ರಿಕ್ತ ಸಿನೆಮಾದ ಸ್ಟಿಲ್ 
ಸಿನಿಮಾ ಸುದ್ದಿ

ಪೂರ್ಣ ಮನರಂಜನಾ ಚಿತ್ರದಲ್ಲಿ ದೆವ್ವ ಮತ್ತು ಮಗುವಿನ ಪಾತ್ರದಲ್ಲಿ ಸಂಚಾರಿ ವಿಜಯ್

'ನಾನು ಅವನಲ್ಲ ಅವಳು' ಸಿನೆಮಾದ ಅದ್ಭುತ ನಟನೆಗೆ ರಾಷ್ಟ್ರಪ್ರಶಸ್ತಿ ಪಡೆದು ಜನಪ್ರಿಯತೆಯ ಉತ್ತುಂಗಕ್ಕೇರಿದ ಸಂಚಾರಿ ವಿಜಯ್ ನಂತರ ಹಲವು ವಿಭಿನ್ನ ಪಾತ್ರಗಳನ್ನು ಪಡೆಯುತ್ತಾ ಬಂದಿದ್ದಾರೆ.

ಬೆಂಗಳೂರು: 'ನಾನು ಅವನಲ್ಲ ಅವಳು' ಸಿನೆಮಾದ ಅದ್ಭುತ ನಟನೆಗೆ ರಾಷ್ಟ್ರಪ್ರಶಸ್ತಿ ಪಡೆದು ಜನಪ್ರಿಯತೆಯ ಉತ್ತುಂಗಕ್ಕೇರಿದ ಸಂಚಾರಿ ವಿಜಯ್ ನಂತರ ಹಲವು ವಿಭಿನ್ನ ಪಾತ್ರಗಳನ್ನು ಪಡೆಯುತ್ತಾ ಬಂದಿದ್ದಾರೆ. 
ತಮ್ಮ ಮುಂದಿನ ಚಿತ್ರಗಳಲ್ಲಿ ವಿಭಿನ್ನ ಪಾತ್ರಗಳನ್ನು ನಿರ್ವಹಿಸುತ್ತಿರುವ ಬಗ್ಗೆ ಸಂತಸ ವ್ಯಕ್ತಪಡಿಸುವ ವಿಜಯ್ "ನನಗೆ ಸಿಕ್ಕಿರುವ ಗೌರವಕ್ಕೆ ನ್ಯಾಯ ಒದಗಿಸಲು ನಾನು ಶ್ರಮವಹಿಸಿದ್ದೇನೆ. ಅದೃಷ್ಟವಶಾತ್ ನಿರ್ದೇಶಕರು ವಿಭಿನ್ನ ಸ್ಕ್ರಿಪ್ಟ್ ಗಳೊಂದಿಗೆ ನನ್ನ ಬಳಿ ಬರುತ್ತಿದ್ದಾರೆ" ಎನ್ನುವ ನಟ "ಒಂದೇ ರೀತಿಯ ಪಾತ್ರಕ್ಕೆ ನನ್ನನ್ನು ಸೀಮಿತಗೊಳಿಸದಿರುವುದಕ್ಕೆ ನಾನು ಧನ್ಯ. ಪ್ರತಿ ಬಾರಿ ಹೊಸ ಸ್ಕ್ರಿಪ್ಟ್ ಬಂದಾಗ ವಿಭಿನ್ನ ಪಾತ್ರಕ್ಕೆ ಹೊರಳಿದಾಗ ಹೆಚ್ಚು ಬಲ ಬರುತ್ತದೆ" ಎನ್ನುತ್ತಾರೆ. 
ಅಮೃತ್ ಕುಮಾರ್ ನಿರ್ದೇಶನ 'ರಿಕ್ತ' ವಿಜಯ್ ಅವರ ಮೂರನೇ ಚಿತ್ರ.  ಈ ಸಿನೆಮಾದ ಪಾತ್ರದಲ್ಲಿ ವಿಭಿನ್ನ ಛಾಯೆಗಳಲ್ಲಿ ನಟಿಸಿರುವುದಾಗಿ ಹೇಳುವ ನಟ "ಮಗು, ಲವರ್ ಬಾಯ್, ಕುಡುಕನಾಗಿ ಕಾಣಿಸಿಕೊಳ್ಳಲಿದ್ದೇನೆ" ಎನ್ನುತ್ತಾರೆ. "ಆದರೆ ನಾನು ದೆವ್ವವಾಗಿ ಕಾಣಿಸಿಕೊಳ್ಳುವುದು ಉತ್ತಮ ಭಾಗ" ಎನ್ನುವ ಅವರು "ನನಗೆ ಮನುಷ್ಯರನ್ನು ಕಂಡರೆ ಭಯ, ಸಿನೆಮಾದಲ್ಲಿ ಅದೇ ತಿರುವು " ಎಂದು ತಿಳಿಸುವ ವಿಜಯ್ ಇದು ಸಂಪೂರ್ಣ ಮನರಂಜನಾ ಚಿತ್ರ ಎನ್ನುತ್ತಾರೆ. 
'ರಿಕ್ತ' ಸಿನೆಮಾದಲ್ಲಿ ವಾಗ್ದೇವಿ ಅದ್ವಿಕಾ ಮತ್ತು ರಮ್ಯಾ ವರ್ಷಿಣಿ ಕೂಡ ತಾರಾಗಣದ ಭಾಗವಾಗಿದ್ದಾರೆ. ರಾಕಿ ಸೋನು ಸಂಗೀತ ನೀಡಿದ್ದು, ಮುರಳೀಧರ್ ಅವರ ಸಿನೆಮ್ಯಾಟೋಗ್ರಫಿ ಚಿತ್ರಕ್ಕಿದೆ.  

