ಬೆಂಗಳೂರು: ರೂಪದರ್ಶಿಯಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿರುವ ಕನ್ನಡತಿ ಶ್ರೀನಿಧಿ ರಮೇಶ್ ಶೆಟ್ಟಿ ಕನ್ನಡದ ಕೆಜಿಎಫ್ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.
ಹೊಂಬಾಳೆ ಫಿಲ್ಮ್ಸ್ ಅಡಿಯಲ್ಲಿ ಮ್ಯಾಗ್ನಮ್ ಒಪಸ್ ನಿರ್ಮಾಣದ ಪ್ರಶಾಂತ್ ನೀಲ್ ನಿರ್ದೇಶನ ಮಾಡುತ್ತಿರುವ ಕೆಜಿಎಫ್ ಸಿನಿಮಾದಲ್ಲಿ ಯಶ್ ಜೊತೆ ನಾಯಕಿಯಾಗಿ ನಟಿಸುತ್ತಿದ್ದಾರೆ. ಕನ್ನಡತಿಯಾಗಿ ಕನ್ನಡದಲ್ಲಿ ಮೊದಲ ಬಾರಿಗೆ ನಟಿಸುತ್ತಿರುವುದು ಹೆಮ್ಮೆ ಎನಿಸುತ್ತಿದೆ ಎಂದು ಹೇಳಿದ್ದಾರೆ.
ಎಲ್ಲರೂ ಕೆಜಿಎಫ್ ಸಿನಿಮಾ ಬಗ್ಗೆ ಮಾತನಾಡುತ್ತಿದ್ದಾರೆ. ಕಳೆದ ಒಂದು ವಾರದಿಂದ ಕೆಜಿಎಫ್ ತಂಡದ ಜೊತೆ ಸೇರಿದ್ದಾರೆ. ಆದರೆ ಸಿನಿಮಾ ನಿರ್ಮಾಪಕರ ಜೊತೆ ಬಹಳ ಹಿಂದಿನಿಂದಲೂ ಸಂಪರ್ಕವಿದೆ. ಪ್ರಾಜೆಕ್ಟ್ ಬಗ್ಗೆ ಹೆಚ್ಚಿನದಾಗಿ ತಿಳಿದುಕೊಳ್ಳಲು ನಿರಂತರ ಸಂಪರ್ಕದಲ್ಲಿದ್ದೆ, ನನಗೆ ಗೊತ್ತು ಮಾಡೆಲಿಂಗ್ ಹಾಗೂ ನಟನೆ ಬೇರೇಬೇರೆ. ಕ್ಯಾಮೆರಾವನ್ನು ಮೊದಲ ಬಾರಿಗೆ ಎದುರಿಸುವಾಗ ನಾನು ಸ್ವಲ್ಪ ಭಯಗೊಂಡಿದ್ದೆ. ಸನ್ನಿವೇಶವನ್ನು ಅರ್ಥಮಾಡಿಕೊಂಡು ಭಾವನೆ ಗಳನ್ನು ವ್ಯಕ್ತ ಪಡಿಸಿ ಅಭಿನಯಿಸುವುದು ಸುಲಭವಲ್ಲ, ಆದರೆ ನಾನು ಅದನ್ನು ಅಭ್ಯಾಸ ಮಾಡಿದ, ಜೊತೆಗೆ ಉತ್ತಮವಾಗಿ ನಟಿಸಿದ್ದೇನೆ, ನಾನು ಎಲ್ಲರ ರೀತಿ ಕಲಿತು ಬೆಳೆಯುತ್ತೇನೆ ಎಂಬ ನಂಬಿಕೆ ನನಗಿದೆ ಎಂದು ಹೇಳಿದ್ದಾರೆ.
