ನಟ ಸುದೀಪ್ 
ಸಿನಿಮಾ ಸುದ್ದಿ

ಸ್ಯಾಂಡಲ್‏ವುಡ್ ಪ್ರಾಜೆಕ್ಟ್ ಗಳಿಗೆ ಸುದೀಪ್ ಆದ್ಯತೆ, ಬೇರೆ ಭಾಷೆಗೆ ಅನಂತರ!

ಸ್ಯಾಂಡಲ್ ವುಡ್ ನ ಸ್ಟಾರ್ ನಟ ಸುದೀಪ್ ಇದೀಗ ಮತ್ತೊಮ್ಮೆ ಗಡಿದಾಟಿ ಬಾಲಿವುಡ್ ಮತ್ತು ಇತರ .....

ಸ್ಯಾಂಡಲ್ ವುಡ್ ನ ಸ್ಟಾರ್ ನಟ ಸುದೀಪ್ ಇದೀಗ ಮತ್ತೊಮ್ಮೆ ಗಡಿದಾಟಿ ಬಾಲಿವುಡ್ ಮತ್ತು ಇತರ ದಕ್ಷಿಣ ಭಾರತ ಚಿತ್ರರಂಗದತ್ತ ಮುಖ ಮಾಡಿದ್ದಾರೆ. ತೆಲುಗು ಮತ್ತು ಹಿಂದಿ ಚಿತ್ರ ನಿರ್ಮಾಪಕರಿಂದ ಸುದೀಪ್ ಗೆ ಅವಕಾಶಗಳು ಬರುತ್ತಿದ್ದು, ಸದ್ಯದ ಮಟ್ಟಿಗೆ ತೆಲುಗಿನಲ್ಲಿ ಚಿರಂಜೀವಿಯವರ 151ನೇ ಚಿತ್ರ ಉಯ್ಯಲವಾಡ ನರಸಿಂಹ ರೆಡ್ಡಿ ಚಿತ್ರದಲ್ಲಿ ನಟಿಸಲು ಸುದೀಪ್ ಒಪ್ಪಿಕೊಂಡಿದ್ದಾರೆ.
ಬಹುಭಾಷಾ ಚಿತ್ರದಲ್ಲಿ ನಟಿಸಲು ಕೂಡ ಸುದೀಪ್ ರನ್ನು ಚಿತ್ರ ನಿರ್ಮಾಪಕರು ಸಂಪರ್ಕಿಸಿದ್ದಾರೆ. ಮಹಾಭಾರತ ಕಥೆಯನ್ನಾಧರಿಸಿದ ಚಿತ್ರದಲ್ಲಿ ಅಮಿತಾಬ್ ಬಚ್ಚನ್ ಮತ್ತು ವಿಕ್ರಮ್ ಕೂಡ ಇರಲಿದ್ದಾರೆ. ಬಾಲಿವುಡ್ ನಿರ್ದೇಶಕ ರೋಹಿತ್ ಶೆಟ್ಟಿಯವರ ಕಡೆಯಿಂದ ಸುದೀಪ್ ಗೆ ಈ ಅವಕಾಶ ಬಂದಿದೆಯಂತೆ. ಚಿತ್ರದ ಕುರಿತು ಮಾತುಕತೆ ನಡೆಯುತ್ತಿದ್ದು ಸುದೀಪ್ ಕಡೆಯಿಂದ ಇನ್ನೂ ಒಪ್ಪಿಗೆ ಸಿಕ್ಕಿಲ್ಲವಂತೆ.
ಇದಕ್ಕೆ ಕಾರಣ ಮುಂದಿನ ಪ್ರಾಜೆಕ್ಟ್ ಗಳನ್ನು ಒಪ್ಪಿಕೊಳ್ಳುವ ಮೊದಲು ಸುದೀಪ್ ಅವರು ಕನ್ನಡದಲ್ಲಿ ಈಗಾಗಲೇ ಒಪ್ಪಿಕೊಂಡು ಸಹಿ ಹಾಕಿರುವ ಕೆಲಸಗಳನ್ನು ಮುಗಿಸಬೇಕಿದೆ. 
ಸದ್ಯದ ಮಟ್ಟಿಗೆ ಕನ್ನಡ ಹೊರತುಪಡಿಸಿ ಬೇರೆ ಭಾಷೆಗಳಲ್ಲಿ ತೆಲುಗುನಲ್ಲಿ ಚಿರಂಜೀವಿ ಚಿತ್ರ ಹಾಗೂ ಹಾಲಿವುಡ್ ನಲ್ಲಿ ರೈಸನ್ ಚಿತ್ರಕ್ಕೆ ಮಾತ್ರ ಸಹಿ ಹಾಕಿದ್ದಾರೆ.
ಸುದೀಪ್ ಅವರು ಸದ್ಯ ಪ್ರೇಮ್ ಅವರ ವಿಲನ್ ಚಿತ್ರದಲ್ಲಿ ನಟಿಸುತ್ತಿದ್ದು, ನಂತರ ಎಸ್.ಕೃಷ್ಣ ಅವರ ಪೈಲ್ವಾನ್ ಮತ್ತು ಸೂರಪ್ಪ ಬಾಬು ಅವರ ಕೋಟಿಗೊಬ್ಬ 3 ಚಿತ್ರದಲ್ಲಿ ನಟಿಸಲಿದ್ದಾರೆ. ಅದರ ಮಧ್ಯೆ ಅಂಬರೀಷ್ ಜೊತೆಗೆ ಅಂಬಿ ನಿಂಗೆ ವಯಸ್ಸಾಯ್ತೊ ಚಿತ್ರದಲ್ಲಿ ನಟಿಸಲಿದ್ದು ಅದನ್ನು ತಮ್ಮ ಕಿಚ್ಚ ಬ್ಯಾನರ್ ನಡಿಯಲ್ಲಿಯೇ ತಯಾರಿಸುತ್ತಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

