ಉಪೇಂದ್ರ 
ಸಿನಿಮಾ ಸುದ್ದಿ

ಬೆಂಗಳೂರಿನ ಅಂಡರ್ ವರ್ಲ್ಡ್ ಡಾನ್ ಜಯರಾಜ್ ಪಾತ್ರದಲ್ಲಿ ಉಪೇಂದ್ರ

ಮಮ್ಮಿ ಸೇವ್ ಮಿ ಚಿತ್ರದ ಯಶಸ್ಸಿನ ನಂತರ ಮತ್ತೊಂದು ಸಿನಿಮಾ ಮಾಡಲು ಹೊರಟಿರುವ ನಿರ್ದೇಶಕ ಲೋಹಿತ್ ಅಂಡರ್ ವರ್ಲ್ಡ್ ಡಾನ್ ಎಂ ಪಿ ಜಯರಾಜ್ ...

ಬೆಂಗಳೂರು: ಮಮ್ಮಿ ಸೇವ್ ಮಿ ಚಿತ್ರದ ಯಶಸ್ಸಿನ ನಂತರ ಮತ್ತೊಂದು ಸಿನಿಮಾ ಮಾಡಲು ಹೊರಟಿರುವ ನಿರ್ದೇಶಕ ಲೋಹಿತ್ ಅಂಡರ್ ವರ್ಲ್ಡ್ ಡಾನ್ ಎಂ ಪಿ ಜಯರಾಜ್ ಕುರಿತು ಸಿನಿಮಾ ಮಾಡಲು ತಯಾರಿ ನಡೆಸಿದ್ದಾರೆ.

ಚಿತ್ರದ ಕುರಿತು ಜನವರಿ 15ರ ನಂತರ ಅಧಿಕೃತ ಮಾಹಿತಿ ಹೊರಬೀಳಲಿದೆ ಎಂದು ಮೂಲಗಳು ತಿಳಿಸಿವೆ. ಅಗ್ನಿ ಶ್ರೀಧರ್ ಚಿತ್ರದಲ್ಲಿ ಪಾತ್ರ ಮಾಡಲಿದ್ದು, ಸ್ಕ್ರಿಪ್ಟ್ ತಯಾರಾಗುತ್ತಿದೆ. ಜಯರಾಜ್ ಪಾತ್ರವನ್ನು ಉಪೇಂದ್ರ ನಿರ್ವಹಿಸಲಿದ್ದಾರೆ.

ಅಂದುಕೊಂಡಂತೆ ಎಲ್ಲವೂ ಆದರೆ ಅಂದರ್ ಬಾಹರ್ ಚಿತ್ರ ನಿರ್ಮಿಸಿದ್ದ ಭಾಸ್ಕರ್ ಉಪೇಂದ್ರ ಅವರ 54ನೇ ಚಿತ್ರ ವನ್ನು ನಿರ್ಮಿಸಲಿದ್ದಾರೆ. ಚಿತ್ರದ ಬಗ್ಗೆ ಪ್ರಕಟಿಸಲು ಇದು ಸಮಯವಲ್ಲ, ಏಕೆಂದರೆ ಉಪೇಂದ್ರ ಅವರು ಹಲವು ಚಿತ್ರಗಳಿಗೆ ಸಹಿ ಮಾಡಿದ್ದಾರೆ . ಆದರೆ ಚಿತ್ರದಲ್ಲಿ ಪಾತ್ರ ಮಾಡು ಅವರು ಒಪ್ಪಿದ್ದಾರೆ.

1980ರ ದಶಕದ ಭೂಗತ ಜಗತ್ತಿನ ನೈಜ ಕಥೆಯನ್ನು ಅಗ್ನಿ ಶ್ರೀಧರ್ ಗಿಂತ ಚೆನ್ನಾಗಿ ವರ್ಣಿಸಲು ಮತ್ಯಾರಿಂದಲೂ ಸಾಧ್ಯವಿಲ್ಲ,  ಹೀಗಾಗಿ ಅವರೇ ಸಂಭಾಷಣೆ ಬರೆಯುತ್ತಿದ್ದಾರೆ.

