ ಭಾರತೀಯ ಉದ್ಯೋಗಿ; US ಮ್ಯಾನೇಜರ್ ಪ್ರತಿಕ್ರಿಯೆ ಬಗ್ಗೆ ಜಾಲತಾಣಗಳಲ್ಲಿ ಭಾರಿ ಚರ್ಚೆ!

ಗುರಿ ಇಟ್ಟಿದ್ದು ಜಿಹಾದಿ ಬಂಡುಕೋರರಿಗೆ, ಗುರಿಯಾಗಿದ್ದು ಸ್ಥಳೀಯ ಮಾರ್ಕೆಟ್; 100 ಕ್ಕೂ ಹೆಚ್ಚು ನಾಗರಿಕರ ಮಾರಣಹೋಮ!

IPL 2026: ಮುಂಬೈ ವಿರುದ್ದ ಭರ್ಜರಿ ಬ್ಯಾಟಿಂಗ್; ಬಾಬರ್ ಆಜಂ, ಕ್ರಿಸ್ ಗೇಯ್ಲ್ ದಾಖಲೆ ಮುರಿದ Virat Kohli!

SCROLL FOR NEXT