ಸಿನಿಮಾ ಸುದ್ದಿ

ಇಡೀ ಚಿತ್ರರಂಗ ಶೀಘ್ರದಲ್ಲಿಯೇ ಒಗ್ಗಟ್ಟಿನ ಧ್ವನಿ ಎತ್ತಲಿದೆ: ಕಮಲ್ ಹಾಸನ್

Guruprasad Narayana
ಚೆನ್ನೈ: ಹೊಸದಾಗಿ ಜಾರಿ ಮಾಡಿರುವ ತೆರಿಗೆ ನೀತಿ ಜಿ ಎಸ್ ಟಿಯಲ್ಲಿ ಮನರಂಜನಾ ತೆರಿಗೆಯನ್ನು ೩೦%ಗೆ ಏರಿಸಿರುವುದನ್ನು ವಿರೋಧಿಸಿ ತಮಿಳುನಾಡಿನ ಚಿತ್ರಮಂದಿರಗಳು ಬಂದ್ ಮಾಡುತ್ತಿರುವ ಹಿನ್ನಲೆಯಲ್ಲಿ, ತಮಿಳು ಚಿತ್ರರಂಗ ಒಗ್ಗೂಡಿದ ಧ್ವನಿಯಲ್ಲಿ ಮಾತನಾಡಲಿದೆ ಎಂದು ಸೋಮವಾರ ನಟ-ನಿರ್ದೇಶಕ ಕಮಲ್ ಹಾಸನ್ ಹೇಳಿದ್ದಾರೆ. 
ಸರಕು ಮತ್ತು ಸೇವಾ ತೆರಿಗೆ (ಜಿ ಎಸ್ ಟಿ) ಜುಲೈ ೧ ರಿಂದ ಜಾರಿಯಾಗಿದೆ. 
ಡಬ್ಬಿಂಗ್ ಸ್ಟುಡಿಯೋಗೆ ಚಾಲನೆ ನೀಡಿ ಮಾಧ್ಯಮದೊಂದಿಗೆ ಮಾತನಾಡಿದ ಕಮಲ್ "ಇಡೀ ಚಿತ್ರರಂಗ ಒಗ್ಗೂಡುತ್ತಿದೆ ಮತ್ತು ಶೀಘ್ರದಲ್ಲೆ ಒಂದೇ ಧ್ವನಿಯಲ್ಲಿ ಮಾತನಾಡಲಿದ್ದೇವೆ" ಎಂದಿದ್ದಾರೆ. 
ದ್ವಿಮುಖ ತೆರಿಗೆ ವಿರೋಧಿಸಿ ತಮಿಳುನಾಡಿನಾದ್ಯಂತ ಇಂದು ಚಿತ್ರಮಂದಿರ ಮಾಲೀಕರು ಬಂದ್ ಮಾಡಿ ಪ್ರತಿಭಟಿಸಿದ್ದಾರೆ. 
SCROLL FOR NEXT