ಉಪೇಂದ್ರ ಸದ್ಯ ನಾಗಣ್ಣ ಅವರ ಕಣ್ಣೇಶ್ವರ ಚಿತ್ರದ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದಾರೆ. ಅದಾದ ನಂತರ ಕೆ. ಮಾದೇಶ ಅವರ ಉಪ್ಪಿ ರುಪಿ ಹಾಗೂ ಶಶಾಂಕ್ ಮತ್ತು ಮಂಜು ಮಾಂಡವ್ಯ ಅವರ ಮುಂದಿಮ ಚಿತ್ರಗಳಿಗೆ ಉಪೇಂದ್ರ ಸಹಿಹಾಕಿದ್ದಾರೆ.

ಇನ್ನೂ ಸ್ಯಾಂಡಲ್ ವುಡ್ ನಲ್ಲಿ ನೆಲೆ ಕಂಡುಕೊಳ್ಳಲು ಯತ್ನಿಸುತ್ತಿರುವ  ಡಾನ್ ಜಯರಾಜ್ ಪುತ್ರ ಅಜಿತ್ ಜಯರಾಜ್ ತಮ್ಮ ತಂದೆಯ ಬಗ್ಗೆ ಒಂದು ಸಿನಿಮಾ ಮಾಡಬೇಕೆಂದು ಬಯಸಿದ್ದರು. ನನ್ನ ತಂದೆ ರೌಡಿಯಾಗಿದ್ದರೂ, ಹಲವರಿಗೆ ಅವರು ರಾಬಿನ್ ವುಡ್ ಆಗಿದ್ದರು ಎಂದು ಸಿಟಿ ಎಕ್ಸ್ ಪ್ರೆಸ್ ಜೊತೆ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದರು.

ತಾನು ಅಂಕಲ್ ಎಂದು ಭಾವಿಸಿರುವ ಅಗ್ನಿ ಶ್ರೀಧರ್ ಚಿತ್ರಕ್ಕೆ ಸಂಭಾಷಣೆ ಬರೆಯುತ್ತಿರುವುದು ತನಗೆ ಸಂತಸ ತಂದಿದೆ ಎಂದು ಅಜಿತ್ ಹೇಳಿದ್ದಾರೆ. ಇನ್ನೂ ಉಪೇಂದ್ರ ಅವರ ಚಿತ್ರ ನಿರ್ದೇಶಿಸುತ್ತಿರುವುಕ್ಕೆ ಲೋಹಿತ್ ಹರ್ಷ ವ್ಯಕ್ತ ಪಡಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Nepal floods: ಸಾವಿನ ಸಂಖ್ಯೆ 157ಕ್ಕೇರಿಕೆ, 750ಕ್ಕೂ ಅಧಿಕ ಮಂದಿ ನಾಪತ್ತೆ, ನೇಪಾಳಕ್ಕೆ ಭಾರತ ನೆರವು! ಸಹಾಯವಾಣಿ ಬಿಡುಗಡೆ

ನೇಪಾಳ ಭೀಕರ ಪ್ರವಾಹ: 95 ಮಂದಿ ಸಾವು; 105 ಭಾರತೀಯರು ಸೇರಿ 400 ಮಂದಿ ನಾಪತ್ತೆ: ಬಿಹಾರ, ಯುಪಿಯಲ್ಲಿ ಹೈ ಅಲರ್ಟ್! Video

ನೇಪಾಳ ಪ್ರವಾಹ: ಭಾರತಕ್ಕೆ ದೊಡ್ಡ ಆತಂಕವಿಲ್ಲ, ಜಲಾಶಯಗಳ ನೀರಿನ ಮಟ್ಟ ಇಳಿಕೆ: ಕೇಂದ್ರ ಸ್ಪಷ್ಟನೆ

Sugar Price: ಈರುಳ್ಳಿ ಬೆನ್ನಲ್ಲೇ ಇದೀಗ ಸಕ್ಕರೆ ಶಾಕ್: ಕೆಜಿಗೆ 65 ರೂ ದಾಟಿದ ದರ, ಗ್ರಾಹಕರ ಜೇಬಿಗೆ 'ಸಿಹಿ ಕಹಿ'!

2nd Test: ಬೌಂಡರಿ ಲೈನ್ ಬಳಿ ದುರ್ವರ್ತನೆ ತೋರಿದ್ದ ಲಂಕಾ ಆಟಗಾರ Prabath Jayasuriyaಗೆ ಬರೆ ಹಾಕಿದ ICC!