ಬೆಂಗಳೂರು: ಯಶಸ್ವಿ ಸಿನೆಮಾ 'ಕಿರಿಕ್ ಪಾರ್ಟಿ' ಸಿನೆಮಾದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿರುವ ಸಂಯುಕ್ತ ಹೆಗಡೆ ಸದ್ಯಕ್ಕೆ ಸಂತಸದ ಅಲೆಯಲ್ಲಿ ತೇಲುತ್ತಿದ್ದಾರೆ. ಅವರ ಬಾಲ್ಯದ ಕನಸು ನನಸಾಗಿರುವುದುದೇ ಈ ಸಂತಸಕ್ಕೆ ಕಾರಣ. "ನಟನೆ ಅದಾಗಿಯೇ ಬಂತು, ಆದರೆ ನಾನು ೮ ವರ್ಷದವಳಾಗಿದ್ದಾಗಿಲಿಂದಲೂ ರೋಡೀಸ್ ನನ್ನ ಕನಸಾಗಿತ್ತು. ರೋಡೀಸ್ ಗೆ ಆಯ್ಕೆಯಾಗಿರುವುದಕ್ಕೆ ನನಗೆ ಅತೀವ ಸಂತಸವಾಗಿದೆ" ಎನ್ನುತ್ತಾರೆ. ಇತ್ತೀಚಿಗೆ ನಡೆದ ಆಡಿಷನ್ ನಲ್ಲಿ ಕರ್ನಾಟಕದಿಂದ ಆಯ್ಕೆಯಾಗಿರುವ ಒಬ್ಬರೇ ಸ್ಪರ್ಧಿ ಸಂಯುಕ್ತ.
ರೋಡೀಸ್ ಭಾಗವಾಗುವುದಕ್ಕೆ ಇಷ್ಟು ಉತ್ಸಾಹವೇಕೆ ಎಂದು ಪ್ರಶ್ನಿಸಿದರೆ "ನನಗೆ ಪ್ರವಾಸ ಎಂದರೆ ಪ್ರೀತಿ ಮತ್ತು ನನ್ನ ಜೀವನದಲ್ಲಿ ಸಾಹಸವನ್ನು ಯಾವಾಗಲೂ ಎದುರು ನೋಡುತ್ತೇನೆ. ಮತ್ತು ಈಗ ೩೦ ದಿನಗಳನ್ನು ಅದನ್ನೇ ಮಾಡುವುದು ಮತ್ತು ಫೋನ್ ಹಾಗು ಪ್ರೀತಿಪಾತ್ರರಾದವರಿಂದ ದೂರವಿರಬೇಕು ಎನ್ನುವುದು ಸುಲಭವಲ್ಲ. ಆದುದರಿಂದ ಇದನ್ನು ಪ್ರಯತ್ನಿಸಬೇಕು ಎಂದೆನಿಸಿತು" ಎನ್ನುತ್ತಾರೆ ಸಂಯುಕ್ತ.
"ನಾನು ಅಲ್ಲಿ ಹೆಸರು ಗಳಿಸಲು ಹೋಗುತ್ತಿಲ್ಲ ಆದರೆ ಆ ಪ್ರದರ್ಶನದಲ್ಲಿ ಭಾಗವಹಿಸುವುದು ನನ್ನ ಕನಸಾಗಿತ್ತು" ಎನ್ನುತ್ತಾರೆ ಸಂಯುಕ್ತ.
ಇಂದಿನಿಂದ ಈ ಪ್ರದರ್ಶನ ಪ್ರಸಾರವಾಗಲಿದ್ದು, ಶನಿವಾರ ಮತ್ತು ಭಾನುವಾರ ಇದು ಮೂಡಿಬರಲಿದೆ. ಅವರು ರಣ್ ವಿಜಯ್ ಸಿಂಗ್ ಅವರನ್ನು ಭೇಟಿ ಮಾಡುವುದಕ್ಕೂ ಉತ್ಸುಕರಾಗಿದ್ದಾರಂತೆ. "ನಾನು ರಣ್ ವಿಜಯ್ ಅವರ ಅತಿ ದೊಡ್ಡ ಅಭಿಮಾನಿ. ನಾನು ಅವರ ಭೇಟಿಗಾಗಿ ಎದುರು ನೋಡುತ್ತಿದ್ದೇನೆ. ನನಗೆ ಅವರ ಮೇಲೆ ಕ್ರಶ್ ಇಲ್ಲ ಆದರೆ ಅವರ ವ್ಯಕ್ತಿತ್ವ ನನಗೆ ಬಹಳ ಇಷ್ಟ" ಎನ್ನುತ್ತಾರೆ.