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಉಪ ಚುನಾವಣೆ ಫಲಿತಾಂಶ| ಅಸ್ಸಾಂ, ಪ.ಬಂಗಾಳ, ತಮಿಳುನಾಡು, ಪುದುಚೇರಿಯ ಆರು ಕ್ಷೇತ್ರಗಳಲ್ಲಿ ಮತ ಎಣಿಕೆ ಪ್ರಗತಿಯಲ್ಲಿ

Sting operation ಮೂಲಕ ನಿಮ್ಮನ್ನು ಸಿಲುಕಿಸಲು ಯತ್ನಿಸಿರುವುದು ನಿಜವೇ ಆಗಿದ್ದರೆ ತನಿಖೆಗೆ ಆದೇಶಿಸಿ: ಸಿಎಂ ಡಿಕೆ.ಶಿವಕುಮಾರ್'ಗೆ HDK ಸವಾಲು

ಮತ ಕಳ್ಳತನದಿಂದಲೇ ಮೋದಿ ಪ್ರಧಾನಿಯಾಗಿದ್ದು, ಗೆಲ್ಲಲಾಗದ ರಾಜ್ಯಗಳಲ್ಲೂ BJP ಗೆಲುವು: ಅಭಿಜೀತ್ ದೀಪ್ಕೆ

ರಾಜ್ಯದ ಬಾಕಿ ಹಣದ ಬಗ್ಗೆ ನಿರ್ಮಲಾ ಸೀತಾರಾಮನ್ ಜೊತೆ ಚರ್ಚೆ: GST ಮಂಡಳಿ ಸಭೆ ಬಳಿಕ CM ಡಿಕೆ.ಶಿವಕುಮಾರ್ ಹರ್ಷ

ಉತ್ತರ ಭಾರತ ವ್ಯಕ್ತಿಯಿಂದ ಡಿಕೆಶಿ ಸಿಲುಕಿಸಲು ಯತ್ನ: ಸಚಿವ ಸತೀಶ್ ಜಾರಕಿಹೊಳಿ