ಪ್ರಕಾಶ್ ರೈ 
ಸಿನಿಮಾ ಸುದ್ದಿ

ನನ್ನ ಬಾಯಿ ಮುಚ್ಚಿಸಲೆತ್ನಿಸಿದರೆ ನಾನು ಹಾಡಲು ಪ್ರಯತ್ನಿಸುತ್ತೇನೆ: ಪ್ರಕಾಶ್ ರೈ

ಸೃಜನಶೀಲತೆಗೆ ಮತ್ತು ಮುಕ್ತ ಚಿಂತನೆಯನ್ನು ಹತ್ತಿಕ್ಕಲು ಪ್ರಯತ್ನಿಸಿದರೆ ಮತ್ತು ....

ತಿರುವನಂತಪುರ:ಸೃಜನಶೀಲತೆಗೆ ಮತ್ತು ಮುಕ್ತ ಚಿಂತನೆಯನ್ನು ಹತ್ತಿಕ್ಕಲು ಪ್ರಯತ್ನಿಸಿದರೆ ಮತ್ತು ಚಲನಚಿತ್ರಗಳು ಪ್ರಸಾರವಾಗುವುದನ್ನು ತಡೆಯುವುದು ಸಮಾಜಕ್ಕೆ ಅಪಾಯಕಾರಿಯಾದ ರೋಗವಾಗಿದೆ ಎಂದು ನಟ ಪ್ರಕಾಶ್ ರೈ ಹೇಳಿದ್ದಾರೆ.
ನಿನ್ನೆ ಕೇರಳದ ತಿರುವನಂತಪುರದಲ್ಲಿ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ 22ನೇ ಅವತರಣಿಕೆಯಲ್ಲಿ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಅವರು, ಯಾವುದೇ ಸೆನ್ಸರ್ ಹಾಕದ ರಾಜ್ಯ ಕೇರಳವಾಗಿದೆ. ಇಲ್ಲಿ ಯಾವುದೇ ಭಯವಿಲ್ಲದೆ ಜನರು ಉಸಿರಾಡಬಹುದಾಗಿದೆ ಎಂದರು.
ಸಮಾಜದಲ್ಲಿ ನಮ್ಮ ಮೇಲೆ ಒತ್ತಾಯಪಡಿಸುವ ಒಂದು ಅಜೆಂಡಾ ನಿರೂಪಣೆ ಇರುತ್ತದೆ. ಜನ್ಮದಲ್ಲಿ ನಂಬಿಕೆಯನ್ನು ಹೊಂದಿರುವವರು ಅವರು ಹಿಟ್ಲರ್ ನ ಪುನರ್ಜನ್ಮವನ್ನು ಎತ್ತಿದವರು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಮಾಜದಲ್ಲಿ ಯಾವುದೇ ರೀತಿಯ ಭಿನ್ನಾಭಿಪ್ರಾಯವನ್ನು ನಿಗ್ರಹಿಸಲು ಪ್ರಯತ್ನಗಳು ನಡೆಯುತ್ತವೆ. ಧ್ವನಿಯೊಂದನ್ನು ಹತ್ತಿಕ್ಕಲು ಯತ್ನಿಸಿದಾಗ ಮತ್ತೊಂದು ಅದಕ್ಕಿಂತ ದೊಡ್ಡ ಧ್ವನಿ ಹುಟ್ಟಿಕೊಳ್ಳುತ್ತದೆ. ನಾನು ಯಾವುದೇ ರಾಜಕೀಯ ಪಕ್ಷಕ್ಕೆ ಸೇರಿದವನಲ್ಲ ಮತ್ತು ಯಾವುದೋ ಪಕ್ಷದ ಪರವಾಗಿ ನಾನು ಮಾತನಾಡುವುದಿಲ್ಲ ಎಂದರು.
ಕಲಾವಿದನಾಗಿ ನಾನು ಸಮಾಜದಲ್ಲಿ ನಡೆಯುವ ಸಂಗತಿಗಳಿಗೆ ಪ್ರತಿಕ್ರಿಯಿಸುವುದು ಮತ್ತು ಮಾತನಾಡುವುದು ನನ್ನ ಜವಾಬ್ದಾರಿ. ಸಮಾಜದ ಜನರಿಂದ ಸಿಕ್ಕಿದ ಪ್ರೀತಿ, ವಿಶ್ವಾಸಗಳಿಂದ ಕಾಲಾವಿದರು ಮತ್ತು ಕ್ರಿಯಾಶೀಲ ಸಮುದಾಯದವರು ಕೆಲಸ ಮಾಡುತ್ತಾರೆ. ಅದಕ್ಕೆ ತಕ್ಕಂತೆ ಸಮಾಜಕ್ಕೆ ಏನಾದರೂ ಕೊಡುಗೆ ನೀಡುವುದು ಕಲಾವಿದರ ಕರ್ತವ್ಯ. ನಾವು ಹೇಡಿಗಳಾದರೆ ಸಮಾಜವನ್ನು ಹೇಡಿಗಳಾಗಿ ಮಾಡಿದ್ದಕ್ಕೆ ನಾವು ಕಾರಣರಾಗುತ್ತೇವೆ. ನನಗೆ ಬೆದರಿಕೆ ಹಾಕಿದವರ ಬಗ್ಗೆ ನನಗೆ ನಗು ಬರುತ್ತದೆ ಎಂದರು.
ನನ್ನ ಬಾಯಿ ಮುಚ್ಚಿಸಲೆತ್ನಿಸಿದರೆ ನಾನು ಹಾಡಲು ಆರಂಭಿಸುತ್ತೇನೆ. ರಾಜಸ್ತಾನದಲ್ಲಿ ಇಂದು ಯಾರನ್ನಾದರೂ ಸಾಯಿಸಿದರೆ ಆರೋಪಿಗಳು ಯಾವುದೇ ಶಿಕ್ಷೆಯಾಗದೆ ಹೊರ ಬರುತ್ತಾರೆ. ಈ ಬಗ್ಗೆ ನಾವು ಚಿಂತಿಸಬೇಕಾದ ಅಗತ್ಯವಿದೆ ಎಂದು ಹೇಳಿದರು.
ಹಿಂದುತ್ವ ಎಂದರೇನೆಂದು ನಿಮಗೆ ಗೊತ್ತಿದೆ ಎಂದು ನಾವು ಭಾವಿಸಬೇಕೆಂದು ತಿಳಿದುಕೊಂಡಿರುವಿರಾ? ಅಥವಾ ಸಮಾಜದಲ್ಲಿ ಬೇರೇನಾದರೂ ತುರುಕಲು ಯತ್ನಿಸುತ್ತೀರಾ? ಧ್ವನಿಯನ್ನು ಹತ್ತಿಕ್ಕಿ ಭಯ ಹುಟ್ಟಿಸಲು ಯತ್ನಿಸಿದರೆ ಮುಂದಿನ ಜನಾಂಗ ಚಿಂತಿಸುವ ಶಕ್ತಿಯನ್ನು ನಾಶ ಮಾಡಿದಂತಾಗುತ್ತದೆ ಎಂದು ಪ್ರಕಾಶ್ ರೈ ಅಸಮಾಧಾನ ವ್ಯಕ್ತಪಡಿಸಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

CM ಬದಲಾವಣೆ ನಾಲ್ಕರಿಂದ ಐದು ಜನರ ನಡುವೆ ನಡೆದ "ರಹಸ್ಯ ಒಪ್ಪಂದ": ಡಿಕೆಶಿ​ ಸ್ಫೋಟಕ ಹೇಳಿಕೆ

ರಾಜ್ಯದಲ್ಲಿ ಸಿಎಂ ಗದ್ದುಗೆ ಗುದ್ದಾಟ: ಎಲ್ಲ ಗೊಂದಲಗಳಿಗೆ ಹೈಕಮಾಂಡ್ ತೆರೆ ಎಳೆಯಬೇಕು- ಸಿಎಂ ಸಿದ್ದರಾಮಯ್ಯ

ಸ್ಮೃತಿ ಮಂಧಾನ ಮದುವೆ ಮುಂದೂಡಿಕೆಗೆ ಅಸಲಿ ಕಾರಣ? ಮತ್ತೊಂದು ಹೆಣ್ಣಿನೊಂದಿಗೆ ಮೋಹ, ನಂಬಿಕೆ ದ್ರೋಹ; ಬಯಲಾಯ್ತು ಪಲಾಶ್'ನ ಅಸಲಿ ರಂಗಿನಾಟ!

ಪಶ್ಚಿಮ ಬಂಗಾಳದಲ್ಲಿ ವಿವಾದಿತ SIR ಕುರಿತು ಮಾತುಕತೆಗೆ ಟಿಎಂಸಿಗೆ ಚುನಾವಣಾ ಆಯೋಗ ಆಹ್ವಾನ

ಇದು ಕೇವಲ ಧ್ವಜವಲ್ಲ ಭಾರತೀಯ ನಾಗರಿಕತೆಯ ಪುನರ್‌ ಜಾಗೃತಿಯ ಧ್ವಜ, ಶತಮಾನಗಳಷ್ಟು ಹಳೆಯ ಗಾಯ ಈಗ ವಾಸಿಯಾಗುತ್ತಿದೆ: ಪ್ರಧಾನಿ ಮೋದಿ

SCROLL FOR NEXT