ನಟ ಸದಾಶಿವ ಬ್ರಹ್ಮಾವರ 
ಸಿನಿಮಾ ಸುದ್ದಿ

ನನ್ನ ಮಕ್ಕಳೊಂದಿಗೆ ನಾನು ಚೆನ್ನಾಗಿದ್ದೇನೆ, ಅವೆಲ್ಲಾ ಗಾಳಿ ಸುದ್ದಿ: ಹಿರಿಯ ನಟ ಸದಾಶಿವ ಬ್ರಹ್ಮಾವರ

ಮಕ್ಕಳಿಂದ ಹಿರಿಯ ನಟ ಸದಾಶಿವ ಬ್ರಹ್ಮಾವರ ಅವರು ದೂರಾಗಿ, ಬೀದಿ ಅಲೆಯುತ್ತಿದ್ದಾರೆ ಎಂಬ ಊಹಾಪೋಹಗಳಿಗೆ ಕೊನೆಗೂ ಹಿರಿಯ ನಟ ತೆರೆ ಎಳೆದಿದ್ದು, ತಾವು ತಮ್ಮ ಮಕ್ಕಳೊಂದಿಗೆ ಚೆನ್ನಾಗಿದ್ದೇನೆ ಎಂದು ಸ್ಪಷ್ಟನೆ ನೀಡಿದ್ದಾರೆ.

ಬೆಂಗಳೂರು: ಮಕ್ಕಳಿಂದ ಹಿರಿಯ ನಟ ಸದಾಶಿವ ಬ್ರಹ್ಮಾವರ ಅವರು ದೂರಾಗಿ, ಬೀದಿ ಅಲೆಯುತ್ತಿದ್ದಾರೆ ಎಂಬ ಊಹಾಪೋಹಗಳಿಗೆ ಕೊನೆಗೂ ಹಿರಿಯ ನಟ ತೆರೆ ಎಳೆದಿದ್ದು, ತಾವು ತಮ್ಮ ಮಕ್ಕಳೊಂದಿಗೆ ಚೆನ್ನಾಗಿದ್ದೇನೆ ಎಂದು ಸ್ಪಷ್ಟನೆ ನೀಡಿದ್ದಾರೆ.

ಕಳೆದ ಮೂರು ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದ ಸದಾಶಿವ ಬ್ರಹ್ಮಾವರ ಅವರ ಕುರಿತಾದ ಗಾಳಿ ಸುದ್ದಿಗಳಿಗೆ ಸಂಬಂಧಿಸಿದಂತೆ ಇದೇ ಮೊದಲ ಬಾರಿಗೆ ಖಾಸಗಿ ಸುದ್ದಿವಾಹಿನಿಯೊಂದಿಗೆ ಮಾತನಾಡಿರುವ  ಸದಾಶಿವ ಅವರು, ಮಾಧ್ಯಮಗಳ ಸುದ್ದಿಯನ್ನು ಅಲ್ಲಗಳೆದಿದ್ದಾರೆ. "ನಾನು ನನ್ನ ಮಕ್ಕಳೊಂದಿಗೇ ಇದ್ದೇನೆ. ಅವರು ನನ್ನನ್ನು ಚೆನ್ನಾಗಿಯೇ ನೋಡಿಕೊಳ್ಳುತ್ತಿದ್ದಾರೆ. ಬ್ರಹ್ಮಾವರದಲ್ಲಿ ಮಗಳ ಮನೆ ಇದೆ, ಬೈಲಹೊಂಗಲದಲ್ಲಿ ಮಗನ  ಮನೆ ಇದೆ, ನಾನು ಎರಡೂ ಕಡೆ ತಿರುಗಾಡಿಕೊಂಡು ಆರಾಮವಾಗಿದ್ದೇನೆ. ನನಗೆ ಯಾವುದೇ ತೊಂದರೆ ಇಲ್ಲ. ಇತ್ತೀಚೆಗೆ ಕುಮಟಾ ಬಸ್ ನಿಲ್ದಾಣದಲ್ಲಿ ಬಸ್ ಗಾಗಿ ಕಾಯುತ್ತಿದ್ದಾಗ ಕೆಲವರು ನನ್ನನ್ನು ನೋಡಿ ಗುರುತಿಸಿದ್ದರು. ಬಹುಶಃ  ಇದನ್ನು ಕೆಲವರು ತಪ್ಪಾಗಿ ಅರ್ಥೈಸಿಕೊಂಡಿದ್ದಾರೆ ಎಂದು ಸದಾಶಿವ ಬ್ರಹ್ಮಾವರ ಅವರು ಹೇಳಿದ್ದಾರೆ.

