ಗೋಲ್ಡನ್ ಸ್ಟಾರ್ ಗಣೇಶ್ 11 ವರ್ಷಗಳ ನಂತರ ಖ್ಯಾತ ನಿರ್ದೇಶಕ ಯೋಗರಾಜ್ ಭಟ್ ರ ಜತೆ ಮುಗುಳು ನಗೆ ಮತ್ತು ಗಾಳಿಪಟ ಸಿಕ್ವೆಲ್ ನಲ್ಲಿ ನಟಿಸುತ್ತಿರುವುದು ಹಳೆಯ ವಿಚಾರ. ಆದರೆ ತಮ್ಮ ಪ್ರಸಿದ್ಧಿ ತಂದುಕೊಟ್ಟ ನಿರ್ದೇಶಕ ಮತ್ತು ಚಿತ್ರಗಳ ಸೀಕ್ವೆಲ್ ನಲ್ಲಿ ನಟಿಸುತ್ತಿರುವುದು ಮತ್ತೆ ಹಳೆ ಪ್ರಸಿದ್ಧ ಗಳಿಸುವ ಗುಂಗಿನಲ್ಲಿದ್ದಾರೆ.
ಸಿಂಪಲ್ ಸುನಿ ನಿರ್ದೇಶನದ ಚಮಕ್ ಚಿತ್ರದಲ್ಲಿ ಗಣಿ ನಟಿಸುತ್ತಿದ್ದು ಮುಗುಳು ನಗೆಗೆ ಡಬ್ಬಿಂಗ್ ಮಾಡುತ್ತಿದ್ದಾರೆ. ಇನ್ನು ಬಿಡುಗಡೆಗೆ ರೆಡಿಯಾಗಿರುವ ಪಟಾಕಿ ಚಿತ್ರದ ಪ್ರಚಾರ ಕಾರ್ಯದಲ್ಲೂ ಗಣೇಶ್ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.
ದಶಕದ ನಂತರ ನನ್ನ ಶಖೆ ಪುನರಾರಂಭವಾದಂತಿದೆ. ಎಲ್ಲಿಂದ, ಯಾರೊಂದಿಗೆ ನಾನೂ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದನೇ ಅವರ ಜತೆ ಮತ್ತೆ ಎರಡೂ ಚಿತ್ರಗಳಲ್ಲಿ ಅಭಿನಯಿಸುತ್ತಿದ್ದೇನೆ. ಭಟ್ರು ಜತೆಗೂಡಿ ನಾನು ಚಿತ್ರವೊಂದನ್ನು ಮಾಡುತ್ತೇನೊ ಇಲ್ಲವೋ ಎಂದು ಭಾವಿಸಿದ್ದೇ ಆದರೆ ಆ ಯೋಗ ದಶಕದ ನಂತರ ಒದಗಿ ಬಂದಿದೆ ಎಂದರು.
ದಶಕಗಳು ಕಳೆದರೂ ಭಟ್ರು ಬದಲಾಗಿಲ್ಲ. ನಾವಿಬ್ಬರೂ ಎರಡೂ ಮಕ್ಕಳ ತಂದೆಯಾಗಿದ್ದರು. ಭಟ್ರು ಇಂದಿಗೂ ಸೆಟ್ ನಲ್ಲಿ ತುಂಟತನದ ಜೋಕ್ ಗಳನ್ನು ಮಾಡುತ್ತಿರುತ್ತಾರೆ ಎಂದು ತಮ್ಮ ಮುಗುಳು ನಗೆ ಚಿತ್ರೀಕರಣದ ನೆನಪುಗಳನ್ನು ಗಣೇಶ್ ಹೊರಹಾಕಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics