'ಶುದ್ಧಿ' ಸಿನೆಮಾದ ನಟಿಯರಾದ ನಿವೇದಿತಾ, ಅಮೃತ ಕರಗದ ಮತ್ತು ಲಾರೆನ್ ಸ್ಪಾರ್ತನೋ 
ಸಿನಿಮಾ ಸುದ್ದಿ

ಮೂರು ನಿಜ ಜೀವನ ಘಟನೆಗಳನ್ನು ಬೆಸೆಯುವ 'ಶುದ್ಧಿ'; ಟ್ರೇಲರ್ ಹಿಟ್

ಸದ್ಯಕ್ಕೆ ಕನ್ನಡದ ಎರಡು ಸಿನೆಮಾಗಳ ಟ್ರೇಲರ್ ಗಳು ಬಹು ಚರ್ಚಿತ ವಿಷಯಗಳಾಗಿವೆ. ಅವುಗಳಲ್ಲಿ ಒಂದು 'ಶುದ್ಧಿ' ಮತ್ತು ಇನ್ನೊಂದು ಪ್ರದೀಪ್ ವರ್ಮಾ ನಿರ್ದೇಶನದ 'ಉರ್ವಿ'. ಶುದ್ಧಿ ಟ್ರೇಲರ್ ಬಿಡುಗಡೆಯಾದ

ಬೆಂಗಳೂರು: ಸದ್ಯಕ್ಕೆ ಕನ್ನಡದ ಎರಡು ಸಿನೆಮಾಗಳ ಟ್ರೇಲರ್ ಗಳು ಬಹು ಚರ್ಚಿತ ವಿಷಯಗಳಾಗಿವೆ. ಅವುಗಳಲ್ಲಿ ಒಂದು 'ಶುದ್ಧಿ' ಮತ್ತು ಇನ್ನೊಂದು ಪ್ರದೀಪ್ ವರ್ಮಾ ನಿರ್ದೇಶನದ 'ಊರ್ವಿ'. ಶುದ್ಧಿ ಟ್ರೇಲರ್ ಬಿಡುಗಡೆಯಾದ ಎರಡೇ ದಿನಗಳಲ್ಲಿ ೨.೫ ಲಕ್ಷಕ್ಕೂ ಹೆಚ್ಚು ಬಾರಿ ವೀಕ್ಷಣೆಗೊಂಡಿದೆ. 
ಈ ಉತ್ತೇಜನದಿಂದ ಸಂತಸಗೊಂಡಿರುವ ಚೊಚ್ಚಲ ನಿರ್ದೇಶಕ ಆದರ್ಶ್ ಎಚ್ ಈಶ್ವರಪ್ಪ, ಇದು ಮಹಿಳಾ ಕೇಂದ್ರಿತ ಸಿನೆಮಾ ಎಂದು ತಿಳಿಸುತ್ತಾರೆ. "ಟ್ರೇಲರ್ ನಲ್ಲಿ ತೋರಿಸರುವ ಪಾತ್ರಗಳು ನೈಜ ಎನ್ನಿಸಿ, ಸಂಗೀತ, ಛಾಯಾಗ್ರಹಣ ಮತ್ತು ಶಬ್ದ ವಿನ್ಯಾಸ ಎಲ್ಲವು ಪ್ರೇಕ್ಷಕರಿಗೆ ಮೆಚ್ಚಿಗೆಯಾಗಿದೆ" ಎನ್ನುತ್ತಾರೆ ಆದರ್ಶ್. 
ಈ ಹಿಂದೆ ಹಲವು ಕಿರುಚಿತ್ರಗಳನ್ನು ನಿರ್ದೇಶಿಸಿರುವ ಆದರ್ಶ್ ವೃತ್ತಿಯಲ್ಲಿ ಮೆಕಾನಿಕಲ್ ಎಂಜಿನಿಯರ್ ಆಗಿದ್ದವರು. ವೃತ್ತಿ ತೊರೆದು ಪಿ ಎಫ್ ಹಣ ಹಿಂಪಡೆದು ನ್ಯೂಯಾರ್ಕ್ ಫಿಲಂ ಅಕಾಡೆಮಿಯಲ್ಲಿ ಅಧ್ಯಯನ ಮಾಡಲು ಹೋದೆ ಎನ್ನುವ ಅವರು "ಮತ್ತೆ ನನ್ನ ಖರ್ಚು ನಿಭಾಯಿಸಲು ಕೆಲಸಕ್ಕೆ ಸೇರಿಕೊಂಡೆ. ಈಗ ಮೂರೂ ವಾರಗಳ ಹಿಂದೆ ನನ್ನ ಕೊನೆಯ ಕೆಲಸ ತೊರೆದು ಈಗ ಸಿನೆಮಾ ಬಿಡುಗಡೆಯ ಮೇಲೆ ಗಮನ ಕೇಂದ್ರೀಕರಿಸುತ್ತಿದ್ದೇನೆ" ಎನ್ನುತ್ತಾರೆ. 
'ಶುದ್ಧಿ' ಸಿನೆಮಾ ಮಾಡುವಾಗ ಹಲವು ಕೆಲಸಗಳನ್ನು, ಕೆಲವು ಬಾರಿ ರಾತ್ರಿ ಪಾಳಯದಲ್ಲಿಯೂ ಕೆಲಸ ಮಾಡುತ್ತಿದ್ದನ್ನು ವಿವರಿಸುವ ಆದರ್ಶ್ "೨೦೧೩ ರಲ್ಲಿ ಸ್ಕ್ರಿಪ್ಟ್ ಸಿದ್ದವಾಗಿತ್ತು ಆದರೆ ಹಲವು ಕಾರಣಗಳಿಂದ ೨೦೧೪ ರಲ್ಲಿ ಚಿತ್ರೀಕರಣ ಪ್ರಾರಂಭವಾಯಿತು ಮತ್ತು ಈ ವರ್ಷ ಬಿಡುಗಡೆಗೆ ಸಿದ್ಧವಾಗಿದೆ" ಎನ್ನುತ್ತಾರೆ.
ನನ್ನ ಸಿನೆಮಾ ಕಾಲ್ಪನಿಕ ಆದರೂ ಮೂರೂ ನಿಜ ಘಟನೆಗಳಿಂದ ಸ್ಫೂರ್ತಿ ಪಡೆದಿದೆ ಎನ್ನುತ್ತಾರೆ "ಅದರಲ್ಲಿ ಒಂದು ನಿರ್ಭಯ ಪ್ರಕರಣ ಆದರೆ ಆ ಘಟನೆಯನ್ನು ಹಾಗೆಯೇ ತೋರಿಸಿಲ್ಲ. ಆ ಘಟನೆ ಅಂತಹ ಅಪರಾಧಗಳ ವಿರುದ್ಧ ಹೋರಾಡಲು ಪಾತ್ರವೊಂದಕ್ಕೆ ಚಿತಾವಣೆ ಮಾಡುತ್ತದೆ" ಎಂದು ವಿವರಿಸುತ್ತಾರೆ. 
ನಟಿ ನಿವೇದಿತಾ ಮುಖ್ಯ ಪಾತ್ರದಲ್ಲಿದ್ದು, ಅಮೃತ ಕರಗದ ಕೂಡ ಈ ಸಿನೆಮಾದ ಮೂಲಕ ಪಾದಾರ್ಪಣೆ ಮಾಡಿದ್ದಾರೆ. ಸಿನೆಮಾ ಮಾರ್ಚ್ ಮೊದಲ ವಾರದಲ್ಲಿ ಬಿಡುಗಡೆಯಾಗಲಿದೆಯಂತೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ದಿತ್ವಾ ಚಂಡಮಾರುತಕ್ಕೆ ಶ್ರೀಲಂಕಾ ತತ್ತರ: ನೆರವು ನೀಡುವ ವಿಮಾನಗಳಿಗೆ ಅನುಮತಿ ವಿಳಂಬ, ಪಾಕ್ ಆರೋಪದ ವಿರುದ್ಧ ಭಾರತ ತೀವ್ರ ಕಿಡಿ

