ನಿರ್ದೇಶಕ ರಾಜಮೌಳಿ ಹಾಗೂ ಬಾಹುಬಲಿ ಚಿತ್ರದ ಹೊಸ ಪೋಸ್ಟರ್ 
ಸಿನಿಮಾ ಸುದ್ದಿ

ನಟ ಪ್ರಭಾಸ್ ರಿಂದಾಗಿ ಬಾಹುಬಲಿ ಸಾಧ್ಯವಾಯಿತು: ನಿರ್ದೇಶಕ ರಾಜಮೌಳಿ

ನಟ ಪ್ರಭಾಸ್ ಅವರಿಂದಾಗಿಯೇ ಬಾಹುಬಲಿ ಚಿತ್ರ ಸಾಧ್ಯವಾಯಿತು ಎಂದು ಖ್ಯಾತ ನಿರ್ದೇಶಕ ರಾಜಮೌಳಿ ಹೇಳಿದ್ದಾರೆ.

ಮುಂಬೈ: ನಟ ಪ್ರಭಾಸ್ ಅವರಿಂದಾಗಿಯೇ ಬಾಹುಬಲಿ ಚಿತ್ರ ಸಾಧ್ಯವಾಯಿತು ಎಂದು ಖ್ಯಾತ ನಿರ್ದೇಶಕ ರಾಜಮೌಳಿ ಹೇಳಿದ್ದಾರೆ.

ಮುಂಬೈನಲ್ಲಿ ಬಾಹುಬಲಿ-2 ಚಿತ್ರದ ಐಮ್ಯಾಕ್ಸ್ ಪೋಸ್ಟರ್ ರಿಲೀಸ್ ಮಾಡಿ ಮಾತನಾಡಿದ ರಾಜಮೌಳಿ ಅವರು, ಚಿತ್ರದ ನಾಯಕ ನಟ ಪ್ರಭಾಸ್ ಅವರನ್ನು ಮುಕ್ತಕಂಠದಿಂದ ಶ್ಲಾಘಿಸಿದರು. ಪ್ರಭಾಸ್ ಅವರ ನೆರವು ಇಲ್ಲದೇ  ಹೋಗಿದ್ದರೆ ಬಾಹುಬಲಿ ಚಿತ್ರವೇ ಸಾಧ್ಯವಾಗುತ್ತಿರಲಿಲ್ಲ. ಈ ಒಂದು ಚಿತ್ರಕ್ಕಾಗಿ ಪ್ರಭಾಸ್ ತಮ್ಮ ಜೀವನದ ಅಮೂಲ್ಯ ಮೂರುವರೆ ವರ್ಷ ಸಮಯವನ್ನು ಮುಡುಪಾಗಿಟ್ಟಿದ್ದರು. ಅವರ ಈ ಸಮರ್ಪಣಾ ಭಾವದಿಂದಲೇ ಬಾಹುಬಲಿ  ಚಿತ್ರ ಸಾಧ್ಯವಾಯಿತು ಎಂದು ಹೇಳಿದ್ದಾರೆ.

ನನ್ನ ಪ್ರಕಾರ ಯಾವುದೇ ನಟ ಕೂಡ ಕೇವಲ ಒಂದು ಚಿತ್ರಕ್ಕಾಗಿ ಇಷ್ಟು ಪ್ರಮಾಣದ ಸಮಯ ಮತ್ತು ಸಮರ್ಪಣೆಯಿಂದ ಇರಲು ಸಾಧ್ಯವಿಲ್ಲ. ಬಾಹುಬಲಿ ಎಂಬ ದೊಡ್ಡ ಹಡಗಿನಲ್ಲಿ ನಾವು ಪ್ರಯಾಣಿಸುತ್ತಿದ್ದೇವೆ. ಬಾಹುಬಲಿ ಎಂಬ  ಇಡೀ ಪ್ರಾಜೆಕ್ಟ್ ನಲ್ಲಿ ಇತರರಂತೆ ನಾನು ಕೂಡ ಓರ್ವ ಕಾರ್ಮಿಕ. ಬಾಹುಬಲಿ ಪ್ರಾಜೆಕ್ಟ್ ದೊಡ್ಡದೇ ಹೊರತು ನಿರ್ಮಾಪಕರಾಗಲಿ ಅಥವಾ ನಿರ್ದೇಶಕನಾದ ನಾನಲ್ಲ ಎಂದು ರಾಜಮೌಳಿ ಹೇಳಿದ್ದಾರೆ.

