ಬೆಂಗಳೂರು: ಗುಜರಾತ್ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ ಜಯ ಸಾಧಿಸಿರುವ ಹಿನ್ನೆಲೆಯಲ್ಲಿ ಕನ್ನಡ ಚಿತ್ರರಂಗದ ನವರಸ ನಾಯಕ ಜಗ್ಗೇಶ್ ಮೋದಿಯನ್ನು ಅಭಿನಂದಿಸಿದ್ದಾರೆ.
ಜಗ್ಗೇಶ್ ಮೋದಿಯವರನ್ನು ಅಭಿನಂದಿಸುತ್ತಾ "ದೇಶದ ಜನತೆ ಮೋದಿಯವರನ್ನು ಬರಿ ನಾಯಕನಾಗಿ ಕಂಡಿಲ್ಲ, ಹೆಮ್ಮೆಯ ಮಗ ಎಂಬಂತೆ ನಿರ್ಧರಿಸಿದ್ದಾರೆ" ಎಂದು ಟ್ವೀಟ್ ಮಾಡಿದ್ದಾರೆ.
"ನಂಬಿಕೆಯೇ ದೇವರು. ಜನರು ಒಬ್ಬನನ್ನು ನಂಬಬೇಕಾದರೆ ಅವನ ಅನ್ಡತೆಯನ್ನು ಅಳೆದು ತೂಗಿ ನಿರ್ಧಾರ ಮಾಡುತ್ತಾರೆ.ಅವ್ ಅನಲ್ಲಿ ಒಳ್ಳೆಯ ಗುಣಗಳಿದ್ದರೆ ಅವನನ್ನು ಹಿಂಬಾಲಿಸುತ್ತಾರೆ. ಮತ್ತೂ ಹೆಚ್ಚು ನಂಬಿಕೆ ಬಂದರೆ ಅವನನ್ನು ಆರಾಧಿಸುತ್ತಾರೆ. ಮತ್ತೆ ಪೂಜಿಸುತ್ತಾರೆ. ದೇಶದ ಜನತೆ ಮೋದಿಯವರನ್ನು ಬರಿ ನಾಯಕನಾಗಿ ಕಂಡಿಲ್ಲ, ಹೆಮ್ಮೆಯ ಮಗ ಎಂಬಂತೆ ನಿರ್ಧರಿಸಿದ್ದಾರೆ" ಎಂದು ನವರಸನಾಯಕ ಜಗ್ಗೇಶ್ ತಮ್ಮ ಟ್ವಿಟ್ಟರ್ ಖಾಲ್ತೆಯಲ್ಲಿ ಬರೆದುಕೊಂಡಿದ್ದಾರೆ.
ಇದರೊಡನೆ ಮುಂದಿನ ಕರ್ನಾಟಕ ವಿಧಾನಸಭೆ ಚುನಾವಣೆಯತ್ತ ನೋಟ ಹರಿಸಿದ ಅವರು ಕರ್ನಾಟಕದ ಜನತೆ ಸಹ ಅಭಿವೃದ್ದಿ ಹರಿಕಾರನ ಸಿಂಹ ನಡೆಗಾಗಿ ಕಾಯುತ್ತಿದ್ದಾರೆ ಎಂದು ಬರೆದುಕೊಂಡಿದ್ದು "ಕಾಯುತ್ತಿದ್ದಾರೆ ಕರುನಾಡ ಜನತೆ. ಅಭಿವೃದ್ಧಿ ಹರಿಕಾರನ ಸಿಂಹ ನಡೆ ಕರುನಾಡ ಕಡೆಗೆ.....ಕೈಗೆ ಕೈ ಎತ್ತಿ. ಹಿಡಿಯಿರಿ ಕಮಲ" ಎಂದು ಟ್ವೀಟ್ ನಲ್ಲಿ ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics