ದಿ ಸ್ಕೂಲ್ ಬ್ಯಾಗ್ ಚಿತ್ರದ ಒಂದು ದೃಶ್ಯ 
ಸಿನಿಮಾ ಸುದ್ದಿ

ವ್ಯಾಂಕೂವರ್ ಅಂತರಾಷ್ಟ್ರೀಯ ಚಲನಚಿತ್ರೋತ್ಸವ: ಭಾರತದ ಕಿರುಚಿತ್ರ 'ದಿ ಸ್ಕೂಲ್ ಬ್ಯಾಗ್' ಗೆ ಪ್ರಶಸ್ತಿ

ವ್ಯಾಂಕೂವರ್ ಗೋಲ್ಡನ್ ಪಾಂಡಾ ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಭಾರತೀಯ ಕಿರುಚಿತ್ರ "ದಿ ಸ್ಕೂಲ್ ಬ್ಯಾಗ್" ಅತ್ಯುತ್ತಮ ಕಿರು ಚಿತ್ರ ಪ್ರಶಸ್ತಿಯನ್ನು ಪಡೆದುಕೊಂಡಿದೆ.

ವ್ಯಾಂಕೋವರ್: ವ್ಯಾಂಕೂವರ್ ಗೋಲ್ಡನ್ ಪಾಂಡಾ ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ  ಭಾರತೀಯ ಕಿರುಚಿತ್ರ "ದಿ ಸ್ಕೂಲ್ ಬ್ಯಾಗ್" ಅತ್ಯುತ್ತಮ ಕಿರು ಚಿತ್ರ ಪ್ರಶಸ್ತಿಯನ್ನು ಪಡೆದುಕೊಂಡಿದೆ. ಧೀರಜ್ ಜಿಂದಾಲ್ ಈ ಕಾಲ್ಪನಿಕ ಕಿರುಚಿತ್ರದ ನಿರ್ದೇಶಕರಾಗಿದ್ದಾರೆ.
"ನಾವು ಚಿರ ನಿರ್ಮಾಣಕ್ಕೆ ತೊಡಗಿದಾಗ ನಮಗೆ ಈ ಚಿತ್ರ ಇಷ್ಟೊಂದು ಜನಪ್ರಿಯತೆ ಗಳಿಸಬಹುದು, ಪ್ರಶಸ್ತಿ ಗೆಲ್ಲಬಹುದೆನ್ನುವ ಯಾವ ನಿರೀಕ್ಷೆಯೂ ಇರಲಿಲ್ಲ. ಇದೀಗ ಚಿತ್ರವು ಸಾಕಷ್ಟು ಜನರನ್ನು ತಲುಪಿದೆ. ಥ್ಯಾಂಕ್ಯೂ ವ್ಯಾಂಕೋವರ್!" ಜಿಂದಾಲ್ ಹೇಳಿದ್ದಾರೆ.
ಪ್ರಶಸ್ತಿ ಪ್ರಧಾನ ಸಮಾರಂಭವು ಡಿ.10ರಂದು ನಡೆದಿದ್ದು ಪ್ರಶಸ್ತಿಯು ಚಿತ್ರ ತಂಡದ ಏಳು ದಿನದ ಚೀನಾ ಪ್ರವಾಸದ ಖರ್ಚನ್ನೂ ಒಳಗೊಂಡಿದೆ
ಈ ಹಿಂದೆ ಲಾಹೋರ್ ಅಂತರಾಷ್ಟ್ರೀಯ ಮಕ್ಕಳ ಚಲನಚಿತ್ರೋತ್ಸವದಲ್ಲಿ "ಸ್ಕೂಲ್ ಬ್ಯಾಗ್" ಅತ್ಯುತ್ತಮ ಕಿರು ಚಿತ್ರ ಪ್ರಶಸ್ತಿಯನ್ನು ಗೆದ್ದಿದೆ. ಜಿಂದಾಲ್ ಅಮೆರಿಕಾದ ಸಿನ್ಸಿನಾಟಿ ಭಾರತೀಯ ಚಲನಚಿತ್ರೋತ್ಸವದಲ್ಲಿ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ. ಚಿತ್ರದಲ್ಲಿ, ನಟಿ ರಸಿಕಾ ದುಗಲ್  ಏಳು ವರ್ಷದ ಬಾಲಕನ ತಾಯಿಯಾಗಿ ಅಭಿನಯಿಸಿದ್ದಾರೆ

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಹೊಸದಾಗಿ ನೇಮಕಗೊಂಡಿದ್ದ Hamas ಮಿಲಿಟರಿ ನಾಯಕನನ್ನೂ ಹೊಡೆದುರುಳಿಸಿದ Israel!

ಸಿದ್ದರಾಮಯ್ಯ 2 ಬಾರಿ ಸಿಎಂ ಆಗಿದ್ದಾರೆ; ಡಿಕೆಶಿ ಹಲವು ಮುಖ್ಯಮಂತ್ರಿಗಳ ಜತೆ ಸಚಿವರಾಗಿ ಕೆಲಸ ಮಾಡಿದ್ದಾರೆ: ಸುರ್ಜೇವಾಲ ಮಾತಿನ ಅರ್ಥವೇನು?

ಇಲ್ಲಿಂದ ತೊಲಗಿ; ಭಾರತೀಯ ದಂಪತಿಗೆ ಅಮೆರಿಕಾದಲ್ಲಿ ಜನಾಂಗೀಯ ನಿಂದನೆ

IPL 2026: SRH ವಿರುದ್ಧ RR ಗೆ 47 ರನ್ ಗಳ ಭರ್ಜರಿ ಗೆಲುವು

IPL 2026 Eliminator: ವೈಭವ್ ಸೂರ್ಯವಂಶಿ ಸ್ಫೋಟಕ ಬ್ಯಾಟಿಂಗ್, SRHಗೆ 244 ರನ್ ಬೃಹತ್ ಗುರಿ ನೀಡಿದ RR

SCROLL FOR NEXT