ಹೆಬ್ಬುಲಿ ಚಿತ್ರದ 3ಡಿ ಗೇಮ್ 
ಸಿನಿಮಾ ಸುದ್ದಿ

"ಹೆಬ್ಬುಲಿ" ಪ್ರಚಾರಕ್ಕೆ ನೆರವಾದ ಅಭಿಮಾನಿಗಳ 3ಡಿ ಗೇಮ್!

ನಟ ಸುದೀಪ್ ಅಭಿನಯದ ಬಹು ನಿರೀಕ್ಷಿತ ಚಿತ್ರ ಹೆಬ್ಬುಲಿಗಾಗಿ ಅಭಿಮಾನಿಗಳು ಕಾತರದಿಂದ ಕಾಯುತ್ತಿರುವಂತೆಯೇ ಇತ್ತ ಕೆಲ ಸಾಫ್ಟ್ ವೇರಿ ಉದ್ಯೋಗಿಗಳು ಹೆಬ್ಬುಲಿ ಚಿತ್ರ ಕುರಿತ ಗೇಮ್ ಅನ್ನು ಬಿಡುಗಡೆ ಮಾಡುವ ಮೂಲಕ ಹೊಸ ಮಾದರಿಯ ಪ್ರಚಾರಕ್ಕೆ ಮುನ್ನುಡಿ ಬರೆದಿದ್ದಾರೆ.

ಬೆಂಗಳೂರು: ನಟ ಸುದೀಪ್ ಅಭಿನಯದ ಬಹು ನಿರೀಕ್ಷಿತ ಚಿತ್ರ ಹೆಬ್ಬುಲಿಗಾಗಿ ಅಭಿಮಾನಿಗಳು ಕಾತರದಿಂದ ಕಾಯುತ್ತಿರುವಂತೆಯೇ ಇತ್ತ ಕೆಲ ಸಾಫ್ಟ್ ವೇರಿ ಉದ್ಯೋಗಿಗಳು ಹೆಬ್ಬುಲಿ ಚಿತ್ರ ಕುರಿತ ಗೇಮ್ ಅನ್ನು ಬಿಡುಗಡೆ  ಮಾಡುವ ಮೂಲಕ ಹೊಸ ಮಾದರಿಯ ಪ್ರಚಾರಕ್ಕೆ ಮುನ್ನುಡಿ ಬರೆದಿದ್ದಾರೆ.

ಹೆಬ್ಬುಲಿ ಚಿತ್ರದಲ್ಲಿ ಭಿನ್ನ ಹೇರ್‌ ಸ್ಟೈಲ್‌ನೊಂದಿಗೆ ಕಮಾಂಡೋ ಪಾತ್ರದಲ್ಲಿ ಕಾಣಿಸಿಕೊಂಡಿರುವ ಸುದೀಪ್ ಇದೀಗ ಮೊಬೈಲ್ ನಲ್ಲಿ ಗೇಮ್ ಮೂಲಕ ಕಾಣಸಿಗಲಿದ್ದಾರೆ. ಸುದೀಪ್ ಅವರ ಕಟ್ಟಾ ಅಭಿಮಾನಿ ಹಾಗೂ ವಿಷುವಲ್  ಗ್ರಾಫಿಕ್ಸ್ ಆರ್ಟಿಸ್ಟ್ ಸಂತೋಷ್ ಡಿವಿ ಎಂಬುವವರು ಈ ವಿಶಿಷ್ಟ ಗೇಮ್ ಅನ್ನು ತಯಾರಿಸಿದ್ದು, ಇದೀಗ ಈ ಗೇಮ್ ಭಾರಿ ಪ್ರಚಾರ ಪಡೆಯುತ್ತಿದೆ ಮತ್ತು ಹೆಬ್ಬುಲಿಗೆ ಗೇಮ್ ಮೂಲಕ ಪ್ರಚಾರ ನೀಡುತ್ತಿದೆ.

ಈ ಹಿಂದೆ ತನ್ನ ಕೆಲವು ಸ್ನೇಹಿತರ ತಂಡದೊಂದಿಗೆ ಸ್ಟಾರ್ಟ್ ಅಪ್ ಸಂಸ್ಥೆಯೊಂದನ್ನು ಆರಂಭಿಸಿದ್ದ ಸಂತೋಷ್ ತಮ್ಮ ಮೊದಲ ಪ್ರಾಡೆಕ್ಟ್ ಆಗಿ ಹೆಬ್ಬುಲಿ 3ಡಿ ಗೇಮ್ ಅನ್ನು ತಯಾರಿಸಿದ್ದಾರೆ. ಹೆಬ್ಬುಲಿ ಚಿತ್ರ ತೆರೆಕಾಣುವ ಮೊದಲೇ  ಈ ವಿಶಿಷ್ಟ ಗೇಮ್ ಬಿಡುಗಡೆ ಮಾಡುವ ಕುರಿತು ಸಂತೋಷ್ ಮತ್ತು ತಂಡ ಚಿಂತನೆ ನಡೆಸಿದೆ.