ಮಿಸ್ ದಿವಾ-ಮಿಸ್ ಸೂಪರ್ ನ್ಯಾಷನಲ್ ಇಂಡಿಯಾ-2016 ಸೇರಿದಂತೆ ಮಾಡೆಲಿಂಗ್ ಕ್ಷೇತ್ರದ ಹಲವು ಪ್ರಶಸ್ತಿಗಳು ಶ್ರೀನಿಧಿ ಪಾಲಾಗಿವೆ. ಪ್ರೇಕ್ಷಕರ ಜೊತೆ ಬೆರೆಯಲು ಇಂಟರ್ ನ್ಯಾಷನಲ್ ಪಿಜೆಂಟ್ ಸ್ಪರ್ದೆ ನನಗೆ ನೆರವಾಯಿತು. ಪದೇ ಪದೇ ಪ್ರಯಾಣ ಮಾಡುವ ಅನಿವಾರ್ಯತೆ ಇದ್ದದ್ದರಿಂದ ಕಾರ್ಯಾಗಾರಗಳಲ್ಲಿ ಭಾಗವಹಿಸಲು ಸಾಧ್ಯವಾಗಲಿಲ್ಲ, ಆದರೆ ನಟನಾ ಹೋಮ್ ವರ್ಕ್ ಅನ್ನು ಶ್ರೀನಿಧಿ ತಮ್ಮ ಮನೆಯಲ್ಲಿ ಮಾಡುತ್ತಿದ್ದರು. ಹಳೇಯ ಹಾಗೂ ಹೊಸ ಸಿನಿಮಾಗಳನ್ನು ನೋಡಲು ಆರಂಭಿಸಿದೆ. ಕೆಜಿಎಫ್ ಸಿನಿಮಾಗೆ ಸಹಿ ಮಾಡುವ ಮೊದಲು ಹಲವಾರು ಚಿತ್ರಗಳನ್ನು ನೋಡಿದ್ದೇನೆ, ಕಲಾವಿದರ ಭಾವನೆ, ಮುಖದಲ್ಲಿ ವ್ಯಕ್ತ ವಾಗುವ ನೋವು ನಲಿವು ಬಾಡಿ ಲಾಂಗ್ವೇಜ್ ಎಲ್ಲವನ್ನೂ ಸೂಕ್ಷ್ಮವಾಗಿ ಗಮನಿಸಿ ನಾನು ಒಂಟಿಯಾಗಿದ್ದಾಗ ಕನ್ನಡಿ ಮುಂದೆ ನಿಂತು ಅಭಿನಯಿಸುತ್ತಿದ್ದೆ. ಆದರೆ ನಿಜವಾದ ಪಾಠ ಸೆಟ್ ನಲ್ಲಿ ಆರಂಭವಾಯಿತು ಎಂದು ತಿಳಿಸಿದ್ದಾರೆ.
ಚಿಕ್ಕವಳಾಗಿರುವಾಗಲೇ ನಾನು ಕ್ರೀಡೆ, ಡ್ಯಾನ್ಸ್, ಸ್ಟಡೀಸ್ ನಲ್ಲಿ ಭಾಗವಹಿಸುತ್ತಿದ್ದೆ. ನನ್ನ ಪೋಷಕರು ನಾನು ತೆರೆಯ ಮೇಲೆ ಬರಬೇಕೆಂದು ಬಯಸುತ್ತಿದ್ದರು. ಸಿನಿಮಾ ಇಂಡಸ್ಟ್ರಿಯ ಭಾಗವಾಗಿರುವುದು ನನಗೆ ಹೆಮ್ಮೆಯಿದೆ, ಆದರೆ ನಾನು ಮೊದಲು ನನ್ನ ಎಂಜನೀಯರಿಂಗ್ ಪದವಿ ಪೂರ್ಣಗೊಳಿಸಬೇಕಿದೆ. ಪೀಜೆಂಟ್ ನಲ್ಲಿ ಗೆಲುವು ಸಾಧಿಸಿದ ಮೇಲೆ ಕೆಜಿಎಫ್ ನಲ್ಲಿ ನನಗೆ ಆಫರ್ ಸಿಕ್ಕಿತು.
ಡಿಸೆಂಬರ್ ನಲ್ಲಿ ಮಾಡೆಲಿಂಗ್ ನ ಕೆಲಸಗಳು ಪೂರ್ಣಗೊಳಿಸಲಿದ್ದು, ಆನಂತರ ಬೇರೆ ಸಿನಿಮಾಗಳ ಬಗ್ಗೆ ಗಮನ ಹರಿಸುತ್ತೇನೆ, ಸಿನಿಮಾಗಾಗಿ ನಾನು ಎಲ್ಲವನ್ನೂ ತ್ಯಜಿಸುತ್ತೇನೆ, ಹಿಂದೆ ತಿರುಗಿ ನೋಡುವ ಪ್ರಶ್ನೆಯೆ ಇಲ್ಲ ಎಂದು ಶ್ರೀನಿಧಿ ಸ್ಪಷ್ಟ ಪಡಿಸಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos