ಶಶಾಂಕ್ 
ಸಿನಿಮಾ ಸುದ್ದಿ

ತಮ್ಮದೇ ಸ್ವಂತ ಬ್ಯಾನರ್ ನಲ್ಲಿ ಮೂರು ಸಿನಿಮಾ ನಿರ್ಮಿಸುತ್ತಿರುವ ನಿರ್ದೇಶಕ ಶಶಾಂಕ್

ಶಾಂಕ್‌ ತಮ್ಮ ಸ್ವಂತ ಬ್ಯಾನರ್ ಅಡಿ ಬರೋಬ್ಬರಿ ಮೂರು ಸಿನಿಮಾ ಪ್ರಾಜೆಕ್ಟ್ ಕೈಗೆತ್ತಿಕೊಂಡಿದ್ದಾರೆ. ಪುನೀತ್‌ ಹೋಂ ಬ್ಯಾನರ್ ಅಡಿಯಲ್ಲಿ ...

ಬೆಂಗಳೂರು: ನಿರ್ದೇಶಕ ಶಶಾಂಕ್‌ ಸದ್ಯ ಪುನೀತ್‌ ಹೋಂ ಬ್ಯಾನರ್ ಅಡಿಯಲ್ಲಿ  ಹೊಸ ಸಿನಿಮಾ ನಿರ್ದೇಶಿಸುತ್ತಿದ್ದಾರೆ.
ಪುನೀತ್‌ರಾಜಕುಮಾರ್‌ ತಮ್ಮ ಪಿಆರ್‌ಕೆ ಬ್ಯಾನರ್‌ನಡಿ ನಿರ್ಮಿಸಲಿದ್ದು, ಚಿತ್ರ ಮುಂದಿನ ವರ್ಷ ಆರಂಭವಾಗಲಿದೆ. ಇದರ ಜೊತೆಗೆ ಶಶಾಂಕ್‌ ತಮ್ಮ ಸ್ವಂತ ಬ್ಯಾನರ್ ಅಡಿ ಬರೋಬ್ಬರಿ ಮೂರು ಸಿನಿಮಾ ಪ್ರಾಜೆಕ್ಟ್ ಕೈಗೆತ್ತಿಕೊಂಡಿದ್ದಾರೆ.
ಶಶಾಂಕ್‌ ಸಿನಿಮಾಸ್‌ ಎಂಬ ಬ್ಯಾನರ್‌  ನಡಿ ಅಜೇಯ್‌ ರಾವ್‌ ನಾಯಕರಾಗಿರುವ "ತಾಯಿಗೆ ತಕ್ಕ ಮಗ', "ಆಪರೇಷನ್‌ ಅಲಮೇಲಮ್ಮ' ಮೂಲಕ ನಾಯಕರಾದ ರಿಷಿ ನಟನೆ ಒಂದು ಚಿತ್ರ ಹಾಗೂ "ಕ್ರೇಜಿ ಬಾಯ್‌' ದಿಲೀಪ್‌ ಪ್ರಕಾಶ್‌ ಹೀರೋ ಆಗಿರುವ ಸಿನಿಮಾಗಳು ತಯಾರಾಗಲಿವೆ. 
ಅಜೇಯ್‌ರಾವ್‌ ನಾಯಕರಾಗಿರುವ "ತಾಯಿಗೆ ತಕ್ಕ ಮಗ' ಚಿತ್ರವನ್ನು ಶಶಾಂಕ್‌ ಅವರ ಶಿಷ್ಯ ರಘು ಕೋಮಿ ನಿರ್ದೇಶನ ಮಾಡುತ್ತಿದ್ದು, ಚಿತ್ರ ಇದೇ ಅಕ್ಟೋಬರ್‌ನಲ್ಲಿ ಆರಂಭವಾಗಲಿದೆ. ಇನ್ನು, ರಿಷಿ ನಾಯಕರಾಗಿರುವ ಚಿತ್ರ ಮುಂದಿನ ವರ್ಷ ಆರಂಭವಾಗಲಿದ್ದು, ಈ ಚಿತ್ರದ ನಿರ್ದೇಶಕರು ಇನ್ನಷ್ಟೇ ಅಂತಿಮವಾಗಬೇಕು. 
ದಿಲೀಪ್‌ ಪ್ರಕಾಶ್‌ ಅವರ ಸಿನಿಮಾವನ್ನು ಸ್ವತಃ ಶಶಾಂಕ್‌ ಅವರೇ ನಿರ್ದೇಶಿಸಲಿದ್ದು, ಪುನೀತ್ ಚಿತ್ರ ಮುಂಗಿದ ನಂತರ  ಪ್ರಾಜೆಕ್ಟ್ ಗೆ ಕೈ ಹಾಕಲಿದ್ದಾರೆ. ಸಿನಿಮಾ ಮಾಡಿಕೊಡಿ ಎಂದು ನನ್ನಲ್ಲಿ ಸಾಕಷ್ಟು ಮಂದಿ ನಿರ್ಮಾಪಕರು ಬರುತ್ತಾರೆ. ಆದರೆ, ನಾನು ಒಂದು ಸಿನಿಮಾ ಸಂಪೂರ್ಣ ಮುಗಿಯುವ ಮುಂಚೆ ಮತ್ತೂಂದು ಸಿನಿಮಾ ಮಾಡೋದಿಲ್ಲ. ಹಾಗಂತ ಸಿನಿಮಾ ಮಾಡಿಕೊಡಿ ಎಂದು ಬಂದವರನ್ನು ನಿರಾಸೆ ಮಾಡಿ ಕಳಿಸೋದು ಸರಿಯಲ್ಲ. 
ಹಾಗಾಗಿ, ನನ್ನದೇ ಒಂದು ತಂಡ ಮಾಡಿಕೊಂಡು ಜಾಯಿಂಟ್‌ವೆಂಚರ್‌ನಲ್ಲಿ ಸಿನಿಮಾ ಮಾಡಲು ಮುಂದಾಗಿದ್ದೇನೆ. ಇಲ್ಲಿ ಚಿತ್ರದ ಕ್ರಿಯೇಟಿವ್‌ ಪಾರ್ಟ್‌ ಬಗ್ಗೆ ನಾನು ಗಮನಹರಿಸುತ್ತೇನೆ ಎಂದು ಹೇಳಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರೈತರ ಸಾಲ ಮನ್ನಾಗೆ ಕೇಂದ್ರದ ನೆರವು ಕೇಳಿದ CM ಡಿಕೆ ಶಿವಕುಮಾರ್: ವಿಜಯೇಂದ್ರ, ಅಶೋಕ್‌ಗೂ ದೆಹಲಿಗೆ ಬರುವಂತೆ ಆಹ್ವಾನ

