ಸಿನಿಮಾ ಸುದ್ದಿ

ಒಂಟಿ ಎಸ್ಟೇಟ್ ನಲ್ಲಿ ಒನ್ ಕಪ್ ಕಾಫಿ ಮತ್ತು ಕ್ರೈಂ: ಕಾಫಿತೋಟ

Shilpa D
ಬೆಂಗಳೂರು: ನಿರ್ದೇಶಕರ ವರ್ತನೆಯ ಮೇರೆಗೆ ಸಿನಿಮಾ ತಯಾರಿಕೆ ಕೂಡ ನಿಂತಿರುತ್ತದೆ. ಆದರೆ ನಿರ್ದೇಶಕ ಟಿ.ಎನ್ ಸೀತಾರಾಂ ಮಾತ್ರ ತಮ್ಮ ತತ್ವ ಸಿದ್ದಾಂತಗಳಿಗೆ ಇನ್ನು ಬದ್ದರಾಗಿದ್ದಾರೆ.
ಮುಖಾಮುಖಿ, ಮನ್ವಂತರ, ಮುಕ್ತ ಮುಕ್ತ ಎಂಬಂತಹ ಹಿಟ್ ಧಾರಾವಾಹಿಗಳನ್ನು ನೀಡಿ ಹೆಸರುವಾಸಿಯಾಗಿರುವ ಸೀತಾರಾಂ ತಮ್ಮ ಮೂರನೇ ಸಿನಿಮಾ ಸದ್ಯದಲ್ಲೇ ಬಿಡುಗಡೆಯಾಗಲಿದೆ.
ಕ್ರೈಂ ಥ್ರಿಲ್ಲರ್ ಕಾಫಿ ತೋಟ ಸಿನಿಮಾದಲ್ಲಿ ರಾಧಿಕಾ ಚೇತನ್, ಸಂಯುಕ್ತಾ ಹೊರ್ನಾಡ್, ಮತ್ತು ರಘು ಮುಖರ್ಜಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದು,  ಸೆನ್ಸಾರ್ ಬೋರ್ಡ್ ಯು ಸರ್ಟಿಫಿಕೇಟ್ ನೀಡಿದ್ದು, ಮುಂದಿನ ವಾರ ರಿಲೀಸ್ ಆಗಲಿದೆ.
ದಶಕಗಳಿಂದ ನಾನು ಹೇಗೆ ಸಿನಿಮಾ ಮಾಡಿಕೊಂಡು ಬಂದಿದ್ದೇನೋ ಅದೇ ಶೈಲಿಯಲ್ಲಿ ಈ ಚಿತ್ರ ತಯಾರಾಗಿದೆ. ಯಾವುದೇ ಬದಲಾವಣಿಯಿಲ್ಲ, ಆದರೆ ಹೆಚ್ಚಿನ ತಂತ್ರಜ್ಞಾನ ಆಧಾರಿತವಾಗಿ ಕೆಲಸ ಮಾಡಿದ್ದೇವೆ ಎಂದು ನಿರ್ದೇಶಕ ಟಿ.ಎನ್ ಸೀತಾರಾಂ ಹೇಳಿದ್ದಾರೆ.
ಸಿನಿಮಾ ಅಪರಾಧ ಹಿನ್ನೆಲೆ ಕಥೆಯುಳ್ಳದ್ದಾಗಿದ್ದರೂ ಸಂಬಂಧಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ.
ಕಾಫಿ ಎಸ್ಟೇಟ್ ನಲ್ಲಿರುವ ಒಂಟಿ ಮನೆಯಲ್ಲಿ ನಡೆಯುವ ಕಥೆ ಇದಾಗಿದೆ. 'ಎ ಲಾಟ್ ಕ್ಯಾನ್ ಹ್ಯಾಪನ್ ಓವರ್ ಕಾಫಿ' ಎಂಬ ಫೇಮಸ್ ಟ್ಯಾಗ್ ಲೈನ್ ಹೊಂದಿದೆ. ಅಪರಾಧ ನಡೆದಾಗ ಸಂಬಂಧಗಳ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದನ್ನು ನನ್ನ ಸಿನಿಮಾದಲ್ಲಿ ತೋರಿಸಲಾಗಿದೆ. ಅದು ಒಳ್ಳೆಯದ್ದು ಆಗಿರಬಹುದು, ಕೆಟ್ಟದ್ದು ಆಗಿರಬಹುದು ಎಂದು ತಿಳಿಸಿದ್ದಾರೆ.
