ಚೆನ್ನೈ: ಸೂಪರ್ ಸ್ಟಾರ್ ರಜನಿಕಾಂತ್ ನಟನೆಯ ಬಹುನಿರೀಕ್ಷಿತ ಸಿನಿಮಾ 2.0 ದ ಬಿಡುಗಡೆಯ ದಿನಾಂಕ ಮುಂದೂಡಲ್ಪಟ್ಟಿದ್ದು 2018 ರ ಜ.25 ಕ್ಕೆ ಬಿಡುಗಡೆಯಾಗಲಿದೆ.
ಈ ವರ್ಷದ ದೀಪಾವಳಿಯ ದಿನದಂದು 2.0 ಚಿತ್ರವನ್ನು ಬಿಡುಗಡೆ ಮಾಡಲು ಉದ್ದೇಶಿಸಲಾಗಿತ್ತು. ಆದರೆ ವಿಶ್ವದರ್ಜೆಯ ವಿಎಫ್ಎಕ್ಸ್ ಗಾಗಿ ಕೆಲಸ ಮಾಡುತ್ತಿರುವುದರಿಂದ ಹೆಚ್ಚಿನ ಸಮಯ ತೆಗೆದುಕೊಳ್ಳಲಿದೆ. ಅಮೆರಿಕಾದಲ್ಲಿ ವಿಶ್ಯುಯಲ್ ಎಫೆಕ್ಟ್ ಹೊಂದಿರುವ ಭಾಗದ ಕೆಲಸ ನಡೆಯುತ್ತಿದ್ದು ಚಿತ್ರತಂಡ ಕಾರ್ಯನಿರತವಾಗಿದೆ ಈ ಹಿನ್ನೆಲೆಯಲ್ಲಿ 2018 ರ ಜ.25 ಕ್ಕೆ ಬಿಡುಗಡೆ ದಿನಾಂಕವನ್ನು ಮುಂದೂಡಿದ್ದೇವೆ ಎಂದು ಲಿಕಾ ಪ್ರೊಡಕ್ಷನ್ಸ್ ನ ರಾಜು ಮಹಾಲಿಂಗಂ ಹೇಳಿದ್ದಾರೆ.
2.0 ಚಿತ್ರ 2010 ರಲ್ಲಿ ಬಿಡುಗಡೆಯಾದ ಎಂಥಿರನ್-2 ಸೀಕ್ವೆಲ್ ಚಿತ್ರವಾಗಿದ್ದು, ಬಾಲಿವುಡ್ ನಟ ಅಕ್ಷಯ್ ಕುಮಾರ್ ಸಹ ನಟಿಸಿದ್ದಾರೆ. ಚಿತ್ರಕ್ಕೆ ಎಆರ್ ರೆಹಮಾನ್ ಸಂಗೀತ ನೀಡಿದ್ದು, 450 ಕೋಟಿ ಬಜೆಟ್ ನ ಚಿತ್ರವಾಗಿದೆ.