'ಸೆಕೆಂಡು ಬಕೆಟು ಬಾಲ್ಕನಿ' ಸಿನೆಮಾ ಪೋಸ್ಟರ್
ಬೆಂಗಳೂರು: ನಿರ್ದೇಶಕನಾಗಿ ಹೊರಹೊಮ್ಮಿದ ಗೀತರಚನಾಕಾರ ಅರಸು ಅಂತಾರೆ ಅವರ ನಿರ್ದೇಶನದಲ್ಲಿ ಹರ್ಷ ಎಂಟರ್ಟೇನರ್ಸ್ ಕುತೂಹಲಕಾರಿ ಸಿನೆಮಾವೊಂದರ ನಿರ್ಮಾಣಕ್ಕೆ ಇಳಿದಿದೆ.
'ಸೆಕೆಂಡು ಬಕೆಟು ಬಾಲ್ಕನಿ' ಎಂಬ ವಿಚಿತ್ರ-ಕುತೂಹಲಕಾರಿ ಶೀರ್ಷಿಕೆಯುಳ್ಳ ಸಿನೆಮಾ ಬ್ಲ್ಯಾಕ್ ಟಿಕೆಟ್ ಮಾರುವವರ ಕಥೆ ಹೊಂದಿದೆಯಂತೆ. 'ಲವ್ ಇನ್ ಮಂಡ್ಯ' ಸಿನೆಮಾದ ಮೂಲಕ ಪಾದಾರ್ಪಣೆ ಮಾಡಿದ ಅರಸು ಅಂತಾರೆ, ಎರಡು ವರ್ಷಗಳ ನಂತರ ತಮ್ಮ ಎರಡನೇ ಸಿನೆಮಾಗೆ ಹಿಂದಿರುಗಿದ್ದಾರೆ.
ನಿಜ ಘಟನೆಯೊಂದನ್ನು ಆಧರಿಸಿದ ಕಥೆ ಇದು ಎಂದು ತಿಳಿಸುವ ಅಂತಾರೆ "ಬ್ಲ್ಯಾಕ್ ಟಿಕೆಟ್ ಮಾರುವವರನ್ನು ಒಳಗೊಂಡ ಜನರಿಗೆ ಸಂಬಂಧಿಸಿದಂತೆ ಮೈಸೂರಿನಲ್ಲಿ ನಡೆದ ನಿಜ ಘಟನೆಯಿಂದ ಸ್ಫೂರ್ತಿ ಪಡೆದ ಕಥೆ ಇದು.
ಅವರ ಜೀವನಶೈಲಿಯನ್ನು ತೆರೆ ಮೇಲೆ ಮೂಡಿಸಲು ನಾನು ನಿರ್ಧರಿಸಿದ್ದೇನೆ" ಎನ್ನುತ್ತಾರೆ ನಿರ್ದೇಶಕ. "ಇವರನ್ನು ನಾನು ಸಣ್ಣವನಾಗಿದ್ದಾಗಿಲಿಂದಲೂ ಬಹಳ ಹತ್ತಿರದಿಂದ ಕಂಡಿದ್ದೇನೆ" ಎಂದು ಕೂಡ ತಿಳಿಸುತ್ತಾರೆ.
ಸಿನೆಮಾದ ಒಂದು ಪೋಸ್ಟರ್, ಸ್ವತಂತ್ರ ಚಿತ್ರಮಂದಿರಗಳ ತೆರೆಯ ಕೆಳಗೆ ಮರಳು ತುಂಬಿನ ಬಕೆಟ್ ಗಳ ಚಿತ್ರವನ್ನು ಒಳಗೊಂಡಿರುವುದು ವಿಶೇಷವಾಗಿದೆ. "ಇಂದಿಗೂ ಮೈಸೂರು ಮತ್ತು ಮಂಡ್ಯಾದಲ್ಲಿ ಚಿತ್ರಮಂದಿರಗಳಲ್ಲಿ ಈ ಆಚರಣೆ ಇದೆ" ಎನ್ನುವ ಅವರು "ತೆರೆಯ ಕೆಳಗಿರುವ ಈ ಬಕೆಟ್ ಗಳಿಂದ ಗಾಂಧಿ ಕ್ಲಾಸ್ ಪ್ರಾರಂಭವಾಗುತ್ತದೆ... ಟಿಕೆಟ್ ಗಳನ್ನೂ ಬಕೆಟ್ಟು, ಸೆಕಂಡ್ ಕ್ಲಾಸು ಮತ್ತು ಬಾಲ್ಕನಿ ಎಂದು ಮಾರಲಾಗುತ್ತದೆ" ಎನ್ನುತ್ತಾರೆ.
ಮಾರ್ಚ್ ೨ ರಿಂದ ಚಿತ್ರೀಕರಣ ಪ್ರಾರಂಭವಾಗಲಿದ್ದು, ರಂಗಭೂಮಿ ನಟರನ್ನು ತೊಡಗಿಸಿಕೊಳ್ಳುವುದಾಗಿ ತಿಳಿಸುತ್ತಾರೆ ನಿರ್ದೇಶಕ. "ವಿವಿಧ ಪಾತ್ರಗಳನ್ನು ನಿಭಾಯಿಸಲು ಅವರಿಗೆ ತರಬೇತಿ ನೀಡಲಾಗಿದೆ" ಎನ್ನುತ್ತಾರೆ ಅಂತಾರೆ.
ಚಿತ್ರೀಕರಣಕ್ಕೂ ಮುಂಚಿತವಾಗಿ ಮೋಷನ್ ಪೋಸ್ಟರ್ ಬಿಡುಗಡೆ ಮಾಡುವುದಾಗಿ ತಿಳಿಸುವ ಅಂತಾರೆ, "ನಮ್ಮದು ಪಕ್ಕಾ ಲೋಕಲ್ ಸಿನೆಮಾ" ಎನ್ನುತ್ತಾರೆ. ಅನೂಪ್ ಸೀಳಿನ್ ಅವರ ಸಂಗೀತ ಮತ್ತು ಅಭಿಶೇಕ್ ಕಾಸರಗೋಡ್ ಅವರ ಸಿನೆಮ್ಯಾಟೋಗ್ರಾಫಿ ಚಿತ್ರಕ್ಕಿದೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos