ಉಪೇಂದ್ರ 
ಸಿನಿಮಾ ಸುದ್ದಿ

ತಮ್ಮ ೫೦ನೆಯ ಚಿತ್ರ ನಿರ್ದೇಶಿಸಲಿರುವ ಉಪೇಂದ್ರ?

ಸೈಕಾಲಾಜಿಕಲ್ ಥ್ರಿಲ್ಲರ್ 'ಎ' ಸಿನೆಮಾದ ಮೂಲಕ ನಿರ್ದೇಶಕ ಮತ್ತು ನಾಯಕನಟನಾಗಿ ಒಟ್ಟಿಗೆ ಕಾಣಿಸಿಕೊಂಡಿದ್ದ ಉಪೇಂದ್ರ ಯುವ ಸಿನೆಮಾ ಪ್ರೇಕ್ಷಕರಿಗೆ ತಮ್ಮ ವಿಚಿತ್ರ ಮ್ಯಾನರಿಸಂ ಮೂಲಕ...

ಬೆಂಗಳೂರು: ಸೈಕಾಲಾಜಿಕಲ್ ಥ್ರಿಲ್ಲರ್ 'ಎ' ಸಿನೆಮಾದ ಮೂಲಕ ನಿರ್ದೇಶಕ ಮತ್ತು ನಾಯಕನಟನಾಗಿ ಒಟ್ಟಿಗೆ ಕಾಣಿಸಿಕೊಂಡಿದ್ದ ಉಪೇಂದ್ರ ಯುವ ಸಿನೆಮಾ ಪ್ರೇಕ್ಷಕರಿಗೆ ತಮ್ಮ ವಿಚಿತ್ರ ಮ್ಯಾನರಿಸಂ ಮೂಲಕ ಹುಚ್ಚೆಬ್ಬಿಸಿದ್ದವರು. ನಂತರ ನಿರ್ದೇಶನ ಕಾರ್ಯವನ್ನು ಸ್ವಲ್ಪ ಮಟ್ಟಿಗೆ ಕಡಿಮೆ ಮಾಡಿಕೊಂಡು ಹೆಚ್ಚು ನಟನೆಗೆ ಒತ್ತು ಕೊಟ್ಟವರು. ನಿರ್ದೇಶನ ಮಾಡುವಂತೆ ಆಗ ಅವರ ಅಭಿಮಾನಿಗಳ ಕೂಗು ಹೆಚ್ಚಿದಂತೆ, ಸೂಪರ್, ಉಪ್ಪಿ-೨ ಮುಂತಾದ ಸಿನೆಮಾಗಳನ್ನು ಮಾಡಿದರಾದರೂ, 'ಎ', 'ಉಪೇಂದ್ರ' ಮಟ್ಟಿಗೆ ಈ ಸಿನೆಮಾಗಳು ಯಶಸ್ಸು ಕಾಣಲಿಲ್ಲ. 
ಈಗ ಅವರ ೫೦ ನೆಯ ಸಿನೆಮಾಗೆ ಅವರೇ ವಿಶಿಷ್ಟವಾದ ಸಿನೆಮಾವೊಂದನ್ನು  ನಿರ್ದೇಶಿಸಕೊಳ್ಳಲಿದ್ದಾರೆ ಎಂಬ ಗುಲ್ಲು ಗಾಂಧಿನಗರದಲ್ಲಿ ಎದ್ದಿದೆ. ಇದಕ್ಕಾಗಿ ಅವರು ೧೫-೨೦ ದಿನಗಳಿಂದ ಸ್ಕ್ರಿಪ್ಟ್ ಮೇಲೆ ಕೆಲಸ ಮಾಡುತ್ತಿದ್ದಾರೆ ಎನ್ನುತ್ತವೆ ಮೂಲಗಳು. 
ಒಮ್ಮೆ ಸ್ಕ್ರಿಪ್ಟ್ ಅಂತಿಮವಾದ ಮೇಲೆ ಅದನ್ನು ನಿರ್ದೇಶಿಸುವುದರ ಬಗ್ಗೆ ಉಪೇಂದ್ರ ಅವರೇ ನಿಶ್ಚಯಿಸಲಿದ್ದಾರೆ ಎಂದು ತಿಳಿಸುತ್ತವೆ ಮೂಲಗಳು. 
ಈ ಮಧ್ಯೆ ಉಪೇಂದ್ರ ಉದಯ್ ಪ್ರಕಾಶ್ ನಿರ್ದೇಶನದ 'ಡಾ. ಮೋದಿ' ಮತ್ತು ನಾಗಣ್ಣ ನಿರ್ದೇಶನದ 'ಕನ್ನೇಶ್ವರ' ಸಿನೆಮಾಗಳಿಂದ ಹೊರಬಂದಿದ್ದಾರೆ ಎಂದು ತಿಳಿದುಬಂದಿದೆ. ಅವರು ಸದ್ಯಕ್ಕೆ ನಿರ್ದೇಶಕರಾದ ಮಂಜು ಮಾಂಡವ್ಯ ಮತ್ತು ಶಶಾಂಕ್ ಸಿನೆಮಾಗಳಲ್ಲಿ ಕೆಲಸ ಮಾಡಲಿದ್ದಾರೆ ಎನ್ನಲಾಗಿದೆ. ಈ ಸಿನೆಮಾಗಳಿಗೆ ಸ್ಕ್ರಿಪ್ಟ್ ಸಿದ್ಧವಾಗುತ್ತಿವೆ. 
ಉಪೇಂದ್ರ ಅವರ ಮುಂದಿನ ಚಿತ್ರ 'ಉಪ್ಪಿ ಮತ್ತೆ ಹುಟ್ಟಿ ಬಾ- ಇಂತಿ ಪ್ರೇಮ' ಚಿತ್ರೀಕರಣ ಮುಗಿದಿದ್ದು, ಡಬ್ಬಿಂಗ್, ರೇ ರೆಕಾರ್ಡಿಂಗ್ ಕಾರ್ಯಗಳು ಮುಂದುವರೆದಿವೆ. ಶೀಘ್ರದಲ್ಲೇ ಬಿಡುಗಡೆಯಾಗಬೇಕಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಪಶ್ಚಿಮ ಬಂಗಾಳ ವೈದ್ಯಕೀಯ ವಿದ್ಯಾರ್ಥಿನಿ ಗ್ಯಾಂಗ್ ರೇಪ್ ಕೇಸ್: ಮೂವರ ಬಂಧನ

ಯುದ್ಧ ತೀವ್ರ: ಪಾಕಿಸ್ತಾನದ ಏರ್ ಸ್ಟ್ರೈಕ್ ಗೆ ಅಫ್ಘಾನಿಸ್ತಾನದಿಂದ ಕ್ಷಿಪಣಿ ದಾಳಿ ಉತ್ತರ

20 ವರ್ಷ ಸಾಕಿ ಬೆಳೆಸಿದ 'ಅಶ್ವತ್ಥ'ಕ್ಕೆ ಕಿಡಿಗೇಡಿಗಳ ಕೊಡಲಿ ಪೆಟ್ಟು, ಬಿಕ್ಕಿ ಬಿಕ್ಕಿ ಅತ್ತ 'ವೃಕ್ಷಮಾತೆ', ಇಬ್ಬರ ಬಂಧನ, video viral

2nd Test, Day 3: ಮೊದಲ ಇನ್ನಿಂಗ್ಸ್ ನಲ್ಲಿ 248 ರನ್ ಗೆ ವಿಂಡೀಸ್ ಆಲೌಟ್, ಫಾಲೋಆನ್ ಹೇರಿದ ಭಾರತ

ಇತಿಹಾಸ ಬರೆದ Sherry Singh, 48 ವರ್ಷಗಳಲ್ಲಿ ಮೊದಲ ಬಾರಿಗೆ ಭಾರತಕ್ಕೆ 'ಮಿಸ್ ಯೂನಿವರ್ಸ್' ಕಿರೀಟ!

SCROLL FOR NEXT