ಪ್ರತಿಭಟನಾಕಾರನ ತಂದೆ ಮೇಲೆ ಹಲ್ಲೆ ಆರೋಪ; ದೆಹಲಿಯಲ್ಲಿ ಭಾರೀ ಹೈಡ್ರಾಮಾ; ಹಿಂದುತ್ವ ಕಾರ್ಯಕರ್ತನ ಬಂಧನಕ್ಕೆ ಆಗ್ರಹ, ಪೊಲೀಸ್ ಠಾಣೆಗೆ CJP ಮುತ್ತಿಗೆ

'Hanuman Ansh': ಸಿನಿಮಾ ವೀಕ್ಷಿಸಿದ ಟೀಂ ಇಂಡಿಯಾ ಮಾಜಿ ಆಟಗಾರ ವೀರೇಂದ್ರ ಸೆಹ್ವಾಗ್! ಹೇಳಿದ್ದೇನು? Video

ಮಳೆ ಕೊರತೆ, ಬರದ ಆತಂಕ; ರಾಜ್ಯದಲ್ಲಿ 28.52 ಕೋಟಿ ರೂ. ವೆಚ್ಚದಲ್ಲಿ ಮೋಡ ಬಿತ್ತನೆಗೆ ಸರ್ಕಾರ ಚಾಲನೆ

Mangaluru; ಬ್ರೇಕ್‌ಫಾಸ್ಟ್‌ಗೆ ತೆರಳಿದ್ದ ನಾಲ್ವರು ಕಾಲೇಜು ವಿದ್ಯಾರ್ಥಿಗಳಿಗೆ ಬೆದರಿಕೆ: ಸಂಘ ಪರಿವಾರದ ಇಬ್ಬರು ಸೇರಿ ಮೂವರ ವಿರುದ್ಧ FIR