ಸಿನಿಮಾ ಸುದ್ದಿ

ಕೊರೆಯುವ ಚಳಿಗೆ ಸವಾಲೆಸೆದ 'ಲೀಡರ್'

Guruprasad Narayana
ಬೆಂಗಳೂರು: ನರಸಿಂಹ ನಿರ್ದೇಶನದ ಶಿವಾರಾಜ್ ಕುಮಾರ್ ನಾಯಕ ನಟನಾಗಿ ಅಭಿನಯಿಸುತ್ತಿರುವ 'ಲೀಡರ್' ಕಾಶ್ಮೀರದಲ್ಲಿ ಚಿತ್ರೀಕರಣ ನಡೆಸಲು ಸಾಕಷ್ಟು ಹಸರಸಾಹಸ ಪಡಬೇಕಾಯಿತಂತೆ. ಈಗ ಸದ್ಯಕ್ಕೆ ಕಾಶ್ಮೀರದ ಗುಲ್ಮಾರ್ಗ್ ನಲ್ಲಿ ಚಿತ್ರತಂಡ ೧೬ ದಿನಗಳ ಚಿತ್ರೀಕರಣಕ್ಕಾಗಿ ಬೀಡುಬಿಟ್ಟಿದೆ. ನಾವು ಮೊದಲಿಗೆ ಮನಾಲಿಯಲ್ಲಿ ಚಿತ್ರೀಕರಣ ನಡೆಸಲು ನಿಶ್ಚಯಿಸಿದ್ದೆವು ಆದರೆ ವಿಪರೀತ ಗಾಳಿಯಿಂದಾಗಿ ನಮ್ಮ ಯೋಜನೆಯನ್ನು ಬದಲಿಸಕೊಳ್ಳಬೇಕಾಯಿತು ಎನ್ನುತ್ತಾರೆ ಚಿತ್ರತಂಡದ ಸದಸ್ಯರೊಬ್ಬರು. 
"ನಮ್ಮ ಚಿತ್ರೀಕರಣಕ್ಕೆ ಹವಾಮಾನ ಸಹಕರಿಸಲಿಲ್ಲ ಆದುದರಿಂದ ನಾವು ಕಾಶ್ಮೀರಕ್ಕೆ ಹೋಗಬೇಕಾಯಿತು" ಎನ್ನುತ್ತಾರೆ ತರುಣ್. ಶಿವರಾಜ್ ಕುಮಾರ್, ವಿಜಯ್ ರಾಘವೇಂದ್ರ, ಗುರು ಜಗ್ಗೇಶ್, ಪ್ರಣೀತ ಸುಭಾಷ್, ಆಶಿಕಾ ರಂಗನಾಥ್ , ಸುಧಾ ಬೆಳವಾಡಿ ಮತ್ತು ಕೃಷ್ಣ ವಂಶಿ ಮತ್ತಿತರು ಸೇರಿದಂತೆ ಚಿತ್ರತಂಡದಲ್ಲಿ ೧೧೦ ಸದಸ್ಯರಿದ್ದಾರಂತೆ. 
ಎಚ್ಚರಿಕೆಯ ನಡುವೆ ಕಾಶ್ಮೀರದಲ್ಲಿ ಚಿತ್ರೀಕರಣಕ್ಕೆ ಇಳಿದಿರುವ ತಂಡ, ವೈಪರೀತ್ಯ ಹವಾಮಾನದ ನಡುವೆ ಕೂಡ ಕೆಲಸ ಮಾಡುತ್ತಿದೆ. ಗುಲ್ಮಾರ್ಗ್ ನಲ್ಲಿ ಉಷ್ಣಾಂಶ -೧೫ ಡಿಗ್ರಿ ಸೆಲ್ಸಿಯಶ್ ಗೆ ಇಳಿದಿದೆ ಎಂದು ನಿರ್ಮಾಣ ಸಂಸ್ಥೆ ಚಿತ್ರತಂಡಕ್ಕೆ ತಿಳಿಸಿದೆ. 
"ನಾವು ಎಲ್ಲದ್ದಕ್ಕೂ ಎಚ್ಚರಿಕೆ ತೆಗೆದುಕೊಂಡಿದ್ದೇವೆ. ಗುಲ್ಮಾರ್ ಪ್ರವಾಸಿ ಕೇಂದ್ರ ಆಗಿರುವುದರಿಂದ ಅದು ಸುರಕ್ಷಿತ ಎಂದು ನಮ್ಮ ಪ್ರವಾಸಿ ಮಾರ್ಗದರ್ಶಿ ಹೇಳಿದ್ದಾರೆ. ಆದುದರಿಂದ ನಾವು ಇಲ್ಲಿ ಚಿತ್ರೀಕರಣ ನಡೆಸಲು ಮುಂದುವರೆದಿದ್ದೇವೆ" ಎನ್ನುತ್ತಾರೆ ತರುಣ್. 
ಚಿತ್ರತಂಡ ಬೀಡು ಬಿಟ್ಟಿರುವ ಸ್ಥಳ ಮಿಲಿಟರಿ ಕ್ಯಾಂಪ್ ಗಳಿಂದ ಸುತ್ತುವರೆದಿದ್ದು, ಪೊಲೀಸ್ ರಕ್ಷಣೆ ನಡುವೆ ನಾವು ಚಿತ್ರೀಕರಣ ನಡೆಸಲಿದ್ದೇವೆ ಎಂದು ನಮಗೆ ತಿಳಿಸಿದ್ದಾರೆ ಎಂದಿದ್ದಾರೆ ತರುಣ್.  
SCROLL FOR NEXT