'ಸ್ಮೈಲ್ ಪ್ಲೀಸ್' ನಟ ಗುರುನಂದನ್ ಅವರಿಗೆ ಶುಭ ಕೋರಿದ ಶಿವರಾಜ್ ಕುಮಾರ್ 
ಸಿನಿಮಾ ಸುದ್ದಿ

'ಸ್ಮೈಲ್ ಪ್ಲೀಸ್' ಎಂದ ಸ್ಯಾಂಡಲ್ವುಡ್ ತಾರೆಯರು

ಚೊಚ್ಚಲ ಚಲನಚಿತ್ರ '೧ಸ್ಟ್ ರ್ಯಾಂಕ್ ರಾಜು' ಸಿನೆಮಾದ ಮೂಲಕ ಗಮನ ಸೆಳೆದ ನಟ ಗುರುನಂದನ್ ಈಗ ತಮ್ಮ ಎರಡನೇ ಚಿತ್ರದ ಬಿಡುಗಡೆಗೆ ಸಜ್ಜಾಗುತ್ತಿದ್ದಾರೆ.

ಬೆಂಗಳೂರು: ಚೊಚ್ಚಲ ಚಲನಚಿತ್ರ '೧ಸ್ಟ್ ರ್ಯಾಂಕ್ ರಾಜು' ಸಿನೆಮಾದ ಮೂಲಕ ಗಮನ ಸೆಳೆದ ನಟ ಗುರುನಂದನ್ ಈಗ ತಮ್ಮ ಎರಡನೇ ಚಿತ್ರದ ಬಿಡುಗಡೆಗೆ ಸಜ್ಜಾಗುತ್ತಿದ್ದಾರೆ. 
ಈ ಎರಡನೇ ಸಿನೆಮಾದ ಹೆಸರು 'ಸ್ಮೈಲ್ ಪ್ಲೀಸ್' ಎಂದಿದ್ದು, ರಘು ಸಮರ್ಥ್ ಈ ಸಿನೆಮಾದ ಮೂಲಕ ನಿರ್ದೇಶಕನಾಗಿ ಪಾದಾರ್ಪಣೆ ಮಾಡಿ ಪರೀಕ್ಷೆಗೆ ಒಡ್ಡಿಕೊಂಡಿದ್ದಾರೆ. ಈ ವಾರ ಈ ಸಿನೆಮಾ ಸೆನ್ಸಾರ್ ಮಂಡಳಿ ಎದುರಿಗೆ ಬರಲಿದ್ದು, ಸಿನೆಮಾದ ಒಂದು ದೃಶ್ಯ ಗಾಂಧಿನಗರದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಗುರುನಂದನ್ ಮತ್ತು ನಟಿ ಕಾವ್ಯ ಶೆಟ್ಟಿ ನಡುವಿನ ಚುಂಬನದ ದೃಶ್ಯ ಇದು!
'ಸ್ಮೈಲ್ ಪ್ಲೀಸ್' ಕೌಟುಂಬಿಕ ಮನರಂಜನಾ ಚಿತ್ರವಾಗಿದ್ದು, ಈ ಚುಂಬನ ದೃಶ್ಯ ಕುತೂಹಲಕ್ಕೆ ಎಡೆ ಮಾಡಿಕೊಟ್ಟಿದೆ. "ಚುಂಬಿಸುವುದು ಜನರ ನಡುವಿನ ಸಂಬಂಧವನ್ನು ಜೀವಂತವಾಗಿ ಇಟ್ಟಿರುತ್ತದೆ ಎಂದು ಎಲ್ಲರು ಒಪ್ಪಿಕೊಳ್ಳುತ್ತಾರೆ ಎಂದು ನಾನು ನಂಬಿದ್ದೇನೆ ಮತ್ತು ಪ್ರೇಕ್ಷಕರು ಸಿನೆಮಾ ನೋಡಿದ ಮೇಲೆ ಇದನ್ನು ಒಪ್ಪಿಕೊಳ್ಳಲಿದ್ದಾರೆ. ಇದು ಬಹಳ ಅವಶ್ಯಕವಾದ ದೃಶ್ಯವಾಗಿತ್ತು, ಮತ್ತು ಇದು ಇರದೇ ಸಿನೆಮಾ ಸಂಪೂರ್ಣಗೊಳ್ಳುತ್ತಿರಲಿಲ್ಲ" ಎನ್ನುತ್ತಾರೆ ನಟ ಗುರುನಂದನ್. 
ಈ ಮಧ್ಯೆ ಕನ್ನಡ ಚಿತ್ರರಂಗದ ತಾರೆಯರು ಸ್ಮೈಲ್ ಮಾಡುವ ಮೂಲಕ ಚಿತ್ರಕ್ಕೆ ಶುಭ ಹಾರೈಸುತ್ತಿದ್ದಾರೆ. ಕೆ ಮಂಜು ನಿರ್ಮಾಣದ ಈ ಚಿತ್ರ ಫೆಬ್ರವರು ೧೦ ಕ್ಕೆ ಬಿಡುಗಡೆಯಾಗಲಿದೆ. ನೇಹಾ ಪಾಟೀಲ್, ರಂಗಾಯಣ ರಘು, ಶ್ರೀನಿವಾಸ ಪ್ರಭು, ಸುಧಾ ಬೆಳವಾಡಿ ಮತ್ತು ಅರುಣ್ ಬಾಲರಾಜ್ ಕೂಡ ತಾರಾಗಣದ ಭಾಗವಾಗಿದ್ದಾರೆ.  

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT