ಹಾಲಿವುಡ್ ಖ್ಯಾತ ನಟ ಜಾಕಿ ಚಾನ್ 
ಸಿನಿಮಾ ಸುದ್ದಿ

ಬಾಲಿವುಡ್ ನೃತ್ಯ ಬಹುಷಃ ವಿಶ್ವದಲ್ಲೇ ಉತ್ತಮ: ಜಾಕಿ ಚಾನ್

ಹಾಲಿವುಡ್ ಖ್ಯಾತ ನಟ ಜಾಕಿ ಚಾನ್ ತಮ್ಮ ಮುಂದಿನ ಚಿತ್ರ 'ಕುಂಗ್ ಫು ಯೋಗ' ಸಿನೆಮಾ ಪ್ರಚಾರಕ್ಕಾಗಿ ಭಾರತ ಪ್ರವಾಸ ಬೆಳೆಸಿದ್ದು, ಬಾಲಿವುಡ್ ನೃತ್ಯದ ಬಗ್ಗೆ ಪ್ರಶಂಸೆಯ ಮಾತುಗಳನ್ನಾಡಿದ್ದಾರೆ.

ಮುಂಬೈ: ಹಾಲಿವುಡ್ ಖ್ಯಾತ ನಟ ಜಾಕಿ ಚಾನ್ ತಮ್ಮ ಮುಂದಿನ ಚಿತ್ರ 'ಕುಂಗ್ ಫು ಯೋಗ' ಸಿನೆಮಾ ಪ್ರಚಾರಕ್ಕಾಗಿ ಭಾರತ ಪ್ರವಾಸ ಬೆಳೆಸಿದ್ದು, ಬಾಲಿವುಡ್ ನೃತ್ಯದ ಬಗ್ಗೆ ಪ್ರಶಂಸೆಯ ಮಾತುಗಳನ್ನಾಡಿದ್ದಾರೆ. 
"ನಾನು ನನ್ನ ೧೬ ನೆಯ ವಯಸ್ಸಿನಲ್ಲಿ ಬಾಲಿವುಡ್ ಸಿನೆಮಾಗಳನ್ನು ನೋಡುತ್ತಿದ್ದೆ. ನನಗೆ ಭಾಷೆ ಅರ್ಥವಾಗುತ್ತಿರಲಿಲ್ಲ, ಅದಕ್ಕೆ ನೃತ್ಯ ನೋಡಿ ಹೊರಬರುತ್ತಿದ್ದೆ. ೧೫ ವರ್ಷಗಳಿಂದ ಹಿಂದಿ ಸಿನೆಮಾಗಳನ್ನು ನೋಡುತ್ತಿದ್ದೇನೆ.. ಏಕೆ? ನೃತ್ಯಕ್ಕಾಗಿ, ಬಹುಷಃ ಇದು ವಿಶ್ವದಲ್ಲೇ ಉತ್ತಮ" ಎಂದು ಚಾನ್ ಕಾರ್ಯಕ್ರಮವೊಂದರಲ್ಲಿ ಸೋಮವಾರ ಹೇಳಿದ್ದಾರೆ. 
"ಈ ಹಿಂದ ಬಾಲಿವುಡ್ ಮತ್ತು ಚೈನೀಸ್ ಸಿನೆಮಾಗಳಲ್ಲಿ ಆಕ್ಷನ್ ಮತ್ತು ನೃತ್ಯ ಅತ್ಯತ್ತಮ ಮಟ್ಟದ್ದಾಗಿರಲಿಲ್ಲ. ಆದರೆ ಈಗ ನಮ್ಮ ಬಳಿ ಹಣ ಮತ್ತು ತಂತ್ರಜ್ಞಾನ ಇದೆ ಮತ್ತು ಜನರಿಗೆ ತರಬೇತಿ ನೀಡಬಹುದಾಗಿದೆ. ಸದ್ಯಕ್ಕೆ ಬಾಲಿವುಡ್ ಏಷಿಯಾದ ಕೆಲವು ಅತ್ಯುತ್ತಮ ಸಿನೆಮಾಗಳನ್ನು ನಿರ್ಮಿಸುತ್ತಿದೆ" ಎಂದು ಕೂಡ ಅವರು ಹೇಳಿದ್ದಾರೆ. 
ಐದು ದಶಕಗಳಿಂದ ಚಾನ್ ಸಿನೆಮಾಗಳಲ್ಲಿ ನಟಿಸುತ್ತಿದ್ದಾರೆ. "ನೀವೆಲ್ಲಾ ನನ್ನ ಸಿನೆಮಾಗಳನ್ನು ನೋಡುತ್ತಾ ಬೆಳೆದಿದ್ದೀರಿ. ನಿಮ್ಮ ತಂದೆ ನನ್ನ ಸಿನೆಮಾ ನೋಡಲು ಕರೆದೊಯ್ಯುತ್ತಿದ್ದರು. ಈಗ ನೀವು ನಿಮ್ಮ ಪೋಷಕರನ್ನು ನನ್ನ ಸಿನೆಮಾ ನೋಡಲು ಕರೆದೊಯ್ಯಬೇಕು" ಎಂದು ಚಾನ್ ಹೇಳಿದ್ದಾರೆ. 
ಭಾರತೀಯರ ಬಗ್ಗೆ ತಮಗೆ ಅಪಾರ ಪ್ರೀತಿ ಇದೆ ಎಂದು ತಿಳಿಸಿರುವ ಅವರು "ಭಾರತೀಯರು ನನ್ನನ್ನು ಪ್ರೀತಿಸುತ್ತಾರೆ ಎಂದು ತಿಳಿದಿದ್ದೇನೆ ಮತ್ತು ನಾನು ಅವರನ್ನು ಕೂಡ. ನಾನಿಲ್ಲಿಗೆ ಸಿನೆಮಾಗಳನ್ನು ಮಾಡಲು, ಧರ್ಮಾರ್ಥ ಕಾರ್ಯಗಳಿಗಾಗಿ ಮತ್ತು ಸಿನೆಮೋತ್ಸವಗಳಿಗಾಗಿ ಬರುತ್ತಿರುತ್ತೇನೆ ಏಕೆಂದರೆ ನಿಮ್ಮೆಲ್ಲರನ್ನು ನಾನು ಪ್ರೀತಿಸುತ್ತೇನೆ" ಎಂದಿದ್ದಾರೆ ಚಾನ್. 
ಸ್ಟಾನ್ಲಿ ಟಾಂಗ್ ನಿರ್ದೇಶನದ 'ಕುಂಗ್ ಫು ಯೋಗ' ಸಿನೆಮಾದಲ್ಲಿ ಸೋನು ಸೂದ್, ದಿಶಾ ಪಠಾಣಿ ಮುಂತಾದವರು ನಟಿಸಿದ್ದು ಭಾರತದಲ್ಲಿ ಫೆಬ್ರವರಿ ೩ ಕ್ಕೆ ಮತ್ತು ಚೀನಾದಲ್ಲಿ ಜನವರಿ ೨೮ ಕ್ಕೆ ಬಿಡುಗಡೆಯಾಗಲಿದೆ.  

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

60 ದಿನಗಳ ಕದನ ವಿರಾಮ ವಿಸ್ತರಣೆಗೆ ಅಮೆರಿಕ, ಇರಾನ್ ಸಂಧಾನಕಾರರು ಒಪ್ಪಿಗೆ; ಟ್ರಂಪ್ ಅನುಮೋದನೆ ಬಾಕಿ

ಕರ್ನಾಟಕ ನಾಯಕತ್ವ ಬದಲಾವಣೆಯ ನಡುವೆ CM ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಮತ್ತೆ ದೆಹಲಿಗೆ

ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ಶನಿವಾರ; ತದನಂತರ ನೂತನ ಸಿಎಂ ಪದಗ್ರಹಣ ಸಾಧ್ಯತೆ!

ಕ್ರೇಜಿಸ್ಟಾರ್ ರವಿಚಂದ್ರನ್ ವಿರುದ್ಧವೇ ಅತ್ಯಾಚಾರ ಯತ್ನ ಆರೋಪ, ಮಾನನಷ್ಟ ಮೊಕದ್ದಮೆ: ಕಣ್ಣೀರಿಟ್ಟು ಕ್ಷಮೆ ಕೇಳಿದ 'ಹಳ್ಳಿಮೇಷ್ಟ್ರು' ನಟಿ Bindiya!

Karnataka CM News LIVE Updates | ಸಿದ್ದರಾಮಯ್ಯ, ಡಿ.ಕೆ ಶಿವಕುಮಾರ್ ದೆಹಲಿಗೆ ಪ್ರಯಾಣ; ಸಿಎಲ್‌ಪಿ ಸಭೆ ಶನಿವಾರ ಸಾಧ್ಯತೆ!

SCROLL FOR NEXT