ನಟ ಚಿರು ಸರ್ಜಾ ಅಭಿನಯದ ಸಂಹಾರ ಚಿತ್ರದ ಫಸ್ಟ್ ಲುಕ್ ಬಿಡುಗಡೆಯಾಗಿದೆ. ಚಿತ್ರದಲ್ಲಿ ಚಿರು ಸರ್ಜಾ ಡಿಫರೆಂಟ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ.
ಚಿರು ಸರ್ಜಾ ದುಷ್ಟರನ್ನು ಸಂಹಾರ ಮಾಡುವ ಶಿವನ ಗೆಟಪ್ ನಲ್ಲಿ ಕಾಣಿಸಿಕೊಂಡಿದ್ದು ಇದೊಂದು ಪಕ್ಕಾ ಮಾಸ್ ಆ್ಯಕ್ಷನ್ ಚಿತ್ರವಾಗಿ ಕಂಡುಬರುತ್ತಿದೆ.
ರುದ್ರ ತಾಂಡವ ಚಿತ್ರದಲ್ಲಿ ಚಿರು ಸರ್ಜಾಗೆ ಚಿಕ್ಕಣ್ಣ ಸಾಥ್ ನೀಡಿದ್ದು ಸಂಹಾರ ಚಿತ್ರದಲ್ಲೂ ಇಬ್ಬರು ಒಟ್ಟಿಗೆ ಕಾಣಿಸಿಕೊಳ್ಳುತ್ತಿದ್ದಾರೆ. ಇನ್ನು ಚಿರುಗೆ ನಾಯಕಿಯಾಗಿ ಹರಿಪ್ರಿಯ ಮತ್ತು ಕಾವ್ಯ ಶೆಟ್ಟಿ ನಟಿಸಿದ್ದಾರೆ.
ಚಿತ್ರವನ್ನು ರಾಜಾಹುಲಿ ಖ್ಯಾತಿಯ ನಿರ್ದೇಶಕ ಗುರುದೇಶ್ ಪಾಂಡೆ ಚಿತ್ರವನ್ನು ನಿರ್ದೇಶಿಸಿದ್ದಾರೆ. ಉಗ್ರಂ ಚಿತ್ರಕ್ಕೆ ಸಂಗೀತ ನಿರ್ದೇಶಿಸಿದ್ದ ರವಿ ಬಸ್ರೂರ್ ಸಂಹಾರ ಚಿತ್ರಕ್ಕೆ ಸಂಗೀತ ಸಂಯೋಜಿಸುತ್ತಿದ್ದಾರೆ.