ಹಿರಿಯ ನಿರ್ದೇಶಕ ಶ್ಯಾಮ್ ಬೆನೆಗಲ್
ನವದೆಹಲಿ: ಲಿಪ್'ಸ್ಟಿಕ್ ಅಂಡರ್ ಮೈ ಬುರ್ಖಾ ಚಿತ್ರಕ್ಕೆ ಸೆನ್ಸಾರ್ ಮಂಡಳಿ ಪ್ರಮಾಣಪತ್ರ ನೀಡಲು ನಿರಾಕರಿಸಿರುವುದಕ್ಕೆ ಸಾಕಷ್ಟು ವಿರೋಧಗಳ ವ್ಯಕ್ತವಾಗುತ್ತಿದ್ದು, ಸೆನ್ಸಾರ್ ಮಂಡಳಿ ವಿರುದ್ಧ ಹಿರಿಯ ನಿರ್ದೇಶಕ ಶ್ಯಾಮ್ ಬೆನೆಗಲ್ ಅವರು ಶನಿವಾರ ಕಿಡಿಕಾರಿದ್ದಾರೆ.
ಈ ಕುರಿತಂತೆ ಮಾತನಾಡಿರುವ ಅವರು, ಸೆನ್ಸಾರ್ ಮಂಡಳಿ ಪ್ರಮಾಣಪತ್ರ ನೀಡಲು ನಿರಾಕರಿಸುವಂತಿಲ್ಲ. ಚಿತ್ರವನ್ನು ನಿಷೇಧ ಮಾಡಬೇಕು. ಇಲ್ಲವೇ, ಸರಿಯೆನಿಸದ ದೃಶ್ಯಗಳನ್ನು ತೆಗೆದು ಹಾಕಬೇಕು. ಈ ಎರಡನ್ನೂ ಮಾಡದೆಯೇ ಮಂಡಳಿ ಪ್ರಮಾಣಪತ್ರ ನೀಡಲು ನಿರಾಕರಿಸಿರುವುದು ಸರಿಯಲ್ಲ. ವರ್ಗೀಕರಣಯುತ ಸಿನಿಮಾಗಳ ಪರವಾಗಿ ಯಾವಾಗಲೂ ನಿಲ್ಲುತ್ತಿದ್ದೆ. ಸೆನ್ಸಾರ್ ಮಾಡಿದ್ ಸಿನಿಮಾಗಳ ಪರವಾಗಿ ಎಂದಿಗೂ ನಿಂತಿರಲಿಲ್ಲ ಎಂದು ಹೇಳಿದ್ದಾರೆ.
ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಸಮತಿಯನ್ನು ರಚಿಸಿತ್ತು. ನಾನೂ ಕೂಡ ಆ ಸಮಿತಿಯ ಭಾಗವಾಗಿದ್ದೆ. ಎರಡೂ ಭಾಗವಾಗಿ ಸಿನಿಮಾಗಳನ್ನು ನೋಡುತ್ತಿದ್ದೆವು. ಹಾಗೂ ಎಲ್ಲಾ ರೀತಿಯ ಆಯಾಮಗಳಲ್ಲೂ ಚಿತ್ರವನ್ನು ನೋಡಿ ಸೆನ್ಸಾರ್ ಮಾಡುತ್ತಿದ್ದೆವು. ಮೊದಲನೇ ಭಾಗದ ವರದಿಯನ್ನು 2016 ಏಪ್ರಿಲ್ ತಿಂಗಳಿನಲ್ಲಿ ಸಲ್ಲಿಕೆ ಮಾಡಿದ್ದೆವು. ಸಂಪೂರ್ಣ ವರದಿಯನ್ನು 2016 ಅಕ್ಟೋಬರ್ ತಿಂಗಳಿನಲ್ಲಿ ಸಲ್ಲಿಕೆ ಮಾಡಿದ್ದೆವು. ಅಲ್ಲಿಯವರೆಗೂ ಯಾವುದೇ ಪ್ರತಿಕ್ರಿಯೆಗಳಾಗಲೀ, ಹೇಳಿಕೆಗಳಾಗಲೀ ವ್ಯಕ್ತವಾಗಿರಲಿಲ್ಲ. ಸಾಕಷ್ಟು ಶಿಫಾರಸ್ಸುಗಳನ್ನು ಸರ್ಕಾರ ಅಳವಡಿಕೆ ಮಾಡಿರುವುದು ತಿಳಿದುಬಂದಿತ್ತು.
ಚಿತ್ರಕ್ಕೆ ಪ್ರಮಾಣಪತ್ರವನ್ನೇ ನೀಡದಿರುವ ಸೆನ್ಸಾರ್ ಪ್ರತಿಕ್ರಿಯೆ ನೀಡಿರುವುದು ನಿಜಕ್ಕೂ ವಿಚಿತ್ರವೆನಿಸುತ್ತದೆ. ಈ ಮೂಲಕ ಏನನ್ನು ಹೇಳಲು ಇಚ್ಛಿಸುತ್ತಿದ್ದಾರೆ? ಪುರುಷರ ಕಲ್ಪನೆಗಳಿಗಿಂತ ಮಹಿಳೆಯಲ ಕಲ್ಪನೆಗಳು ಬಹಳ ಕೆಟ್ಟದಾಗಿವೆ ಎಂಬುದನ್ನು ಹೇಳುತ್ತಿದ್ದಾರೆಯೇ? ನನಗೆ ಅರ್ಥವಾಗುತ್ತಿಲ್ಲ. ಸಾರ್ವಜನಿಕರು ಏನನ್ನು ನೋಡಬೇಕು ಹಾಗೂ ಏನನ್ನು ನೋಡಬಾರದು ಎಂಬುದನ್ನು ಸೆನ್ಸಾರ್ ಹೇಳಬಾರದು. ನೋಡುವುದು, ಬಿಡುವುದು ಅವರ ಇಷ್ಟಕ್ಕೆ ಬಿಟ್ಟದ್ದು ಎಂದು ತಿಳಿಸಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos