ಮಕ್ಕಳ ಚಿತ್ರ ನಿರ್ದೇಶಿಸುವುದು ಒಂದು ಸುಂದರ ಅನುಭವ: ರಿಷಬ್ ಶೆಟ್ಟಿ
ಬೆಂಗಳೂರು: 'ರಿಕ್ಕಿ', 'ಕಿರಿಕ್ ಪಾರ್ಟಿ' ಖ್ಯಾತಿಯ ರಿಷಬ್ ಶೆಟ್ಟಿ ಇದೀಗ ವಿಭಿನ್ನವಾಗಿ ಆಲೋಚಿಸಿದ್ದಾರೆ. ಅವರು ಮಕ್ಕಳ ಚಿತ್ರ ನಿರ್ದೇಶನದಲ್ಲಿ ತೊಡಗಿಸಿಕೊಂಡಿದ್ದು 'ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಕಾಸರಗೋಡು ಕೊಡುಗೆ ರಾಮಣ್ಣ ರೈ' ಎನ್ನುವ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಇದಾಗಲೇ ಐವತ್ತೈದು ದಿನ ಚಿತ್ರೀಕರಣ ಪೂರೈಸಿದ ಈ ಚಿತ್ರದ ಬಗೆಗೆ ಅವರು ಎಕ್ಸ್ ಪ್ರೆಸ್ ನೊಡನೆ ಮಾತನಾಡಿದ್ದಾರೆ.
ಮಕ್ಕಳ ಚಿತ್ರ ನಿರ್ದೇಶನ ಮಾಡುವುದು ಅದೊಂದು ಸುಂದರ ಅನುಭವ ಎನ್ನುವ ರಿಷಬ್ ಶೆಟ್ಟಿ 'ರಿಕ್ಕಿ ' ನಿರ್ದೇಶಿಸುತ್ತಿರುವಾಗಲೇ ನಾನು ಮಕ್ಕಳ ಚಲನಚಿತ್ರ ಮಾಡುವ ಬಗ್ಗೆ ಆಲೋಚಿಸಿದ್ದೆ. ಇದು ಮಾಮೂಲಿ ಮಕ್ಕಳ ಚಿತ್ರವಲ್ಲ. ಕಥೆ ಆಧಾರಿತವಾಗಿದೆ. ಮಕ್ಕಳ ಮೂಲಕವೇ ಕಥೆ ಹೇಳಿಸಲಾಗುತ್ತಿದೆ. ಕನ್ನಡದ ಹಿರಿಯ ನಟ ಅನಂತ್ ನಾಗ್ ಚಿತ್ರದ ಪ್ರಮುಖ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳಲಿದ್ದಾರೆ. 'ರಿಕ್ಕಿ' ನಿರ್ದೇಶನದ ಸಮಯದಲ್ಲಿ ನಾನು ಬಹಳಷ್ಟು ರಾಜಿ ಮಾಡಿಕೊಳ್ಳಬೇಕಾಯಿತು. ನಾನೇನು ಹೇಳಬೇಕೆಂದುಕೊಂಡಿದ್ದೆನೋ ಅದನ್ನು ನೇರವಾಗಿ ಹೇಳ ಹೊರಟೆ, ಇದಕ್ಕಾಗಿ ಚಿತ್ರ ನಿರ್ಮಾಣ ಜವಾಬ್ದಾರಿಯನ್ನೂ ನಾನು ಹೊರಬೇಕಾಗಿ ಬಂದಿತು" ರಿಷಬ್ ಶೆಟ್ಟಿ ತಮ್ಮ ಹಿಂದಿನ ಅನುಭವಗಳನ್ನು ಹಂಚಿಕೊಂಡರು.
ಈ ಚಿತ್ರಕ್ಕಾಗಿ ರಿಷಬ್ ಸುಮಾರು ಸಾವಿರ ಮಕ್ಕಳ ಫೋಟೋ ಶೂಟ್ ನಡೆಸಿದ್ದಾರೆ. ಅದರಲ್ಲಿ ಅಂತಿಮವಾಗಿ 30 ಮಕ್ಕಳನ್ನು ಆಯ್ಕೆ ಮಾಡಲಾಗಿದೆ. "ನಮ್ಮ ಚಿತ್ರದಲ್ಲಿ ನಟಿಸಲಿಕ್ಕಾಗಿ ಬಹಳಷ್ಟು ಮಕ್ಕಳನ್ನುಆಯ್ದುಕೊಂಡಿದ್ದು ಇದು . ಇದು ಶಾಲೆ ಸುತ್ತಲಿನ ಕಥೆ. ಹಾಗೆಯೇ ಇದು ಕಿರಿಕ್ ಪಾರ್ಟಿಯ ಮಕ್ಕಳ ಆವೃತ್ತಿ ಎನ್ನಬಹುದು. ಇದು ಮಕ್ಕಳ ಚಿತ್ರ ಮಾತ್ರವಲ್ಲ ಎಲ್ಲಾ ವಯಸ್ಸಿನ ಪಾತ್ರಗಳನ್ನು ಹೊಂದಿರುವ ಚಿತ್ರವಿದಾಗಿದೆ." ಚಿತ್ರದಲ್ಲಿ ಅನಂತ್ ನಾಗ್ ಹೊರತು ಬಹುತೇಕರು ಹೊಸ ಪರಿಚಯವಾಗಿರುವುದು ಇನ್ನೊಂದು ವಿಶೇಷ.
ತಮಿಳಿನ ಕಾಕ ಮೊಟ್ಟೈ ಚಿತ್ರದ ಉದಾಹರಣೆ ತೆಗೆದುಕೊಳ್ಳುವ ನಿರ್ದೇಶಕರು ಕೆಲವು ಮಕ್ಕಳ ಚಿತ್ರಗಳನ್ನು ನಗರದಲ್ಲಿಯೇ ಚಿತ್ರೀಕರಿಸಲಾಗುತ್ತದೆ ಎಂದರು. ಇದೀಗ ಚಿತ್ರವು ಎಡಿಟಿಂಗ್ ಹಂತದಲ್ಲಿದ್ದು ಮುಂದಿನ ವರ್ಷ ಬೇಸಿಗೆ ಅಥವಾ ಅದಕ್ಕೂ ಮುನ್ನ ತೆರೆಗೆ ಬರಲಿದೆ ಎಂದು ನಿರ್ದೇಶಕರು ಹೇಳಿದರು.
ಇದೇ ವೇಳೆ ನಿನಿರ್ದೇಶಕ ಪುಟ್ಟಣ್ಣ ಕಣಗಾಲ್ ಅವರ ಖ್ಯಾತ ಚಿತ್ರ 'ಕಥಾ ಸಂಗಮ' ವನ್ನು ಮುಂದುವರಿಸುತ್ತಿರುವ ರಿಷಬ್ ಶೆಟ್ಟಿ ವಿವಿಧ ನಿರ್ದೇಶಕರು ನಿರ್ದೇಶಿಅಸಿರುವ ಏಳು ಕಥೆಗಳ ಗುಚ್ಚ ಅದಾಗಲಿದೆ ಎನ್ನುತ್ತಾರೆ.