ಪೂಜಾಗಾಂಧಿ 
ಸಿನಿಮಾ ಸುದ್ದಿ

ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣ: ನಟಿ ಪೂಜಾಗಾಂಧಿ ಖುಲಾಸೆ

ನಟಿ ಪೂಜಾಗಾಂಧಿ ಇದೀಗ ನಿರಾಳರಾಗಿದ್ದಾರೆ. ರಾಯಚೂರಿನಲ್ಲಿ ಅವರ ವಿರುದ್ಧ ದಾಖಲಾಗಿದ್ದ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣದಲ್ಲಿ ಅವರು ಖುಲಾಸೆಗೊಂಡಿದ್ದಾರೆ.

ರಾಯಚೂರು: ನಟಿ ಪೂಜಾಗಾಂಧಿ ಇದೀಗ ನಿರಾಳರಾಗಿದ್ದಾರೆ. ರಾಯಚೂರಿನಲ್ಲಿ ಅವರ ವಿರುದ್ಧ ದಾಖಲಾಗಿದ್ದ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣದಲ್ಲಿ ಅವರು ಖುಲಾಸೆಗೊಂಡಿದ್ದಾರೆ.
ಸಾಕ್ಷ್ಯಾಧಾರ ಕೊರತೆಯಾಗಿರುವ ಕಾರಣ ನಟಿಯ ವಿರುದ್ಧದ ಆರೋಪ ಸಾಬೀತಾಗಿಲ್ಲ. ಹೀಗಾಗಿ ಅವರನ್ನು ಖುಲಾಸೆಗೊಳಿಸಿರುವುದಾಗಿ ರಾಯಚೂರಿನ ಜೆಎಂಎಫ್ ಸಿ 2ನೇ ನ್ಯಾಯಾಲಯ ಇಂದು ತೀರ್ಪು ಪ್ರಕಟಿಸಿದೆ. ನ್ಯಾಯಾಧೀಶೆ ಪೂರ್ಣಿಮಾ ಯಾದವ್ ಪೂಜಾಗಾಂಧಿ ಅವರನ್ನು ಖುಲಾಸೆಗೊಳಿಸಿ ತೀರ್ಪು ಪ್ರಕಟಿಸಿದ್ದಾರೆ.
ಪ್ರಕರಣ ವಿವರ: 2013 ರಲ್ಲಿ ರಾಯಚೂರು ನಗರ ಕ್ಷೇತ್ರಕ್ಕೆ ಬಿಎಸ್ಆರ್ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿದ್ದ ಪೂಜಾಗಾಂಧಿ ಅನುಮತಿ ಇಲ್ಲದೆ ವಾಹನವನ್ನು ಚುನಾವಣಾ ಪ್ರಚಾರಕ್ಕೆ ಬಳಸಿ ನೀತಿ ಸಂಹಿತೆುಲ್ಲಂಘನೆ ಮಾಡಿದ್ದಾರೆಂದು ದೂರು ದಾಖಲಾಗಿತ್ತು. ಸದರಬಜಾರ್ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಐದು ಬಾರಿ ವಿಚಾರಣೆಗೆ ಗೈರಾಗಿದ್ದ ನಟಿಯ ವಿರುದ್ಧ ವಾರಂಟ್ ಜಾರಿಗೊಂಡಿತ್ತು.
ಇಂದು ಈ ಪ್ರಕರಣದ ಅಂತಿಮ ತೀರ್ಪು ಬಂದಿದ್ದು ಪೂಜಾಗಾಂಧಿಗೆ ದೊಡ್ಡ ಬಿಡುಗಡೆ ಸಿಕ್ಕಿದೆ. "ನಾಲ್ಕುವರೆ ವರ್ಷಗಳ ನಂತರ ನನಗೆ ನ್ಯಾಯ ದಕ್ಕಿದೆ. ತೀರ್ಪು ಕೇಳಿ ಸಂತಸವಾಗಿದೆ." ಎಂದು ತೀರ್ಪಿನ ನಂತರ ಪೂಜಾಗಾಂಧಿ ಪ್ರತಿಕ್ರಯಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ವೋಟ್ ಚೋರಿಯಿಂದ ಕಾನೂನು ಚೋರಿ' : ಇಡೀ ವ್ಯವಸ್ಥೆ ನಾಶಕ್ಕೆ ಬಿಜೆಪಿ ಸಂಚು,EC, ಕೇಂದ್ರದ ವಿರುದ್ಧ ರಾಹುಲ್ ತೀವ್ರ ವಾಗ್ದಾಳಿ!

ಮುಸ್ಲಿಂ ಮತದಾರರ ಹೆಸರು ಡಿಲೀಟ್ ಮಾಡುವಂತೆ ಚುನಾವಣಾ ಆಯೋಗಕ್ಕೆ BJP ಶಾಸಕ ಪತ್ರ: ಬಿಕೆ ಹರಿಪ್ರಸಾದರಿಂದ ದಾಖಲೆ ಬಿಡುಗಡೆ!

Biggboss ಕಚಡ ಶೋ: ಮೂರ್ಖರನ್ನು ಸ್ಟಾರ್‌ಗಳನ್ನಾಗಿ ಮಾಡುತ್ತದೆ, ಶೋ ನಿಲ್ಲಿಸಿ; ಸ್ಟಾಂಡ್ಅಪ್ ಕಾಮಿಡಿಯನ್ ಆಕ್ರೋಶ!

ಬರದಿಂದ ತತ್ತರಿಸಿರುವ ರಾಜ್ಯದ ರೈತರಿಗೆ ರೂ. 2.500 ಆರ್ಥಿಕ ನೆರವು: ಬ್ಯಾಂಕ್ ಖಾತೆಗಳಿಗೆ ನೇರ ಜಮೆ!

'ಪ್ರಜಾಪ್ರಭುತ್ವಕ್ಕೆ ಅತಿದೊಡ್ಡ ಬೆದರಿಕೆ': ದೇಶ ದ್ರೋಹಿ ಜ್ಞಾನೇಶ್ ಕುಮಾರ್‌ ರಾಜೀನಾಮೆ ನೀಡಲಿ; 48 ಗಂಟೆಗಳ ಗಡುವು ನೀಡಿದ CJP!