West-Asia war: ಅಮೆರಿಕಾ-ಇರಾನ್ ಸಂಘರ್ಷ ಮತ್ತಷ್ಟು ತೀವ್ರ; ಹಾರ್ಮುಜ್ ಜಲಸಂಧಿ ಮೇಲೆ ನೌಕಾ ದಿಗ್ಬಂಧನ, ಜಾಗತಿಕ ಮಾರುಕಟ್ಟೆಗಳಲ್ಲಿ ಹೆಚ್ಚಿದ ಆತಂಕ

ಕಾಂಗ್ರೆಸ್‌ನಲ್ಲಿ ಕುರ್ಚಿ ಕಸರತ್ತು: ದೆಹಲಿಗೆ 'ಕೈ' ಶಾಸಕರ ಪ್ರಯಾಣ, ಸಚಿವ ಸ್ಥಾನಕ್ಕಾಗಿ ಲಾಬಿ..!

'ಅಲ್ಪಸಂಖ್ಯಾತರ ಚಾಂಪಿಯನ್‌ ಎನಿಸಿಕೊಂಡವರ ಡಬಲ್‌ ಗೇಮ್‌: ದಾವಣಗೆರೆಯಲ್ಲಿ ನಮ್ಮ ಅಭ್ಯರ್ಥಿಯನ್ನೇ ಸೋಲಿಸಲು ಯತ್ನ'

ಗ್ರಾಮೀಣ ಪ್ರದೇಶಗಳಿಗೆ ಅಗ್ಗದ ದರದಲ್ಲಿ ಔಷಧಿ: ಇಂಡಿಯಾ ಪೋಸ್ಟ್‌ ಮೂಲಕ ಜನೌಷಧಿ ಸೇವೆ ವಿಸ್ತರಿಸಲು ಕೇಂದ್ರ ಸರ್ಕಾರ ಚಿಂತನೆ..!

'ನಾವು ದಾಳಿ ಮಾಡದೇ ಹೋಗಿದ್ದರೆ ಇಷ್ಟು ಹೊತ್ತಿಗೆ Iran ಅಣ್ವಸ್ತ್ರ ರಾಷ್ಟ್ರವಾಗಿರುತ್ತಿತ್ತು': ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು

SCROLL FOR NEXT