ಈ ಬಗ್ಗೆ ಮಾತನಾಡಿರುವ ಅಭಿಮಾನಿ ಸಂತೋಷ್ "ಸುದೀಪ್ ಅಣ್ಣನ ದೊಡ್ಡ ಅಭಿಮಾನಿ ನಾನು. ಹೀಗಾಗಿ ಅವರ ಬಹು ನಿರೀಕ್ಷಿತ ಚಿತ್ರ ಹೆಬ್ಬುಲಿಗಾಗಿ ಏನಾದರೂ ಮಾಡಬೇಕು ಎಂಬ ಹಂಬಲ ಮೊದಲಿನಿಂದಲೂ ಇತ್ತು. ಹೀಗಾಗಿ  ನನ್ನ 13 ಸ್ನೇಹಿತರ ಜೊತೆಗೂಡಿ ಒಂದು ಸ್ಟಾರ್ಟ್ ಅಪ್ ಆರಂಭಿಸಿದ್ದೇನೆ. ಅದರ ಮೂಲಕ ಹೆಬ್ಬುಲಿ ಚಿತ್ರದ ಗೇಮ್ ಅನ್ನು ಸಿದ್ಧಪಡಿಸಿದ್ದೇವೆ. ಹೆಬ್ಬುಲಿಯಲ್ಲಿ ಸುದೀಪ್ ಅಣ್ಣನ ಪಾತ್ರವನ್ನೇ ಹೋಲುವ ಕಮಾಂಡೋ ಪಾತ್ರಧಾರಿಯನ್ನು  ಬಳಕೆ ಮಾಡಿಕೊಂಡು ಸಾಹಸಮಯ ಗೇಮ್ ತಯಾರಿಸಿದ್ದೇವೆ. ಈ ಗೇಮ್ ತಯಾರಿಕೆಗೆ ಸುಮಾರು 25 ಲಕ್ಷ ರು.ಹಣ ಖರ್ಚಾಗಿದೆ. ಹಣದ ವೆಚ್ಚದ ಕುರಿತು ನಮಗೆ ಚಿಂತೆ ಇಲ್ಲ. ಆದರೆ ಗೇಮ್ ಅದ್ಬುತವಾಗಿ ಮೂಡಿಬರಬೇಕು  ಎನ್ನುವುದು ನಮ್ಮ ತಂಡದ ಆಶಯವಾಗಿದೆ ಎಂದು ಸಂತೋಷ್ ಹೇಳಿದ್ದಾರೆ.

ಅಂತೇಯ ಈ 3ಡಿ ಗೇಮ್ ಗೂಗಲ್ ಪ್ಲೇ ನಲ್ಲಿ ಲಭ್ಯವಿದ್ದು, ಇನ್ನೆರಡು ತಿಂಗಳಲ್ಲಿ ಇದರ ಅಪ್ ಡೇಟ್ ಕೂಡ ಲಭ್ಯವಾಗಲಿದೆ ಎಂದು ಸಂತೋಷ್ ಹೇಳಿದ್ದಾರೆ.

ಸುದೀಪ್‌ ಅಭಿನಯದ ‘ಹೆಬ್ಬುಲಿ’ ಚಿತ್ರದ ಆಡಿಯೋ ಬಿಡುಗಡೆಯನ್ನು ಇತ್ತೀಚೆಗೆ ದಾವಣಗೆರೆಯಲ್ಲಿ ಮಾಡಲಾಗಿತ್ತು. ಕ್ರೇಜಿಸ್ಟಾರ್‌ ರವಿಚಂದ್ರನ್‌, ನಟ ರವಿಕಿಶನ್‌, ಅಮಲಾ ಪೌಲ್‌ ಮುಂತಾದವರು ಚಿತ್ರದಲ್ಲಿ ಅಭಿನಯಿಸಿದ್ದು, ಚಿತ್ರ ಫೆಬ್ರವರಿ 23ರಂದು ತೆರೆ ಕಾಣುವ ಸಾಧ್ಯತೆ ಇದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಭಾರತಕ್ಕೆ ಭೇಟಿ ನೀಡುವಂತೆ ತಾರಿಕ್ ರೆಹಮಾನ್‌ಗೆ ಪ್ರಧಾನಿ ಮೋದಿ ಆಹ್ವಾನ!

AI ಇಂಪ್ಯಾಕ್ಟ್ ಶೃಂಗಸಭೆ ಟಾರ್ಗೆಟ್: ವಿದೇಶಿಗರಿಂದ ದಾಳಿ ಸಾಧ್ಯತೆ, ಗುಪ್ತಚರ ವರದಿ ಬೆನ್ನಲ್ಲೇ G20 ಗ್ರೇಡ್ ಸೈಬರ್ ಭದ್ರತಾ ವ್ಯವಸ್ಥೆ!

T20 World Cup 2026: ಸ್ಕಾಟ್ಲೆಂಡ್ ವಿರುದ್ಧ ನೇಪಾಳಕ್ಕೆ 7 ವಿಕೆಟ್ ಗಳ ಭರ್ಜರಿ ಜಯ!

ಭಾರತದಲ್ಲಿ ವಯಸ್ಸಿನ ಆಧಾರದ ಮೇಲೆ 'ಸಾಮಾಜಿಕ ಜಾಲತಾಣ ನಿಷೇಧ' ಕುರಿತು ಚರ್ಚೆ: ಅಶ್ವಿನಿ ವೈಷ್ಣವ್

'ಕರಾವಳಿ' ಹೂಡಿಕೆ ವಿವಾದ: ಪ್ರಿಯಾಂಕ್ ಖರ್ಗೆ ಸಹಜವಾಗಿ ಹೇಳಿದ್ದಾರೆ, ಆದರೆ ದಕ್ಷಿಣ ಕನ್ನಡ ಬದಲಾಗುತ್ತಿದೆ; ಪರಮೇಶ್ವರ್

SCROLL FOR NEXT