ಕವಲು ದಾರಿಯಲ್ಲಿ ಮಿಸ್ಟರ್ ಅಂಡ್ ಮಿಸ್ಸೆಸ್ ನಾಯ್ಡು
ಪಿಆರ್ ಕೆ ಪ್ರೊಡಕ್ಷನ್ ಅಡಿಯಲ್ಲಿ ಪುನೀತ್ ರಾಜ್ ಕುಮಾರ್ ನಿರ್ಮಿಸುತ್ತಿರುವ ಕವಲು ದಾರಿ ಹೇಮಂತ್ ಎಂ.ರಾವ್ ಅವರ ಎರಡನೇ ನಿರ್ದೇಶನದ ಚಿತ್ರವಾಗಿದೆ. ಪೊಲೀಸ್ ಅಧಿಕಾರಿ ಪಾತ್ರದಲ್ಲಿ ನಟ ರಿಷಿ, ನಿವೃತ್ತ ಪೊಲೀಸ್ ಅಧಿಕಾರಿಯಾಗಿ ಅನಂತ್ ನಾಗ್ ನಟಿಸುತ್ತಿದ್ದಾರೆ. ಚಿತ್ರದ ಶೇಕಡಾ 60 ಭಾಗದ ಚಿತ್ರೀಕರಣ ಮುಗಿದಿದ್ದು, ಸಿದ್ಧಾರ್ಥ್ ಮಾದ್ಯಮಿಕ್ಕ ಮತ್ತು ಸಮನ್ವಿತಾ ಶೆಟ್ಟಿ ಅವರು ಮಿಸ್ಟರ್ ಅಂಡ್ ಮಿಸ್ಸಸ್ ನಾಯ್ಡು ಪಾತ್ರಗಳನ್ನು ಜನರಿಗೆ ಪರಿಚಯಿಸಲಾಗುತ್ತಿದೆ. ಇಬ್ಬರೂ 70ರ ದಶಕದ ನೋಟದಲ್ಲಿ ಗಮನಸೆಳೆಯುತ್ತಾರೆ. ಚಿತ್ರದ ಒಂದು ಭಾಗ 70ರ ದಶಕಕ್ಕೆ ಸಂಬಂಧಪಟ್ಟದ್ದಾಗಿರುವುದರಿಂದ ಕಲಾವಿದರಿಗೆ ಈ ನೋಟ ನೀಡಲಾಗಿದೆ.
ಇಲ್ಲಿ ಮಿಸ್ಟರ್ ಅಂಡ್ ಮಿಸ್ಸಸ್ ನಾಯ್ಡು ಪಾತ್ರಗಳಿಗೆ ವಸ್ತ್ರ ವಿನ್ಯಾಸ ಮಾಡಿದ ಇಂಚರ ಮತ್ತು ವಿನಯ ಅವರನ್ನು ನಿರ್ದೇಶಕ ಹೇಮಂತ್ ಶ್ಲಾಘಿಸುತ್ತಾರೆ. ಅಂದಿನ ಕಾಲದ ಉಡುಪು ಧರಿಸುವ ಮತ್ತು ಸ್ಟೈಲನ್ನು ವಿನ್ಯಾ,ಸಕರು ಚೆನ್ನಾಗಿ ಅರ್ಥ ಮಾಡಿಕೊಂಡಿದ್ದಾರೆ ಎನ್ನುವ ಹೇಮಂತ್ ರ ಈ ಚಿತ್ರದಲ್ಲಿ ಅಂದಿನ ಮತ್ತು ಇಂದಿನ ಕಾಲದ ಕಥೆಯನ್ನೊಳಗೊಂಡಿದೆ. ಚಿತ್ರದಲ್ಲಿ ಈ ಎರಡು ಪಾತ್ರಗಳ ಸುತ್ತ ಕಥೆ ಸಾಗಲಿದ್ದು ಇವರು ಅಪರಾಧದಲ್ಲಿ ಭಾಗಿಯಾಗಿರುತ್ತಾರೆ. ಆ ಅಪರಾಧ ಪ್ರಕರಣವನ್ನು ಅನಂತ್ ನಾಗ್ ಮತ್ತು ರಿಶಿ ತನಿಖೆ ನಡೆಸುತ್ತಾರೆ ಎನ್ನುತ್ತಾರೆ ಹೇಮಂತ್.
ಶುದ್ಧಿ ಸಿನಿಮಾ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟ ಸಿದ್ದಾರ್ಥ್ ಈ ಪಾತ್ರಕ್ಕೆ 15 ಕೆಜಿ ತೂಕ ಹೆಚ್ಚು ಮಾಡಿಕೊಳ್ಳಲು ನಿರ್ದೇಶಕರು ಹೇಳಿದ್ದಾರಂತೆ. ಶುದ್ಧಿಯ ನಂತರ ಯಾವುದೇ ಉತ್ತಮ ಪಾತ್ರಗಳು ಸಿಗದ ಕಾರಣ ಸಿದ್ದಾರ್ಥ್ ಸಿನಿಮಾ ಒಪ್ಪಿಕೊಂಡಿರಲಿಲ್ಲ. ಕವಲು ದಾರಿಗೆ ಅವರು ಸರಿಯಾಗಿ ಹೊಂದಿಕೆಯಾಗುತ್ತಾರೆ ಎನ್ನುತ್ತಾರೆ ನಿರ್ದೇಶಕರು.
ಕ್ಯಾಮರಾ ಮೂಲಕ ಸಿದ್ದಾರ್ಥ್ ಮತ್ತು ಸಮನ್ವಿತಾ ನಡುವಿನ ದೃಶ್ಯಗಳನ್ನು ಕೂಡ ವಿಭಿನ್ನವಾಗಿ ತೋರಿಸಲಾಗಿದೆ. ಹಿಂದಿನ ಕಾಲದ ದೃಶ್ಯವನ್ನು ಮರುಸೃಷ್ಟಿಸುವುದು ನಿಜಕ್ಕೂ ಸವಾಲು. ಛಾಯಾಗ್ರಾಹಕ ಅದ್ವೈತ್ ಗುರುಮೂರ್ತಿಯವರು 70ರ ದಶಕದ ದೃಶ್ಯಗಳನ್ನು ವಿಭಿನ್ನವಾಗಿ ಚಿತ್ರಿಸಿದ್ದಾರೆ ಎಂದರು.
ಚಿತ್ರಕ್ಕೆ ಪುನೀತ್ ರಾಜ್ ಕುಮಾರ್ ಕಾಪಾಡಿಕೊಂಡು ಬಂದಿದ್ದ ಹಳೆ ಚಿತ್ರಗಳ ಲೆನ್ಸ್ ಗಳನ್ನು ಬಳಸಲಾಗಿದೆ. ಜನರು ಇಂದು ಹಳೆ ಲೆನ್ಸ್ ಗಳನ್ನು ಬಳಸುವುದು ತೀರಾ ಅಪರೂಪ. ಪುನೀತ್ ರಾಜ್ ಕುಮಾರ್ ಅವರ ಬಳಿ 20-25 ವರ್ಷಗಳಷ್ಟು ಹಳೆಯ ಲೆನ್ಸ್ ಗಳಿವೆ. ಇದು ನಮ್ಮ ಚಿತ್ರಕ್ಕೆ ಉಪಯೋಗವಾಯಿತು ಎನ್ನುತ್ತಾರೆ ಹೇಮಂತ್. ಕವಲು ದಾರಿಗೆ ಚರಣ್ ರಾಜ್ ಅವರ ಸಂಗೀತವಿದೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos