ಬೆಂಗಳೂರು: ನಟ ದರ್ಶನ್ ಅಭಿನಯಿಸುತ್ತಿರುವ ಪ್ರಕಾಶ್ ಜಯರಾಮ್ ಅವರ ಮುಂದಿನ ಚಿತ್ರದ ಹೆಸರು 'ತಾರಕ್'. ನಿರ್ದೇಶಕರು ಹೇಳುವಂತೆ ಇದು ಸಿನೆಮಾದಲ್ಲಿ ದರ್ಶನ್ ನಿರ್ವಹಿಸುತ್ತಿರುವ ಪಾತ್ರದ ಹೆಸರು. "ಈ ಸಿನೆಮಾದಲ್ಲಿ ದರ್ಶನ್ ಅವರ ಹೆಸರು ತಾರಕ್ ರಾಮ್ ಮತ್ತು ಅವರು ಈ ಶೀರ್ಷಿಕೆ ಪಾತ್ರ ನಿರ್ವಹಿಸಲಿದ್ದಾರೆ" ಎನ್ನುತ್ತಾರೆ ಪ್ರಕಾಶ್.
ಇಂದು ನಟ ದರ್ಶನ್ ಅವರ ಹುಟ್ಟುಹಬ್ಬವಾಗಿದ್ದು ಈ ಅಧಿಕೃತ ಘೋಷಣೆಯನ್ನು ಮಾಡಲಾಗಿದೆ. ಮಾರ್ಚ್ ಮೊದಲ ವಾರದಿಂದ ಈ ಸಿನೆಮಾ ಚಿತ್ರೀಕರಣ ಪ್ರಾರಂಭವಾಗಲಿದೆ. "ನಾವು ಈಗ ಫೋಟೋ ಶೂಟ್ ಮುಗಿಸಿದ್ದೇವೆ. ದರ್ಶನ್ ಅವರ 'ಚಕ್ರವರ್ತಿ' ಬಿಡುಗಡೆಯಾಗಬೇಕಿದೆ.
"ನಮ್ಮ ಸಿನೆಮಾಗೆ ದರ್ಶನ್ ದೇಹವನ್ನು ಇನ್ನು ಲೀನಗೊಳಿಸಿಕೊಳ್ಳಲಿದ್ದಾರೆ. ಅದಕ್ಕಾಗಿ ಅವರಿಗೆ ಇನ್ನಷ್ಟು ಸಮಯಾವಕಾಶ ಬೇಕಿದೆ. ಈ ಮಧ್ಯೆ ಚಿತ್ರೀಕರಣಕ್ಕಾಗಿ ಕೊನೆ ಗಳಿಗೆಯ ಸಿದ್ಧತೆಗಳು ಜಾರಿಯಲ್ಲಿವೆ" ಎನ್ನುತ್ತಾರೆ ಪ್ರಕಾಶ್.
ದುಷ್ಯಂತ್ ಸಿನೆಮಾದ ನಿರ್ಮಾಪಕರಾಗಿದ್ದು, ಅರ್ಜುನ್ ಜನ್ಯ ಸಂಗೀತ ಮತ್ತು ಕೃಷ್ಣಕುಮಾರ್ ಅವರ ಸಿನೆಮ್ಯಾಟೋಗ್ರಫಿ ಇದೆ.