ಕುಡುಕರಿಗೊಬ್ಬ, ಬ್ಯಾಚುಲರ್‌ಗಳಿಗೆ ಮತ್ತೊಬ್ಬ ದೇವರು: ಹಿಂದೂಗಳಲ್ಲಿ ಎಷ್ಟು ದೇವರಿದ್ದಾರೆ: 3 ಕೋಟಿ ಇದ್ದಾರಾ? ವಿವಾದವೆಬ್ಬಿಸಿದ ರೇವಂತ್ ರೆಡ್ಡಿ ಹೇಳಿಕೆ

ಬಾಗಲಕೋಟೆಯಲ್ಲಿ ಭೀಕರ ರಸ್ತೆ ಅಪಘಾತ: ಕಬ್ಬಿನ ಟ್ರ್ಯಾಕ್ಟರ್ ಗೆ ಕಾರು ಡಿಕ್ಕಿ; ಸ್ಥಳದಲ್ಲೇ ನಾಲ್ವರು ಯುವಕರ ದುರ್ಮರಣ

Imran Khan ಸಾವಿನ ಊಹಾಪೋಹ ನಡುವೆ ಜೈಲಿನಲ್ಲಿ ಮಾಜಿ ಪ್ರಧಾನಿ ಭೇಟಿಯಾಗಿ ಬಂದ ಸಹೋದರಿ ಉಜ್ಮಾ ಖಾನಮ್ ಹೇಳಿದ್ದೇನು?

ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯಾನಾಥ್ ಇದ್ದ ವೇದಿಕೆಗೆ ನುಗ್ಗಿದ ಆಗಂತುಕ!

SCROLL FOR NEXT