ಸುನಿಲ್ ರಾವ್ 
ಸಿನಿಮಾ ಸುದ್ದಿ

ಲೂಸ್ ಕನೆಕ್ಷನ್ ಮೂಲಕ ಸುನಿಲ್ ರಾವ್ ಮತ್ತೆ ಬೆಳ್ಳಿತೆರೆಗೆ

ರೇಡಿಯೋ ಜಾಕಿ ಮತ್ತು ನಿರ್ಮಾಪಕ ಪ್ರದೀಪ್ ಲೂಸ್ ಕನೆಕ್ಷನ್ ಎಂಬ ವೆಬ್ ಸರಣಿಯನ್ನು...

ರೇಡಿಯೋ ಜಾಕಿ ಮತ್ತು ನಿರ್ಮಾಪಕ ಪ್ರದೀಪ್ ಲೂಸ್ ಕನೆಕ್ಷನ್ ಎಂಬ ವೆಬ್ ಸರಣಿಯನ್ನು ತರುತ್ತಿದ್ದಾರೆ. ಇದರಲ್ಲಿ ನಟ ಸುನಿಲ್ ರಾವ್ ನಟಿಸುತ್ತಿರುವುದು ವಿಶೇಷ. ಲೂಸ್ ಕನೆಕ್ಷನ್ ಮೂಲಕ ಸುನಿಲ್ ರಾವ್ ಹಲವು ವರ್ಷಗಳ ನಂತರ ಮತ್ತೆ ನಟಿಸುತ್ತಿದ್ದಾರೆ.
ಲೂಸ್ ಕನೆಕ್ಷನ್ ನಲ್ಲಿ ಸುನಿಲ್ ರಾವ್ ಅವರ ಭಂಗಿಯ ಕೆಲವು ಫೋಟೋಗಳು ಸಿಟಿ ಎಕ್ಸ್ ಪ್ರೆಸ್ ಗೆ ಸಿಕ್ಕಿವೆ. ಕನ್ನಡ ನಟರಿಂದ ಪ್ರೇರೇಪಿತರಾದವರಂತೆ ಜೀನ್ಸ್ ಪ್ಯಾಂಟ್ ಮತ್ತು ಕೆಂಪು ಟೀ ಶರ್ಟ್ ನಲ್ಲಿ ಕಂಗೊಳಿಸುತ್ತಿದ್ದಾರೆ.
ಚಿತ್ರದ ಪ್ರೊಮೊ ಶೂಟ್ ನಡೆಯುತ್ತಿದ್ದು ಟೀಸರ್ ನ್ನು ಈ ತಿಂಗಳ ವ್ಯಾಲೆಂಟೈನ್ಸ್ ಡೇಯಂದು ಬಿಡುಗಡೆ ಮಾಡುವ ಯೋಚನೆಯಲ್ಲಿದ್ದಾರೆ ಪ್ರದೀಪ್. ವೆಬ್ ಸರಣಿ ಬಗ್ಗೆ ಪ್ರೊಮೊದಲ್ಲಿ ಜನರಿಗೆ ತಿಳುವಳಿಕೆ ಮೂಡಿಸಲಾಗುತ್ತದೆ. ''ಆರೇಳು ವರ್ಷಗಳ ಅಂತರದ ನಂತರ ಸುನಿಲ್ ರಾವ್ ಅವರು ನಟಿಸುತ್ತಿರುವುದು ಖುಷಿಯ ವಿಚಾರ. ಚಿತ್ರದ ನಾಯಕಿಯ ಆಯ್ಕೆ ಪ್ರಕ್ರಿಯೆ ನಡೆಯುತ್ತಿದೆ.ಸಿಂಧು ಲೋಕನಾಥ್ ಅವರ ಜೊತೆ ಮಾತುಕತೆ ನಡೆಸಿದ್ದೇವೆ ಎನ್ನುತ್ತಾರೆ ಪ್ರದೀಪ್.
ಸುನಿಲ್ ರಾವ್ ಅವರಿಗೆ ನಟನೆಗೆ ಮರಳುವ ಯೋಚನೆ, ಇಷ್ಟ ಎರಡೂ ಇರಲಿಲ್ಲ. ನಾವು ವೆಬ್ ಸರಣಿಯ ಜನಪ್ರಿಯತೆ ಮತ್ತು ಲೂಸ್ ಕನೆಕ್ಷನ್ ನ ವಿಷಯವನ್ನು ವಿವರಿಸಿದಾಗ ಅವರಿಗೆ ಇಷ್ಟವಾಗಿ ಒಪ್ಪಿಕೊಂಡರು. ಅವರ ಈ ಚಿತ್ರ ಜನಪ್ರಿಯವಾಗುವ ವಿಶ್ವಾಸ ನಮಗಿದೆ ಎನ್ನುತ್ತಾರೆ.
ರಘು ಶಾಸ್ತ್ರಿಯವರು ಶಾಮ್ ಖಾನ್ ಮತ್ತು ಆಸೀನ್ ಖಾನ್ ಜೊತೆ ವೆಬ್ ಸರಣಿಯನ್ನು ನಿರ್ದೇಶಿಸುತ್ತಿದ್ದಾರೆ. ರಘು ಶಾಸ್ತ್ರಿ ತಮ್ಮ ಮೊದಲ ವೆಬ್ ಸರಣಿಯನ್ನು ವಿನಯ್ ರಾಜ್ ಕುಮಾರ್ ಜೊತೆ ಮಾಡಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಪರಸ್ಪರ ನಂಬಿಕೆ, ಗೌರವದ ಆಧಾರದ ಮೇಲೆ ಸಂಬಂಧ ಮುಂದುವರಿಸಲು ಬದ್ಧ: ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ಗೆ ಪ್ರಧಾನಿ ಮೋದಿ

SCO ಶೃಂಗಸಭೆ: ಪುಟಿನ್ ಭೇಟಿಗೂ ಮುನ್ನ ಉಕ್ರೇನ್ ಜೊತೆ ಮೋದಿ ಮಾತು; ರಷ್ಯಾಕ್ಕೆ ಸೂಕ್ತ ಸಂದೇಶ ನೀಡಲು ಭಾರತ ಸಿದ್ಧ!

ವಿಜಯಪುರ: 'ಥೈಲ್ಯಾಂಡ್ ಮಾವಿನ ತಳಿ' ಬೆಳೆದು ವರ್ಷವಿಡೀ ಆದಾಯ ಗಳಿಸುವ ರೈತ ನವೀನ್! ಯಶೋಗಾಥೆ

ಮತದಾರರ ಅಧಿಕಾರ ಯಾತ್ರೆಗೆ ಪ್ರತ್ಯೇಕ ತಂಡವಾಗಿ ತೆರಳಿದ CM-DCM: ಕಾಂಗ್ರೆಸ್ ನಲ್ಲಿ ಬದಲಾದ ಸಮೀಕರಣ; ರಾಜ್ಯ ರಾಜಕೀಯದಲ್ಲಿ ಭಾರೀ ಸಂಚಲನ!

ಟ್ರಂಪ್ ಸುಂಕಾಸ್ತ್ರಕ್ಕೆ ಸೆಡ್ಡು: ಇಂದು ಚೀನಾ ಅಧ್ಯಕ್ಷ ಕ್ಸಿ ಜೊತೆಗೆ ಪ್ರಧಾನಿ ಮೋದಿಯ ಮಹತ್ವದ ಭೇಟಿ!

SCROLL FOR NEXT