ಮುಂಬೈ: ಇರಾನ್ ನ ಖ್ಯಾತ ನಿರ್ದೇಶಕ ಮಜೀದ್ ಮಜಿದಿ, ತಮ್ಮ ಮುಂದಿನ ಸಿನೆಮಾ 'ಬಿಯಾಂಡ್ ದ ಕ್ಲೌಡ್ಸ್' ಚಿತ್ರೀಕರಣವನ್ನು ಛತ್ರಪತಿ ಶಿವಾಜಿ ಟರ್ಮಿನಲ್ ನಿಲ್ದಾಣದ ಬಳಿ ನಡೆಸುವಾಗ ಕಂಡುಬಂದಿದ್ದಾರೆ.
ಈ ಆಸ್ಕರ್ ನಾಮಾಂಕಿತ ನಿರ್ದೇಶಕ ವಿಶೇಷ ಸಿನೆಮಾ ದೃಶ್ಯವನ್ನು ಚಿತ್ರೀಕರಿಸಿದರು ಎಂದು ಸಿನೆಮಾ ನಿರ್ಮಾಪಕರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಜೀ ಸ್ಟುಡಿಯೋಸ್ ಮತ್ತು ಐಕ್ಯಾಂಡಿ ಫಿಲಂಸ್ ಜಂಟಿಯಾಗಿ ಈ ಸಿನೆಮಾ ನಿರ್ಮಿಸುತ್ತಿದ್ದು, ಜಾಗತಿಕ ಪ್ರೇಕ್ಷಕರಿಗಾಗಿ ಮಜೀದ್ ಮಜಿದಿ ನಿರ್ದೇಶಿಸುತ್ತಿರುವ ಮೊದಲ ಭಾರತೀಯ ಕಥೆ ಇದು.
ಈ ಸಿನೆಮಾದಲ್ಲಿ ಇಶಾನ್ ಕಟ್ಟರ್ ಮತ್ತು ಮಾಳವಿಕಾ ಮೋಹನ್ ನಟಿಸುತ್ತಿದ್ದಾರೆ.