ಮಕ್ಕಳ ವಿಳಾಸ ನೀಡಲು ಹಿಂಜರಿದ ನಟ
ಇದೇ ವೇಳೆ ತಾವು ಮಕ್ಕಳೊಂದಿಗೆ ಚೆನ್ನಾಗಿ ಇದ್ದೇನೆ ಎಂದು ಹೇಳಿದ ಸದಾಶಿವ ಅವರು ತಮ್ಮ ಮಕ್ಕಳ ವಿಳಾಸ ನೀಡಲು ಹಿಂಜರಿದಿದ್ದಾರೆ ಎಂದು ಮಾಧ್ಯಮವೊಂದು ಹೇಳಿದೆ. ಮೂಲಗಳ ಪ್ರಕಾರ ಇವರ ಒಬ್ಬ ಮಗ ರಾಷ್ಟ್ರೀಕೃತ  ಬ್ಯಾಂಕ್ ಒಂದರಲ್ಲಿ ಉನ್ನತ ಹುದ್ದೆಯಲ್ಲಿದ್ದಾರೆ ಎಂದು ತಿಳಿದುಬಂದಿದೆ.

ಇನ್ನು ಸದಾಶಿವ ಬ್ರಹ್ಮಾವರ ಆಪ್ತರು ಹೇಳಿರುವಂತೆ ಸದಾಶಿವ ಅವರು ಸೈದ್ಧಾಂತಿಕ ವ್ಯಕ್ತಿಯಾಗಿದ್ದು ತೀರಾ ಸ್ವಾಭಿಮಾನಿ, ಅವರ ಪುತ್ರರೊಂದಿಗಿನ ಸಣ್ಣ ಪುಟ್ಟ ವಿಚಾರಗಳ ಗೊಂದಲದಿಂದಾಗಿ ಅವರು ಆ ರೀತಿ ಹೇಳಿರಬಹುದು.  ಹೀಗಾಗಿ ಇಂತಹ ತಪ್ಪು ವಿಚಾರಗಳು ಮಾಧ್ಯಮಗಳಲ್ಲಿ ಹರಿದಾಡುತ್ತಿರಬಹುದು ಎಂದು ಹೇಳಿದ್ದಾರೆ.

ಒಟ್ಟಾರೆ ಕಳೆದ ಮೂರು ದಿನಗಳಿಂದ ತೀವ್ರ ಚರ್ಚೆಗೆ ಕಾರಣವಾಗಿದ್ದ ನಟ ಸದಾಶಿವ ಬ್ರಹ್ಮಾವರ ಪ್ರಕರಣ ತೆರೆಕಂಡಂತಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಉದ್ಯೋಗಾಕಾಂಕ್ಷಿಗಳಿಗೆ ಗುಡ್ ನ್ಯೂಸ್: 56 ಸಾವಿರ ಹುದ್ದೆ ನೇಮಕಕ್ಕೆ ಸಚಿವ ಸಂಪುಟ ಅಸ್ತು

ದಲಿತ ಸಚಿವರ ನಿಯೋಗ ಭೇಟಿ ಬೆನ್ನಲ್ಲೇ SC ಒಳ ಮೀಸಲಾತಿ ಮಸೂದೆಗೆ ರಾಜ್ಯಪಾಲರ ಅಂಕಿತ

T20 World Cup 2026: ಅಭಿಷೇಕ್, ಹಾರ್ದಿಕ್ ಅಬ್ಬರ; ಜಿಂಬಾಬ್ವೆ ವಿರುದ್ಧ ಟೀಂ ಇಂಡಿಯಾ ಭರ್ಜರಿ ಗೆಲುವು

AI, ಕೃಷಿ, ಸೈಬರ್ ಭದ್ರತೆ, UPI ಸೇರಿದಂತೆ ಸರಣಿ ಒಪ್ಪಂದಗಳಿಗೆ ಭಾರತ ಮತ್ತು ಇಸ್ರೇಲ್ ಸಹಿ

'ಸಂಘರ್ಷಕ್ಕೆ ಮಾನವೀಯತೆ ಬಲಿಯಾಗಬಾರದು': ಗಾಜಾ ಶಾಂತಿ ಯೋಜನೆಗೆ ಪ್ರಧಾನಿ ಮೋದಿ ಬೆಂಬಲ

SCROLL FOR NEXT