ಇದೇ ವೇಳೆ ಐಮ್ಯಾಕ್ಸ್ ಪೋಸ್ಟರ್ ಕುರಿತು ಮಾತನಾಡಿದ ರಾಜಮೌಳಿ, 15 ವರ್ಷಗಳ ಹಿಂದ ನಾನು ಐಮ್ಯಾಕ್ಸ್ ಮಾದರಿಯ ಮೊದಲ ಸಿನಿಮಾ ನೋಡಿದ್ದೆ. 70 ಎಂಎಂ ಚಿತ್ರಗಳನ್ನು ನೋಡಿ ಬೆಳೆದಿದ್ದ ನಮಗೆ ಐಮ್ಯಾಕ್ಸ್ ಚಿತ್ರ  ಹೊಸ ಅನುಭವ ನೀಡಿತು. ಆಗಲೇ ನಿರ್ಧರಿಸಿದ್ದ ಜೀವನದಲ್ಲಿ ಒಮ್ಮೆಯಾದರೂ ಐಮ್ಯಾಕ್ಸ್ ಮಾದರಿಯಲ್ಲಿ ಚಿತ್ರ ನಿರ್ಮಾಣ ಮಾಡಬೇಕು ಎಂದು. ಇದೀಗ ಬಾಹುಬಲಿ ಮೂಲಕ ಆ ಕನಸು ಈಡೇರಿದೆ. ಬಾಹುಬಲಿ-2ವನ್ನು ಐಮ್ಯಾಕ್ಸ್  ಮಾದರಿ ಮೂಲಕ ಡಿಜಿಟಲಿ ಎಡಿಟ್ ಮಾಡಲಾಗಿದೆ. ಹೀಗಾಗಿ ಚಿತ್ರ ತುಂಬಾ ರಿಚ್ ಆಗಿ ಕಾಣಲಿದೆ. ಬಾಹುಬಲಿ-2 ಚಿತ್ರದ ಕಥೆಯೇ ಆ ಮಾದರಿಯ ತಂತ್ರಜ್ಞಾನ ಕೇಳುತ್ತದೆ ಎಂದು ಹೇಳಿದರು.

ಈಗಾಗಲೇ ದಾಖಲೆ ಪ್ರಮಾಣದ ಚಿತ್ರಮಂದಿರಗಳು ಬುಕ್ ಆಗಿವೆ. ಆದರೂ ಮತ್ತಷ್ಟು ಥಿಯೇಟರ್ ಗಳ ಅಗತ್ಯವಿದ್ದು, ಈ ಬಗ್ಗೆ ಚರ್ಚೆ ನಡೆಸುತ್ತಿದ್ದೇವೆ. ಅತೀ ಹೆಚ್ಚು ಥಿಯೇಟರ್ ಗಳಲ್ಲಿ ಬಿಡುಗಡೆ ಮಾಡಿದರೆ ಹೆಚ್ಚು ಮಂದಿ  ವೀಕ್ಷಿಸುತ್ತಾರೆ. ಇದು ಪ್ರಸ್ತುತ ಬಿಸಿನೆಸ್ ತಂತ್ರಗಾರಿಕೆಯಾಗಿದ್ದು, ಇದನ್ನೇ ನಾವು ಕೂ ಅನುಸರಿಸುತ್ತಿದ್ದೇವೆ ಎಂದು ರಾಜಮೌಳಿ ಹೇಳಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Delhi Building Collapse: ಸಾವಿನ ಸಂಖ್ಯೆ 3ಕ್ಕೆ ಏರಿಕೆ; 9 ಮಂದಿ ರಕ್ಷಣೆ, ಇನ್ನೂ 40ಕ್ಕೂ ಹೆಚ್ಚು ಮಂದಿ ಸಿಲುಕಿರುವ ಶಂಕೆ, ತನಿಖೆಗೆ ಸಮಿತಿ ರಚನೆ!

43ನೇ ವಯಸ್ಸಿನಲ್ಲಿ ಶಿಶ್ನ ಹಿಗ್ಗುವಿಕೆ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿದ್ದ ಕೋಟ್ಯಾಧಿಪತಿ ಇಘೋ ಉಬಿರಿಬೊ ಸಾವು!

Delhi building collapse: ‘ಪ್ರತಿ ವಿದ್ಯಾರ್ಥಿಯ ಜೀವವೂ ಅಮೂಲ್ಯ, ರಕ್ಷಣೆ ಖಚಿತಪಡಿಸಬೇಕು’: ಮೋದಿ ಸರ್ಕಾರಕ್ಕೆ ರಾಹುಲ್ ಗಾಂಧಿ ಆಗ್ರಹ

Toxic ಮೂಲಕ ಇತಿಹಾಸ ಸೃಷ್ಟಿಸಿದ ಯಶ್; ಕನ್ನಡದ ಏಕೈಕ ನಟನಾಗಿ ಹೊಸ ದಾಖಲೆ!

ರಕ್ಷಾಬಂಧನ ದಿನದಂದೇ ಅಣ್ಣನ ಬಗ್ಗೆ ಕೆಟ್ಟ ಕಾಮೆಂಟ್, ಅತ್ತಿಗೆಯ ಕತ್ತು ಕೊಯ್ದು ನೀರಿನ ಟ್ಯಾಂಕ್‌ಗೆ ಎಸೆದ ತಂಗಿ!