ಹರಿಪ್ರಿಯಾ-ಚಿರಂಜೀವಿ ಸರ್ಜಾ-ಕಾವ್ಯ ಶೆಟ್ಟಿ
ಬೆಂಗಳೂರು: ನಟರಾದ ಚಿರಂಜೀವಿ ಸರ್ಜಾ ಮತ್ತು ಚಿಕ್ಕಣ್ಣ ಹಾಗು ನಿರ್ದೇಶಕ ಗುರು ದೇಶಪಾಂಡೆ ತ್ರಿವಳಿ ತಂಡ 'ರುದ್ರತಾಂಡವ' ಸಿನೆಮಾದ ನಂತರ ಮತ್ತೊಂದು ಯೋಜನೆಗೆ ಒಂದುಗೂಡಿದೆ. ಈ ಸ್ಕ್ರಿಪ್ಟ್ ಮತ್ತು ತಂಡಕ್ಕಾಗಿ ಈ ಸಿನಿಮಾದತ್ತ ಚಿರಂಜೀವಿ ಸೆಳೆದಿದ್ದಾರೆ.
ಈ ಬಾರಿ ಈ ತ್ರಿವಳಿ ನಿಗೂಢ ಥ್ರಿಲ್ಲರ್ ಸಿನೆಮಾಗೆ ಒಂದಾಗಿದೆ. ರೋಮ್ಯಾನ್ಸ್ ಸುತ್ತ ಸುತ್ತುವ ಈ ಥ್ರಿಲ್ಲರ್ ಚಿತ್ರಕ್ಕೆ 'ಸಂಹಾರ' ಎಂದು ಹೆಸರಿಸಲಾಗಿದೆ.
ಏಪ್ರಿಲ್ ೨೯ ರಿಂದ ಸಿನೆಮಾದ ಚಿತ್ರೀಕರಣ ಪ್ರಾರಂಭವಾಗಲಿದ್ದು, ಈ ಪಾತ್ರಕ್ಕೆ ಚಿರಂಜೀವಿ ಸೂಕ್ತ ಎನ್ನುತ್ತಾರೆ ನಿರ್ದೇಶಕ. "ಇತ್ತೀಚಿಗೆ ಚಿರಂಜೀವಿ ಪಾತ್ರಗಳನ್ನು ಅತಿ ಹೆಚ್ಚು ಎಚ್ಚರಿಕೆಯಿಂದ ಆಯ್ಕೆ ಮಾಡಿಕೊಳ್ಳುತ್ತಾರೆ. ಇದು ಕೂಡ ನಟನಿಗೆ ವಿಶಿಷ್ಟ ವಿಷಯ ಆಗಲಿದೆ ನಟಿಸುವುದಕ್ಕೆ" ಎನ್ನುತ್ತಾರೆ ಗುರು.
ಇತ್ತ ಚಿರಂಜೀವಿ ಸರ್ಜಾ ತಮ್ಮ 'ಆಕೆ' ಸಿನೆಮಾದ ಬಿಡುಗಡೆಯನ್ನು ಎದುರು ನೋಡುತ್ತಿದ್ದಾರೆ. ಕೆ ಎಂ ಚೈತನ್ಯ ಈ ಸಿನೆಮಾದ ನಿರ್ದೇಶಕ.
'ಸಂಹಾರ' ಸಿನೆಮಾಗೆ ಹರಿಪ್ರಿಯಾ ಮತ್ತು ಕಾವ್ಯ ಶೆಟ್ಟಿ, ಇಬ್ಬರು ಹೀರೋಯಿನ್ ಗಳು.