ಕ್ರೈಂ ಥ್ರಿಲ್ಲರ್ ಕೇವಲ ಮನಸ್ಸಿನ ಮೇಲೆ ಮಾತ್ರವಲ್ಲ, ಹೃದಯದ ಮೇಲೂ ಪರಿಣಾಮ ಬೀರುತ್ತದೆ ಎಂದು ಸೀತಾರಾಂ ಅಭಿಪ್ರಾಯ ಪಟ್ಟಿದ್ದಾರೆ.
ಸೀತಾರಾಂ ಅವರ ದೈನಂದಿನ ಧಾರಾವಾಹಿಗಳಲ್ಲಿ  ಬರುವ ಫ್ಯಾಮಿಲಿ ಡ್ರಾಮಾ, ರಾಜಕೀಯ, ಸಂಬಂಧಗಳು, ಅಪರಾಧ, ಥ್ರಿಲ್ಲರ್ ಮತ್ತು ಕೋರ್ಟ್ ಈ ಎಲ್ಲಾ ಥೀಮ್ ಗಳು ಸಿನಿಮಾದಲ್ಲಿವೆ. ನಾನು ಮೊದಲು ಮತದಾನ ರಾಜಕೀಯ ಕಥಾವಸ್ತುವುಳ್ಳ ಸಿನಿಮಾ ಸಿನಿಮಾ  ಮಾಡಿದೆ. ಎರಡನೇಯದು ಮೀರಾ, ರಾಘವ ಮಾಧವ ಎಂಬ ಸಿನಿಮಾ. ಈಗ ಮೂರನೇಯದ್ದು ಕಾಫಿ ತೋಟ ಅಪರಾಧ ಮತ್ತು ಕೋರ್ಟ್ ರೂಂ ಕಥಾ ವಸ್ತುವುಳ್ಳ ಸಿನಿಮಾ ಎಂದು ಅವರು ಹೇಳಿದ್ದಾರೆ, ಸೀತಾರಾಂ ಅವರ ಸಿನಿಮಾದಲ್ಲಿ ಒಂದು ಘನತೆಯಿರುತ್ತದೆ ಹಾಗಾಗಿ ಪ್ರೇಕ್ಷಕರನ್ನು ಹೆಚ್ಚೆಚ್ಚು ಸೆಳೆಯುತ್ತದೆ.
ಯುವ ನಿರ್ದೇಶಕರ ಸ್ಫೂರ್ತಿಯಿಂದ ಕಾಫಿ ತೋಟ ತಯಾರಾಗಿದೆ. ಕಳೆದ ಎರಡು ಮೂರು ವರ್ಷಗಳಿಂದ ಸ್ಯಾಂಡಲ್ ವುಡ್ ನಲ್ಲಿ ಹಲವು ಪ್ರತಿಭಾವಂತ ನಿರ್ದೇಶಕರು ಬೆಳಕಿಗೆ ಬಂದಿದ್ದಾರೆ. 
ಅದರಲ್ಲಿ ಕೆಲವರನ್ನು ಹೆಸರಿಸಬಹುದಾದರೇ,  ಡಿ. ಸತ್ಯ ಪ್ರಕಾಶ್,  ಹೇಮಂತ್ ರಾವ್, ಪವನ್ ಕುಮಾರ್, ಕೆ.ಎಂ ಚೈತನ್ಯ, ರಾಮಾ ರೆಡ್ಡಿ ಮತ್ತು ರಾಜಾ ಬಿ. ಶೆಟ್ಟಿ ಹೆಸರುಗಳನ್ನು ಸೀತಾರಾಂ ಉಲ್ಲೇಖಿಸಿದ್ದಾರೆ. ಇವೆರಲ್ಲಾ ತಮ್ಮ ಅತ್ಯುತ್ತಮವಾದ ಕಥೆಗಳು ಹಾಗೂ ಸಿನಿಮಾ ಮೂಲಕ ಹೆಸರು ಗಳಿಸಿದ್ದಾರೆ. ಇವರ ಜೊತೆ ಸ್ಪರ್ಧಿಸಲು ನಾನು ತುಂಬಾ ಹಿರಿಯ ವಯಸ್ಸಿನ ವ್ಯಕ್ತಿಯಾಗಿದ್ದೇನೆ. ನನ ಬಳಿಯೂ ಒಂದು ಅತ್ಯುತ್ತಮ ಕಥೆಯಿತ್ತು, ಅದು ಕಾಫಿತೋಟದ ಮೂಲಕ ಹೊರ ತಂದಿದ್ದೇನೆ ಎಂದು ಸೀತಾರಾಂ ಹೇಳಿದ್ದಾರೆ.
SCROLL FOR NEXT