'ದಂಡುಪಾಳ್ಯ೨'ರಲ್ಲಿ ಪೂಜಾ ಗಾಂಧಿ ಮಹಿಳಾ ಪಾತ್ರಧಾರಿಗೆ ಚುಂಬಿಸುತ್ತಿರುವ ದೃಶ್ಯ
ಬೆಂಗಳೂರು: ಶ್ರೀನಿವಾಸ ರಾಜು ಅವರ 'ದಂಡುಪಾಳ್ಯ' ಮೊದಲನೇ ಭಾಗಗ ಕೆಲವು ದಿಟ್ಟತನದ ದೃಶ್ಯಗಳು ಹೆಚ್ಚೆಚ್ಚು ಚರ್ಚೆಗೆ ಗ್ರಾಸವಾಗಿದ್ದವು. ಪೂಜಾಗಾಂಧಿ ಅವರ ಕೆಲವು ದೃಶ್ಯಗಳಂತೂ ಕೊಂಚ ವಿವಾದವನ್ನು ಎಬ್ಬಿಸಿದ್ದವು.
"ಪೂಜಾ ಅವರ ನಗ್ನ ಬೆನ್ನಿನ ದೃಶ್ಯ ಹಿಡಿದು ಸಲ್ಲದ ಚರ್ಚೆಗಳು ಎದ್ದಿದ್ದವು ಆದರೆ ಜನ ಕೊನೆಗೆ ಸಿನೆಮಾ ನೋಡಿದ ಮೇಲೆ ಅದು ಸಿನೆಮಾಗೆ ಅಗತ್ಯವಿದ್ದ ದೃಶ್ಯ ಎಂದು ತಿಳಿದರು" ಎನ್ನುವ ನಿರ್ದೇಶಕ ಈಗ ದ್ವಿತೀಯ ಭಾಗದಲ್ಲಿಯೂ ಇನ್ನಷ್ಟು ಪ್ರಚೋದನಕಾರಿ ಸಂಗತಿಗಳನ್ನು ಚರ್ಚಿಸಿದ್ದಾರೆ.
ನಟಿ ಪೂಜಾಗಾಂಧಿ ಮತ್ತೊಬ್ಬ ಮಹಿಳಾ ಪಾತ್ರವನ್ನು ಚುಂಬಿಸುತ್ತಿರುವ ದೃಶ್ಯ ಈಗ 'ದಂಡುಪಾಳ್ಯ೨'ರಲ್ಲಿ ಮೂಡಿ ಬಂದಿದ್ದು ಚರ್ಚೆಗೆ ಎಡೆಮಾಡಿಕೊಟ್ಟಿದೆ. ಇದು ಕಥಾ ನಿರೂಪಣೆಗೆ ಅಗತ್ಯವಾಗಿದ್ದ ದೃಶ್ಯ ಎನ್ನುವ ನಿರ್ದೇಶಕ ಶ್ರೀನಿವಾಸ್ "ಇದು ಇಬ್ಬರು ಜೈಲು ಖೈದಿಗಳು ಚುಂಬಿಸುವ ದೃಶ್ಯ, ಪ್ರಚಾರಕ್ಕಾಗಿ ಮಾಡಿರುವುದಲ್ಲ" ಎನ್ನುತ್ತಾರೆ. "ಸ್ಕ್ರಿಪ್ಟ್ ಗೆ ಅಗತ್ಯವಿದ್ದಂತೆ ನಾನು ಚಿತ್ರೀಕರಿಸುತ್ತೇನೆ ನಂತರ ಪ್ರೇಕ್ಷಕರಿಗೆ ನಿರ್ಧರಿಸಲು ಬಿಡುತ್ತೇನೆ. ನಾನು ನನ್ನ ಸಿನೆಮಾಗಳನ್ನು ಪ್ರೀತಿಸುತ್ತೇನೆ ಮತ್ತು ಅದರಲ್ಲಿ ಸುಳ್ಳುಗಳನ್ನು ಉಳಿಸುವುದಿಲ್ಲ. ಎಲ್ಲವನ್ನು ಪ್ರಾಮಾಣಿಕತೆಯಲ್ಲೇ ನಾನು ಮಾಡುವುದು" ಎನ್ನುತ್ತಾರೆ.
ನಿರ್ದೇಶಕ ಶ್ರೀನಿವಾಸ್ ಹೇಳುವಂತೆ ಈ ದೃಶ್ಯವನ್ನು ಚಿತ್ರೀಕರಿಸಲು ಪೂಜಾ ಮೊದಲ ಬಾರಿಗೆ ತುಸು ಹಿಂಜರಿದಿದ್ದರಂತೆ. ಆದರೆ ನಂತರ ಅದನ್ನು ನಿಭಾಯಿಸಿದರು ಎನ್ನುವ ಅವರು "ಕೊನೆಗೆ ಅವರಿಗೆ ಸ್ಕ್ರಿಪ್ಟ್ ನಲ್ಲಿ ನಂಬಿಕೆಯಿತ್ತು ಮತ್ತು ಈ ದೃಶ್ಯದ ನಾಲ್ಕನೇ ಬಾರಿ ಚಿತ್ರೀಕರಣದ ವೇಳೆಗೆ ನಿಖರವಾಗಿ ಅಭಿನಯಿಸಿದರು" ಎನ್ನುತ್ತಾರೆ.
'ದಂಡುಪಾಳ್ಯ೨' ಸಿನೆಮಾದಲ್ಲಿ ಶ್ರುತಿ, ಮಾರ್ಕಂಡ್ ದೇಶಪಾಂಡೆ, ರವಿ ಕಾಳೆ, ಸಂಜನಾ, ಪೆಟ್ರೋಲ್ ಪ್ರಸನ್ನ, ಕರಿಸುಬ್ಬು, ಯತಿರಾಜ್, ಡ್ಯಾನಿ, ಜಯದೇವ್ ಮತ್ತು ಮುನಿ ಕೂಡ ನಟಿಸಿದ್ದಾರೆ. ಈಗ ಸಿನೆಮಾದ ಮೂರನೇ ಭಾಗವನ್ನು ಕೂಡ ಚಿತ್ರೀಕರಿಸುತ್ತಿರುವ ನಿರ್ದೇಶಕ, ಬಾಕ್ಸ್ ಆಫಿಸ್ ಗಳಿಕೆಯ ಬಗ್ಗೆ ತಲೆಕೆಡಿಸಿಕೊಂಡಿಲ್ಲ ಎನ್ನುತ್ತಾರೆ. ಅರ್ಜುನ್ ಜನ್ಯ ಅವರ ಸಂಗೀತ ಚಿತ್ರಕ್ಕಿದ್ದು ವೆಂಕಟ್ ಪ್ರಸಾದ್ ಅವರ ಸಿನೆಮ್ಯಾಟೋಗ್ರಫಿ ಇದೆ.