ಕಾವ್ಯಾ ಮಾಧವನ್ 
ಸಿನಿಮಾ ಸುದ್ದಿ

ಫೇಸ್ ಬುಕ್ ನಲ್ಲಿ ಆಕ್ಷೇಪಾರ್ಹ ಕಮೆಂಟ್ಸ್: ದೂರು ದಾಖಲಿಸಿದ ನಟಿ ಕಾವ್ಯಾ ಮಾಧವನ್

ಮಲಯಾಳಂ ನಟ ದಿಲೀಪ್ ಜೊತೆ ನಟಿ ಕಾವ್ಯಾ ಮಾಧವನ್ ವಿವಾಹದ ನಂತರ ಫೇಸ್ ಬುಕ್ ನಲ್ಲಿ ಆಕ್ಷೇಪಾರ್ಹ ಕಮೆಂಟ್ಸ್ ಹಾಕುತ್ತಿರುವವರ ವಿರುದ್ಧ ಕ್ರಮ ...

ಕೊಚ್ಚಿ: ಮಲಯಾಳಂ ನಟ ದಿಲೀಪ್ ಜೊತೆ ನಟಿ ಕಾವ್ಯಾ ಮಾಧವನ್ ವಿವಾಹದ ನಂತರ ಫೇಸ್ ಬುಕ್ ನಲ್ಲಿ ಆಕ್ಷೇಪಾರ್ಹ ಕಮೆಂಟ್ಸ್ ಹಾಕುತ್ತಿರುವವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ನಟಿ ಕಾವ್ಯಾ ಕೊಚ್ಚಿ ಪೊಲೀಸರಿಗೆ ದೂರು ದಾಖಲಿಸಿದ್ದಾರೆ.

ವಿವಾಹದ ನಂತರ ಕಾವ್ಯಾ ಮಾಧವನ್ ಅವರ ಡಿಸೈನ್ ವೆಂಚ್ಯೂರ್ ಲಕ್ಷ್ಯ.ಕಾಮ್ ನಲ್ಲಿ ಸಾಗರೋಪಾದಿಯಲ್ಲಿ ನಿಂದನಾತ್ಮಕ ಕಾಮೆಂಟ್ಸ್ ಗಳು ಬರುತ್ತಿವೆ ಎಂದು ಬರುತ್ತಿವೆ, ಈ ಬಗ್ಗೆ ತನಿಖೆ ನಡೆಸಬೇಕು ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಎರ್ನಾಕುಲಂ ಪ್ರದೇಶದ ಐಜಿಗೆ ಕಾವ್ಯ ದೂರು ನೀಡಿದ್ದಾರೆ. ಪೊಲೀಸರು ಮಂಗಳವಾರ ಕಾವ್ಯಾ ಮಾಧವನ್ ಅವರ ಹೇಳಿಕೆಯನ್ನು ದಾಖಲಿಸಿಕೊಂಡಿದ್ದಾರೆ.

ಕೆಲ ವರ್ಷಗಳ ಹಿಂದೆ ಕಾವ್ಯ ಸಾಮಾಜಿಕ ಮಾಧ್ಯಮಗಳಲ್ಲಿ ಆಕೆಯ ವಿರುದ್ಧ  ಪೊಸ್ಟ್ ಗಳನ್ನು ಹಾಕುತ್ತಿದ್ದರು. ಆಗ ಕಾವ್ಯ ಏಕಾಂಗಿ ಹೋರಾಟ ನಡೆಸಿದ್ದರು. ಆದರೆ ನವೆಂಬರ್ 25 ರಂದು ನಟ ದಿಲೀಪ್ ಜೊತೆ ವಿವಾಹವಾದ ನಂತರ ಆಕೆಯ ಸಾಮಾಜಿಕ ಮಾಧ್ಯಮದ ಪ್ರೊಫೈಲ್ ನಲ್ಲಿ  ಇಬ್ಬರು ವಿರುದ್ಧ ಆಕ್ಷೇಪಾರ್ಹ ಕಮೆಂಟ್ಸ್ ಹಾಕಲಾಗುತ್ತಿದೆ.

ಕಳೆದ ವರ್ಷ ಕಾವ್ಯ ಮಾಧವನ್ ಹೆಸರಿನಲ್ಲಿ ನಕಲಿ ಫೇಸ್ ಬುಕ್ ಅಕೌಂಟ್ ನಡೆಸುತ್ತಿದ್ದ ವ್ಯಕ್ತಿಯನ್ನು  ಕೊಚ್ಚಿ ಪೊಲೀಸರು ಬಂಧಿಸಿದ್ದರು. ಆತನನ್ನು ವಿಚಾರಣೆ ನಡೆಸಿದಾಗ  ಆತ ವಿವಿಧ ಹೆಸರುಗಳಲ್ಲಿ 12 ಕ್ಕೂ ಹೆಚ್ಚು ನಕಲಿ ಫೇಸ್ ಬುಕ್ ಅಕೌಂಟ್ ಹೊಂದಿರುವುದು ತಿಳಿದು ಬಂತು.

ಫೇಸ್ ಬುಕ್ ಮುಖಾಂತರ ತನ್ನ ವಯಕ್ತಿಕ ಜೀವನದ ಬಗ್ಗೆ ಇಲ್ಲ ಸಲ್ಲದ ಸುಳ್ಳು ಸುದ್ದಿ ಹಬ್ಬಿಸುತ್ತಿರುವುದರ ವಿರುದ್ಧ ಕಾವ್ಯಾ ದೂರು ದಾಖಲಿಸಿದ್ದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಹದಗೆಟ್ಟ ದೆಹಲಿ ವಾಯು ಗುಣಮಟ್ಟ; AQI 498ಕ್ಕೆ ಏರಿಕೆ; ವಿಮಾನ ನಿಲ್ದಾಣದಿಂದ ಪ್ರಯಾಣಿಕರಿಗೆ ಸಲಹೆ

ದಟ್ಟವಾದ ಮಂಜು- ಹೊಗೆಯಿಂದ ಹಾರದ ವಿಮಾನ: ಶಾಮನೂರು ಅಂತಿಮ ದರ್ಶನಕ್ಕೆ ಹೊರಟಿದ್ದ ರಾಜ್ಯದ 21 ಶಾಸಕರು ಲಾಕ್!

ಪೋಕ್ಸೊ ಪ್ರಕರಣ: ಮುರುಘಾ ಶ್ರೀ ಖುಲಾಸೆ ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದ ಸಂತ್ರಸ್ತೆ

GOATS meet: ಇಂದು ದೆಹಲಿಯಲ್ಲಿ ಮೆಸ್ಸಿ ಮೇನಿಯಾ; ಹ್ಯಾಂಡ್‌ಶೇಕ್‌ಗೆ 1 ಕೋಟಿ ರೂ., ಭಾರಿ ಭದ್ರತೆ

ವಾಂಖೆಡೆ ಸ್ಟೇಡಿಯಂ: ಮೆಸ್ಸಿ ಕಾರ್ಯಕ್ರಮದಲ್ಲಿ ಅಜಯ್ ದೇವಗನ್, ಟೈಗರ್ ಶ್ರಾಫ್ ಗೆ Booing! ಕಾರಣವೇನು ಗೊತ್ತಾ? Video ನೋಡಿ..

SCROLL FOR NEXT